Homeಕರ್ನಾಟಕ'ಮಾನವತಾವಾದಿ' ಸಂವಿಧಾನವನ್ನು 'ಮನುವಾದಿ' ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

- Advertisement -
- Advertisement -

‘ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ’ ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್ ಹೇಳಿದರು.

ರಾಷ್ಟ್ರೀಯ ವಿಜ್ಞಾನ‌ ದಿನದ ಅಂಗವಾಗಿ ‘ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ನೇಗಿಲಯೋಗಿ ಟ್ರಸ್ಟ್, ಅಖಿಲ ಭಾರತ ವಿಚಾರವಾದಿಗಳ ಟ್ರಸ್ಟ್‌’ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ವಿಚಾರಕ್ರಾಂತಿ-ಒಂದು ದಿನದ ರಾಜ್ಯ ಮಟ್ಟದ ಸಮಾವೇಶ’ದಲ್ಲಿ ಪ್ರೊಫೆಸರ್ ನರೇಂದ್ರ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

‘ನಾವು ಯಾರಿಗೂ ಉಪದೇಶ ಮಾಡಬೇಕಾಗಿಲ್ಲ; ಎಲ್ಲರಿಗೂ ಎಲ್ಲ ಗೊತ್ತು. ನಮಗೆ ಯಾವುದೇ ಅಧಿಕಾರವಿಲ್ಲ, ಅತಿಮಾನುಷ ಶಕ್ತಿ ಇಲ್ಲ. ಏನು ಮಾಡಲು ಸಾಧ್ಯ? ನಾಸ್ತಿಕರಾಗಿರುವುದೆಂದರೆ ನಮಗೆ ಯಾವುದೇ ಅತಿಮಾನುಷ ಶಕ್ತಿಯಲ್ಲಿ ನಂಬಿಕೆಯಿಲ್ಲ ಎಂಬ ನಿಲುವಿಗೆ ಬಂದುಬಿಡುತ್ತೇವೆ. ಅಲ್ಲ, ನಾವು ನಾಸ್ತಿಕರು ಹೇಳುತ್ತೇವೆ; ಎಲ್ಲರೂ ಸಮಾನರು, ಯಾವುದೇ ತಾರತಮ್ಯವಿಲ್ಲ; ಮಾನವತಾವಾದ ಮಾತ್ರ’ ಎಂದು ಹೇಳಿದರು.

‘ಎಲ್ಲವನ್ನೂ ತರ್ಕಬದ್ಧವಾಗಿ ಆಲೋಚಿಸುವುದು, ಪ್ರತಿಯೊಂದನ್ನು ಪ್ರಶ್ನಿಸುವುದು. ಮಾನವತಾವಾದ ಇನ್ನೂ ಒಂದು ಹೆಜ್ಜೆ ಮುಂದೆ ಎಂದರೆ, ಎಲ್ಲ ಮಾನವರು ಸಮಾನ; ಭಾಷೆ, ಜನಾಂಗ, ರಾಷ್ಟ್ರೀಯತೆ, ಲೈಂಗಿಕತೆ, ಜೆಂಡರ್ ಈ ಎಲ್ಲ ವ್ಯತ್ಯಾಸಗಳನ್ನು ಹೊರತುಪಡಿಸಿ ನಾವು ಮಾನವರು; ಅದೇ ಮಾನವತಾವಾದ’ ಎಂದರು.

‘ನಮಗಿರುವುದು ಒಂದೇ ಪವಿತ್ರ ಗ್ರಂಥ, ಬೈಬಲ್ ಅಲ್ಲ, ಖುರಾನ್ ಅಲ್ಲ, ಯಾವುದೇ ಧರ್ಮಗ್ರಂಥಗಳಲ್ಲ. ಅಂತಾರಾಷ್ಟ್ರೀಯ ಮಾನವಹಕ್ಕುಗಳ ಘೋಷಣೆಯೇ ನಮಗೆ ಪವಿತ್ರಗ್ರಂಥ. ನಾವು ಭಾರತದ ಸಂವಿಧಾನದ ಪರವಾಗಿದ್ದೇವೆ, ಅಲ್ಲಿ ಒಂದುವಿಧಿ, ಆರ್ಟಿಕಲ್ 51 (ಎಎಚ್) ಇದೆ. ಇದು ಪ್ರತಿಯೊಬ್ಬರೂ ವೈಜ್ಞಾನಿಕ ಮನೋಬಾವ ಬೆಳೆಸಿಕೊಳ್ಳಬೇಕು ಎನ್ನುತ್ತದೆ. ಪ್ರಶ್ನಿಸುವ ಮನೋಭಾವ ಮತ್ತು ಮಾನವತೆಯನ್ನು ಬೆಳಸಿಕೊಳ್ಳಬೇಕು ಎನ್ನುತ್ತದೆ. ನಮ್ಮ ಸಂವಿಧಾನವೇ ನಮಗೆ ಅಂತಿಮ. ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ’ ಎಂದರು.

