ಒಂದು ವರ್ಷಗಳ ಕಾಲ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಒಕ್ಕೂಟ ಸರ್ಕಾರವು ರೈತರ ಹೋರಾಟಕ್ಕೆ ಮಣಿದಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು. ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಮನೆಗೆ ಹಿಂತಿರುಗಬೇಕು” ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಬೆಲೆ ನಿಗಧಿ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿಯವರು, “ರೈತರ ಒಂದು ವರ್ಷದ ಹೋರಾಟದ ಫಲವಾಗಿ ಕೊನೆಗೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಅದೇ ಕೇಂದ್ರದ ಹಾದಿಯನ್ನೇ ಅನುಸರಿಸಿ ತರಾತುರಿಯಲ್ಲಿ ರಾಜ್ಯದಲ್ಲೂ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆದಾಗ ಮಾತ್ರ ರಾಜ್ಯದ ರೈತರ ಹೋರಾಟಕ್ಕೆ ನಿಜವಾದ ಯಶಸ್ಸು ಸಿಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ತಿದ್ದುಪಡಿ ಮಾಡಿರುವ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳು ತರಾತುರಿಯಲ್ಲಿ ಅನುಷ್ಠಾನಗೊಂಡಿದೆ. ಶೇಕಡಾ 70 ರಿಂದ 80 ರಷ್ಟು ವಿವಿಧ ಬೆಳೆಗಳಲ್ಲಿ ಎಪಿಎಂಸಿ ಒಳಗಿನ ವ್ಯವಹಾರ ಈಗಾಗಲೇ ಕಡಿಮೆಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಶೇಕಡಾ 60 ಭೂಮಿಯ ವ್ಯವಹಾರ ಈ ಸಾರಿ ಅಧಿಕಗೊಂಡಿದೇ. ಕರ್ನಾಟಕದಲ್ಲಿ ಈ ಕಾಯ್ದೆಗಳು ವಾಪಾಸು ಬಂದಾಗ ಮಾತ್ರ ನಾವೆಲ್ಲ ಯಶಸ್ಸು ಅಂತ ಭಾವಿಸಬಹುದು ಎಂದು ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.
ಅಷ್ಟರೊಳಗೆ ಬಿಜೆಪಿ ರೈತಪರ ಅಂತ ತನ್ನ ಮುಖವಾಡ ಬದಲಾಯಿಸಿ ಚುನಾವಣಾ ರಾಜಕೀಯದ ಲಾಭ ಪಡೆಯಲು ಎಲ್ಲ ಪ್ರಯತ್ನ ಮಾಡಲಿದೆ, ಅನುಮಾನವೇ ಇಲ್ಲ. ಹಾಗೆ ಶೀಘ್ರ ತೋರುಗಾಣಿಕೆಗೆ ಬೆಂಬಲ ಬೆಲೆಗೆ ಕಾನೂನನ್ನು ತರಬಹುದು, ಜೊತೆಗೆ ಪ್ರಭಾವಿ ಕೆಲ ಮುಖಂಡರುಗಳನ್ನು ಸೆಳೆದುಕೊಳ್ಳುವುದುಬಹುದು. ಎಲ್ಲವುದರಲ್ಲೂ ರೈತ ಸಂಘಟನೆಗಳು ಎಚ್ಚರವಹಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ಒಂದು ವರ್ಷದ ಬಳಿಕ ಗೆದ್ದಿದ್ದೇವೆ. ಮೂರು ವಿವಾದಿತ ಕಾಯ್ದೆಗಳನ್ನು ವಾಪಸ್ ಪಡೆಯಲು ಮೋದಿ ಸರ್ಕಾರ ನಿರ್ಧರಿಸಿದೆ. ಇದು ರೈತರಿಗೆ ಸಂದ ಗೆಲುವು” ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಇದನ್ನೂ ಓದಿ; ವಿವಾದಿತ ಕೃಷಿ ಕಾಯ್ದೆಗಳು ರದ್ದು: ಕ್ಷಮೆಯಾಚಿಸಿದ ಮೋದಿ, ರೈತರ ಹೋರಾಟಕ್ಕೆ ಗೆಲುವು



ಹೊಸ ಕೃಷಿ ಕಾಯ್ದೆ ಯಿಂದ ಪಾಪ ಈ ಮುಟ್ಟಾಳರಿಗೆ ಬರ್ತಿದ್ದ ಕಮಿಷನ್ ನಿಂತುಹೋಗಿರಬೇಕು ಅನಿಸುತ್ತೆ ,ಮೊದಲು ಇವನಿಗೆ ಬರುತ್ತಿರುವ ಆದಾಯ ಮೂಲಗಳ ಬಗ್ಗೆ ತನಿಖೆ ಮಾಡಬೇಕು ,ಆಗ ತಿಳಿಯುತ್ತದೆ ಇವನು ಇವನ ಪರಿವಾರ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ವಿದೇಶಗಳಿಂದ ಹಣ ಪಡೆಯುವ ದಂದೆಗಳ ಬಗ್ಗೆ ….ಇವರಿಗೆ ರೈತ ನೆಮ್ಮದಿ ಬೇಕಿಲ್ಲಾ ,ದೇಶ ಅಭಿವೃದ್ಧಿಯ ಬಗ್ಗೆ ಬೇಕಿಲ್ಲಾ ,ಚೈನಿಗಳ ಭಟ್ ನೆಕ್ಕಿ ಕಮೀಷನ್ ಪಡೆದು ಜನರ ದಾರಿ ತಪ್ಪಿಸಿ ದೇಶನ ಅತಂತ್ರ ಮಾಡೋದು ಇವರ ಗುರಿ ,ಅವರಿಂದ ಪ್ರೋತ್ಸಾಹ ನೀಡಲು ನಿಮ್ಮಂತ ಕೆಲ ಪತ್ರಿಕೆಗಳು ,ನಾಚಿಕೆ ಆಗಬೇಕು