Homeಫ್ಯಾಕ್ಟ್‌ಚೆಕ್ಮೋದಿ ಭಾಷಣದ ಅಡಚಣೆಗೆ ಟೆಲಿಫ್ರಾಮ್ಟರ್‌ ಕಾರಣವಲ್ಲ: ಆಲ್ಟ್‌ ನ್ಯೂಸ್‌ ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಮೋದಿ ಭಾಷಣದ ಅಡಚಣೆಗೆ ಟೆಲಿಫ್ರಾಮ್ಟರ್‌ ಕಾರಣವಲ್ಲ: ಆಲ್ಟ್‌ ನ್ಯೂಸ್‌ ಬಿಚ್ಚಿಟ್ಟ ಸತ್ಯ ಇಲ್ಲಿದೆ!

- Advertisement -
- Advertisement -

“ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಟೆಲಿಪ್ರಾಮ್ಟರ್‌‌ ನಿಂತು ಹೋಗಿದೆ. ಹೀಗಾಗಿ ಭಾಷಣಕ್ಕೆ ಅಡಚಣೆಯಾಗಿದೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊದ ಸತ್ಯಾಸತ್ಯತೆಯನ್ನು ‘ಆಲ್ಟ್‌ ನ್ಯೂಸ್’ ಬಯಲಿಗೆಳೆದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನವರಿ 17ರಂದು ವಿಶ್ವ ಆರ್ಥಿಕ ವೇದಿಕೆಯ (WEF) ದಾವೋಸ್ ಅಜೆಂಡಾ 2022 ಆನ್‌ಲೈನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ತಮ್ಮ ಭಾಷಣದ ಮಧ್ಯದಲ್ಲಿ ಮಾತನಾಡುವುದನ್ನು ನಿಲ್ಲಿಸಿದ ಸುತ್ತಲೇ ಶೃಂಗಸಭೆಯ ಮುಖ್ಯಾಂಶಗಳು ಮತ್ತು ಸಾಮಾಜಿಕ ಮಾಧ್ಯಮದ ಟ್ರೆಂಡ್‌ಗಳು ಗಿರಿಕಿಹೊಡೆಯುತ್ತಿವೆ. ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರ ದೊಡ್ಡ ಗುಂಪು ಟೆಲಿಪ್ರಾಮ್ಟರ್‌‌ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ. ” ಟೆಲಿಪ್ರಾಮ್ಟರ್‌‌ ಇಲ್ಲದೆ ಭಾಷಣ ಮಾಡಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿಯವರನ್ನು ಲೇವಡಿ ಮಾಡಲಾಗಿದೆ.

#TelepromptorPM ಹ್ಯಾಶ್‌ಟ್ಯಾಗ್‌‌ನೊಂದಿಗೆ ಲೈವ್ ಸ್ಟ್ರೀಮ್ ಸಮಯದಲ್ಲಿ ಅಡಚಣೆಯಾದ 37 ಸೆಕೆಂಡುಗಳ ವೀಡಿಯೊವನ್ನು ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. #TelepromptorPM ಎಂಬ ಹ್ಯಾಶ್‌ಟ್ಯಾಗ್ ವೆರಿಫೈ ಮಾಡಲಾದ ಕಾಂಗ್ರೆಸ್ ಖಾತೆಗಳು ಬಳಸಿವೆ. ಕಾಂಗ್ರೆಸ್ ವಕ್ತಾರರಾದ ಶಾಮಾ ಮೊಹಮ್ಮದ್, ಪಶ್ಚಿಮ ಬಂಗಾಳ ಕಾಂಗ್ರೆಸ್, ಪಶ್ಚಿಮ ಬಂಗಾಳ ಪ್ರದೇಶ ಮಹಿಳಾ ಕಾಂಗ್ರೆಸ್, ಮಣಿಪುರ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸೇವಾದಳ ಖಾತೆಗಳಲ್ಲೂ ಇದನ್ನೇ ಪ್ರತಿಪಾದನೆ ಮಾಡಲಾಗಿದೆ.

ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಎರಡು ವೀಡಿಯೊ ಕ್ಲಿಪ್‌ಗಳ ಜೋಡನೆಯನ್ನು ಟ್ವೀಟ್ ಮಾಡಿದ್ದಾರೆ. “ಮೋದಿ ಮಾತನಾಡಲು ಟೆಲಿಪ್ರಾಮ್ಟರ್‌‌ ಬಳಸುತ್ತಾರೆ” ಎಂದು ಆರೋಪಿಸಿರುವ ರಾಹುಲ್ ಗಾಂಧಿಯವರ ಹಳೆಯ ವೀಡಿಯೊ ಮತ್ತು ಬಲಭಾಗದಲ್ಲಿ ದಾವೋಸ್‌ನಲ್ಲಿ ಪ್ರಧಾನಿ ಮೋದಿಯವರ ಅಡ್ಡಿಪಡಿಸಿದ ಭಾಷಣದ ವೀಡಿಯೊವನ್ನು ಇವರ ಟ್ವೀಟ್‌ನಲ್ಲಿ ಕಾಣಬಹುದು. ಈ ವೀಡಿಯೊವನ್ನು ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ರಾಮ್‌ಕಿಶನ್ ಓಜಾ, ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸೇವಾದಳ ಖಾತೆಗಳೂ ಹಂಚಿಕೊಂಡಿವೆ.

ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಇದೇ ಪ್ರತಿಪಾದನೆ ಮಾಡಿದ್ದಾರೆ.

ಮಹುವಾ ಮೊಯಿತ್ರಾ ಅಭಿಮಾನಿಗಳು [4 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್], ಪ್ರಿಯಾಂಕಾ ಗಾಂಧಿ ಅಭಿಮಾನಿಗಳ ಪುಟ [7 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್]; ಲೈ ಲಾಮಾ [1.5 ಲಕ್ಷಕ್ಕೂ ಹೆಚ್ಚು ‌ಫಾಲೋಯರ್ಸ್]; ವೆಲ್ ಸನ್ನಿ [9 ಸಾವಿರಕ್ಕಿಂತ ಹೆಚ್ಚು ಫಾಲೋಯರ್ಸ್‌ಗಳು] ಖಾತೆಗಳಲ್ಲೂ ಇದೇ ಪ್ರತಿಪಾದನೆ ಮಾಡಲಾಗಿದೆ.

ಟೆಲಿಪ್ರಾಮ್ಟರ್‌‌ ದೋಷದಿಂದಾಗಿ ಅಡೆಚಣೆಯಾಗಿಲ್ಲ

ವರ್ಲ್ಡ್ ಎಕನಾಮಿಕ್ ಫೋರಮ್ (ಡಬ್ಲ್ಯುಇಎಫ್) ಆನ್‌ಲೈನ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಸಂಬಂಧಿಸಿದ ವಿವಾದವನ್ನು ಅರ್ಥಮಾಡಿಕೊಳ್ಳಲು, ತಾಂತ್ರಿಕ ದೋಷದ ಕಾರಣಗಳ ಅನುಕ್ರಮವನ್ನು ಆಲ್ಟ್‌ ನ್ಯೂಸ್ ಪರಿಶೀಲಿಸಿದೆ.

ನರೇಂದ್ರ ಮೋದಿ, ದೂರದರ್ಶನ ನ್ಯಾಷನಲ್‌ ಮತ್ತು ವರ್ಲ್ಡ್ ಎಕನಾಮಿಕ್ ಫೋರಮ್ (ಡಬ್ಲ್ಯುಇಎಫ್) ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪ್ರಧಾನಿ ಮೋದಿಯವರ ಭಾಷಣ ಲಭ್ಯವಿದೆ. ಡಿಡಿ ಮತ್ತು ಡಬ್ಲ್ಯುಇಎಫ್ ಚಾನೆಲ್‌ಗಳಲ್ಲಿ ಕಾಣಬಹುದಾದ ಅಡಚಣೆಯನ್ನು ನರೇಂದ್ರ ಮೋದಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಕಾಣಲು ಸಾಧ್ಯವಾಗಿಲ್ಲ.

ಡಿಡಿ ಆವೃತ್ತಿಯ ವೀಡಿಯೊದಲ್ಲಿ ಪ್ರಧಾನಿ ಈಗಾಗಲೇ ಆರು ನಿಮಿಷಗಳ ಕಾಲ ಮಾತನಾಡಿದ ಭಾಗವನ್ನು WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿಲ್ಲ ಎಂದು ಆಲ್ಟ್‌ನ್ಯೂಸ್‌ ಗಮನಿಸಿದೆ. ವಾಸ್ತವವಾಗಿ, ಲೈವ್ ಸ್ಟ್ರೀಮ್‌ ಆದ WEFನ ಆವೃತ್ತಿಯ ಮೊದಲ ಎಂಟು ನಿಮಿಷಗಳು ಬ್ಲಾಕ್‌ ಆಗಿವೆ. ಲೈವ್ ಸ್ಟ್ರೀಮ್ ಪ್ರಾರಂಭವಾದಾಗ, PM ಈಗಾಗಲೇ ಭಾಷಣದ ಮಧ್ಯಭಾಗದಲ್ಲಿರುವುದನ್ನು ಕಾಣಬಹುದು. WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಆರಂಭಿಕ ಭಾಗವನ್ನು ಲೈವ್-ಸ್ಟ್ರೀಮ್ ಮಾಡದ ಕಾರಣ ತಾಂತ್ರಿಕ ದೋಷವಿತ್ತು ಎಂದು ತಿಳಿಯಬಹುದು.

