ಉತ್ತರಾಖಂಡದ ದಲಿತ ವಿದ್ಯಾರ್ಥಿಗಳ ಗುಂಪೊಂದು ಮೇಲ್ಜಾತಿ ಹಿಂದೂ ಮಹಿಳೆ ತಯಾರಿಸಿದ ಮಧ್ಯಾಹ್ನದ ಊಟವನ್ನು ತಿನ್ನಲು ನಿರಾಕರಿಸಿದ್ದಾರೆ. ಈ ಹಿಂದೆ ಅದೇ ಶಾಲೆಯಲ್ಲಿ ದಲಿತ ಮಹಿಳೆ ತಯಾರಿಸಿದ ಊಟವನ್ನು ಮೇಲ್ಜಾತಿ ಹಿಂದೂ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದ್ದರು. ಉತ್ತರಾಖಂಡ್ ರಾಜ್ಯದ ಚಂಪಾವತ್ ಜಿಲ್ಲೆಯ ಸುಖಿಧಾಂಗ್‌ನ ಸರ್ಕಾರಿ ಇಂಟರ್ ಕಾಲೇಜ್‌ನಲ್ಲಿ ಈ ಘಟನೆ ನಡೆದಿದೆ.
ಕಳೆದ ವಾರ, ದಲಿತ ಸಮುದಾಯಕ್ಕೆ ಸೇರಿದ ಸುನೀತಾ ದೇವಿ ಅವರು ತಯಾರಿಸಿದ ಊಟವನ್ನು ಮೇಲ್ಜಾತಿ ಹಿಂದೂ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದ್ದರು. ಆದರೆ ಗಾಯಕ್ಕೆ ಉಪ್ಪು ಸವರಿದ್ದ ರಾಜ್ಯ ಸರ್ಕಾರ ಸುನೀತಾ ದೇವಿ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು.
ಇದನ್ನೂ ಓದಿ:ಉತ್ತರಾಖಂಡ: ಶಾಲೆಯಲ್ಲಿ ದಲಿತ ಮಹಿಳೆ ಅಡಿಗೆ ಮಾಡಿದ ಕಾರಣಕ್ಕೆ ಊಟ ನಿರಾಕರಿಸಿದ ಸವರ್ಣಿಯ ಮಕ್ಕಳು
ಆದರೆ, ದಲಿತ ಸಮುದಾಯಕ್ಕೆ ಸೇರಿದ 23 ವಿದ್ಯಾರ್ಥಿಗಳು ಸುನಿತಾ ದೇವಿಯ ಬದಲಿಯಾಗಿ ನೇಮಕಗೊಂಡ ಮೇಲ್ಜಾತಿ ಹಿಂದೂ ಮಹಿಳೆ ವಿಮಿಲೇಶ್ ಉಪ್ರೇತಿ ಅವರು ತಯಾರಿಸಿದ ಊಟವನ್ನು ತಿನ್ನಲು ನಿರಾಕರಿಸುವ ಮೂಲಕ ಪ್ರತಿಭಟಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶುಕ್ರವಾರದಂದು ಮಧ್ಯಾಹ್ನದ ಊಟವನ್ನು ಬಡಿಸುತ್ತಿರುವಾಗ, 23 ದಲಿತ ವಿದ್ಯಾರ್ಥಿಗಳು ಆಹಾರವನ್ನು ತಿನ್ನಲು ನಿರಾಕರಿಸಿದ್ದಾರೆ. “ದಲಿತ ಮಹಿಳೆ ತಯಾರಿಸಿದ ಆಹಾರವನ್ನು ಮೇಲ್ವರ್ಗದ ವಿದ್ಯಾರ್ಥಿಗಳು ಬಹಿಷ್ಕರಿಸಿದರೆ, ಮೇಲ್ಜಾತಿಯ ಮಹಿಳೆ ತಯಾರಿಸಿದ ಊಟವನ್ನು ನಾವು ಬಹಿಷ್ಕರಿಸುವುದಾಗಿ ಅವರು ಹೇಳಿದರು” ಎಂದು ಇಂಟರ್ ಕಾಲೇಜಿನ ಪ್ರಾಂಶುಪಾಲ ಪ್ರೇಮ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಯುಪಿ, ಉತ್ತರಾಖಂಡ ಚುನಾವಣೆಗೆ 150 ಕ್ಕೂ ಹೆಚ್ಚು ಹಿರಿಯ ಬಿಜೆಪಿ ನಾಯಕರ ನಿಯೋಜನೆ
ದಲಿತ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿರುವುದರ ಬಗ್ಗೆ ಉತ್ತರಾಖಂಡ ಸರ್ಕಾರದ ವಿರುದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ನಂತರ ಇದು ದೇಶದಾದ್ಯಂತ ಸುದ್ದಿಯಾಗಿತ್ತು.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಚಂದ್ರಶೇಖರ್, “ಉತ್ತರಾಖಂಡ್‌ನ ಚಂಪಾವತ್ ಜಿಲ್ಲೆಯಲ್ಲಿ ಎಸ್‌ಸಿ ಸಮುದಾಯದ ಅಡುಗೆಯ ಮಹಿಳೆಯನ್ನು ವಜಾ ಮಾಡುವ ಮೂಲಕ ಸರ್ಕಾರ ದಲಿತ ಸಮುದಾಯದ ಸ್ವಾಭಿಮಾನಕ್ಕೆ ಅವಮಾನ ಮಾಡಿದೆ. ನಮ್ಮ ಪಕ್ಷ ಮತ್ತು ಭೀಮ್ ಆರ್ಮಿ ತಮ್ಮ ತಾಯಂದಿರ ಮತ್ತು ಸಹೋದರಿಯರ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆಕೆಯನ್ನು ಮತ್ತೇ ಹುದ್ದೆಗೆ ಸೇರಿಸಿಕೊಳ್ಳದಿದ್ದರೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ವಿರುದ್ದ ಘೋರ ಹೋರಾಟ ಮಾಡುತ್ತೇವೆ. ಸ್ನೇಹಿತರೇ, ಪ್ರತಿಭಟನೆಗೆ ತಯಾರಿ ಆರಂಭಿಸಿ” ಎಂದು ಹೇಳಿದ್ದರು.
ಇದನ್ನೂ ಓದಿ:ಕೆಲವೇ ತಿಂಗಳಲ್ಲಿ ಉತ್ತರಾಖಂಡ ಚುನಾವಣೆ: ಶಂಕರಾಚಾರ್ಯ ಪ್ರತಿಮೆ ಉದ್ಘಾಟಿಸಿ ರಾಮಮಂದಿರದ ಬಗ್ಗೆ ಉಲ್ಲೇಖಿಸಿದ ಮೋದಿ



ನಾಲಾಯಕ್ ಮುಖ್ಯಮ್ಂತ್ರಿ ಅವನು. ಮಕ್ಕಳು ಮೇಲ್ಜಾತಿಯವರಿಗೆ ಸರಿಯಾಗಿ ಬುದ್ದಿ ಕಲಿಸ್ತಿದ್ದಾರೆ. ಜೈ ಭೀಮ್‌ಆರ್ಮಿ.
ಮಕ್ಕಳು ಒಳ್ಳೆಯ ನಿರ್ಧಾರ ಮಾಡಿದ್ದಾರೆ ಜೈ ಭೀಮ್