ಆಲ್ಟ್ ನ್ಯೂಸ್ ಜಾಲತಾಣವು WEF ಕಾರ್ಯಕ್ರಮದ ಅನುಕ್ರಮವನ್ನು ಪರಿಶೀಲಿಸಿದ್ದು DD ಮತ್ತು WEF ಯೂಟ್ಯೂಬ್‌ ಚಾನೆಲ್‌ ವೀಡಿಯೊಗಳನ್ನು ಪರಿಶೀಲಿಸಿದೆ.

ಡಿಡಿಯ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದ ಆರಂಭಿಕ ನಾಲ್ಕು ನಿಮಿಷಗಳಲ್ಲಿ, ಪಿಎಂ ಮೋದಿ ಮತ್ತು ಆತಿಥೇಯ ಡಬ್ಲ್ಯುಇಎಫ್ ಎಕ್ಸಿಕ್ಯೂಟಿವ್ ಚೇರ್ಮನ್ ಕ್ಲಾಸ್ ಶ್ವಾಬ್, ಕುಶಲೋಪರಿ ವಿನಿಮಯ ಮಾಡಿಕೊಂಡರು. 5:04 ನಿಮಿಷಗಳಿಗೆ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ. ಆದಾಗ್ಯೂ, ಕೆಲವು ಸೆಕೆಂಡುಗಳ ಮೊದಲು [5:00 ರಿಂದ 5:01 ನಿಮಿಷ ನೋಡಿ], ಒಬ್ಬ ವ್ಯಕ್ತಿಯು ಇಂಗ್ಲಿಷ್‌ನಲ್ಲಿ “… ಗ್ರಾಫಿಕ್ಸ್… ಸರ್?” ಎನ್ನುವುದನ್ನು ಕೇಳಬಹುದು. ಅದರ ನಂತರ ನರೇಂದ್ರಮೋದಿಯವರು 5:12 ನಿಮಿಷಕ್ಕೆ ತಮ್ಮ ಇಯರ್‌ಫೋನ್‌‌ ತೆಗೆದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ.

7:07 ನಿಮಿಷದ ಅವಧಿಯಲ್ಲಿ, ಪ್ರಧಾನಿ ಮೋದಿ ಎಡಕ್ಕೆ ನೋಡುತ್ತಾರೆ ಮತ್ತು ಮಾತನಾಡುವುದನ್ನು ನಿಲ್ಲಿಸುತ್ತಾರೆ. ಸುಮಾರು, 7:15ರ ನಿಮಿಷದಲ್ಲಿ ‌ಆತಿಥೇಯರನ್ನು ಮೋದಿ ಸಂಭೋದಿಸುತ್ತಾರೆ. “ನೀವು ನನ್ನನ್ನು ಆಲಿಸುತ್ತಿದ್ದೀರಾ?” ಎಂದು ಕೇಳುತ್ತಾರೆ. ಆಲಿಸುತ್ತಿರುವುದಾಗಿ ಶ್ವಾಬ್‌ ಖಚಿತಪಡಿಸಿದ್ದಾರೆ. ಆಗ ಪ್ರಧಾನಮಂತ್ರಿಯವರು ಕೇಳುತ್ತಾರೆ, “ನಮ್ಮ ಇಂಟರ್ಪ್ರಿಟರ್ ಕೂಡ ಕೇಳಬಲ್ಲರೇ?”. ಶ್ವಾಬ್ ದೃಢೀಕರಿಸುತ್ತಾರೆ. “ಸಂಗೀತದೊಂದಿಗೆ ಒಂದು ಸಣ್ಣ ಪರಿಚಯ…”. ನಂತರ ಅಧಿಕೃತವಾಗಿ ಅಧಿವೇಶನವು ಮತ್ತೆ ಪ್ರಾರಂಭವಾಗುತ್ತದೆ (7:45 ನಿಮಿಷದಲ್ಲಿ ಪರಿಶೀಲಿಸಿ).

10:49 ನಿಮಿಷದ ಅವಧಿಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪುನರಾರಂಭಿಸುತ್ತಾರೆ. ಅವರ ಭಾಷಣದ 5:04 ನಿಮಿಷದಲ್ಲಿ ನೋಡಿದ ಹೇಳಿಕೆಯನ್ನು ಮತ್ತೆ ಗಮನಿಸಬಹುದು.

WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವೀಡಿಯೊವನ್ನು ವೀಕ್ಷಿಸಿದ ನಂತರ, ಪಿಎಂ ಮೋದಿ ಎಡಕ್ಕೆ ನೋಡಿದ ನಿಖರವಾದ ಸಮಯವನ್ನು ಗುರುತಿಸಬಹುದು. ಕಾರ್ಯಕ್ರಮ ನಿರ್ವಹಣಾ ತಂಡದ ಯಾರೋ ಒಬ್ಬರು, “ಪ್ರಧಾನ ಮಂತ್ರಿಯವರು ಎಲ್ಲರೂ ಸೇರಿದ್ದಾರೆಯೇ ಅಥವಾ ಇಲ್ಲವೇ ಎಂದು ಕೇಳಬೇಕು” ಎಂದು ಸಲಹೆ ನೀಡುತ್ತಾರೆ. ಹಿಂದಿಯಲ್ಲಿ ಒಂದು ಧ್ವನಿಯು ಪ್ರಧಾನಿ ಮೋದಿಯನ್ನು ಉದ್ದೇಶಿಸಿ, “ಸರ್, ಎಲ್ಲರೂ ಸೇರಿದ್ದರೆ ಅವರನ್ನು ಒಮ್ಮೆ ಕೇಳಿ…” ಎನ್ನುವುದನ್ನು ಗಮನಿಸಬಹುದು. ಇದಾದ ನಂತರವೇ ಪ್ರಧಾನಿಯವರು ತಮ್ಮ ಭಾಷಣ ಮತ್ತು ದ್ವಿಭಾಷಿಯ ಧ್ವನಿಯ ಕುರಿತು ವಿಚಾರಿಸುತ್ತಾರೆ. ಹೀಗಾಗಿ, ಪ್ರಧಾನಿ ಮೋದಿ ಮಾತನಾಡುವುದನ್ನು ನಿಲ್ಲಿಸಲು- ಕಾರ್ಯಕ್ರಮವನ್ನು ನಿರ್ವಹಿಸುವ ತಂಡದ ಮಧ್ಯಪ್ರವೇಶವೇ ಕಾರಣವಾಗಿದೆ.

ಅಡಚಣೆ ಇರುವುದನ್ನು ಮನಗಂಡ ಕ್ಲಾಸ್ ಶ್ವಾಬ್ ಪ್ರಧಾನಿಯನ್ನು ಪರಿಚಯಿಸುತ್ತಾರೆ. ಪಿ.ಎಂ. ಮತ್ತೆ ಭಾಷಣ ಆರಂಭಿಸುತ್ತಾರೆ. ಕಾರ್ಯಕ್ರಮದಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಅಡಚಣೆಯಾಗಿದೆ. ಆದರೆ ಟೆಲಿಪ್ರಾಮ್ಟರ್‌‌ ಸಮಸ್ಯೆಯಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ತಾಂತ್ರಿಕ ಸಮಸ್ಯೆ ಏನೇ ಇರಲಿ, ಮೋದಿ ಟೆಲೆಫ್ರಾಂಪ್ಟರ್ ಬಳಸುತ್ತಾರೆ ಎಂಬುದು ಸಾಬೀತಾಯಿತು. ಡಾ.ಮನಮೋಹನ್ ಸಿಂಗ್ ಎಂದೂ ಟೆಲೆಫ್ರಾಂಪ್ಟರ್ ಬಳಸುತ್ತಲೇ ಇರಲಿಲ್ಲ!
    ನೆಹರು ಸಹಾ ಟೆಲೆ ಫ್ರಾಂಪ್ಟರ್ ಬಳಸುತ್ತಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ !!!☺️😊☺️😊😢

  2. ಇಲ್ಲಿಯ ವರೆಗೆ ಜನರು ಮೋದಿ ಅನಕ್ಷರಸ್ಥ ಎಂದು ತಿಳಿದಿದ್ದರು. ಆದರೆ ಮೋದಿಗೆ ಓದಲು ಬರೆಯಲು ಬರುತ್ತದೆ ಎಂದು ಈಗ ದೇಶದ ಜನಕ್ಕೆ ಗೊತ್ತಾಗಿ ಸಂತೋಷವಾಯಿತು !!.
    ಥ್ಯಾಂಕ್ಸ್ ಟೆಲೆಫ್ರಾಂಪ್ಟರ್ ! ☺️😊☺️😊😢

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...