‘ವೈಜ್ಞಾನಿಕ ಮಾನವಕುಲಶಾಸ್ತ್ರ ಮತ್ತು ಅಂಬೇಡ್ಕರ್ ಅವರ ಚಿಂತನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಂತಕರಾದ ಬಿ. ಶ್ರೀಪಾದ್ ಭಟ್, ‘ಮಾನವಶಾಸ್ತ್ರಜ್ಞ ಎಂದು ಅಂಬೇಡ್ಕರ್ ಅವರನ್ನ ಗುರುತಿಸುವಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ; ನಾನ್ಯಾರು ಎಂದು ಬುದ್ಧಿಸ್ಟ್ ಕೇಳುವುದಿಲ್ಲ; ನಮ್ಮನ್ನು ಯಾವ ರೀತಿ ಟ್ರೀಟ್ ಮಾಡಲಾಗುತ್ತದೆ ಎಂದು ಕೇಳುತ್ತಾರೆ. ಅಂಬೇಡ್ಕರ್ ಮಾನವ ಕುಲಶಾಸ್ತ್ರೀಯರಾಗಿಗಿ ಈ ಪ್ರಶ್ನೆ ಕೇಳಿದ್ದರು. ತನ್ನ ವೈಯಕ್ತಿಕ ನೋವನ್ನು ಯೂನಿವರ್ಸಲ್ ಆಗಿ ನೋಡಿದ್ದು ಅಂಬೇಡ್ಕರ್ ಮಾತ್ರ’ ಎಂದರು.

‘ವೈಜ್ಞಾನಿಕ ಮಾನವಕುಲಶಾಸ್ತ್ರ ಮತ್ತು ಅಂಬೇಡ್ಕರ್ ಅವರ ಚಿಂತನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಂತಕರಾದ ಬಿ. ಶ್ರೀಪಾದ್ ಭಟ್

‘ಉದಾಹರಣೆಗೆ.. ಭಾರತದಲ್ಲಿ ಪಸಿದ್ಧರಾದ ಎಂ.ಎನ್‌. ಶ್ರೀನಿವಾಸ್, ಅವರನ್ನು ಸಮಾಜ ವಿಜ್ಞಾನಿ ಎಂದು ಕರೆಯುತ್ತಾರೆ. ಅವರು ಮೈಸೂರಿನ ರಾಂಪುರ ಕುರಿತು ಪುಸ್ತಕ ಬರೆದಿರುವದನ್ನೂ ನಮ್ಮಲ್ಲಿ ಹಲವರು ಓದಿದ್ದಾರೆ. ಅವರು ಹಲವು ವರ್ಷಗಳ ಕಾಲ ಅದೇ ಗ್ರಾಮದಲ್ಲಿ ಉಳಿದುಕೊಂಡಿದ್ದರು. ಹಳ್ಳಿಗಳು ಹೇಗೆ ಜಾತಿ ಆಧಾರವಾಗಿ ಕಟ್ಟಲ್ಪಟ್ಟಿವೆ ಎಂಬುದನ್ನು ಅಧ್ಯಯನ ಮಾಡುತ್ತಾರೆ. ಆದರೆ, ಅವರು ಹೋಗಿ ಉಳಿದುಕೊಳ್ಳುವುದು ಅಗ್ರಹಾರದ ಬ್ರಾಹ್ಮಣದ ಮನೆಯಲ್ಲಿ. ಅಗ್ರಹಾರದ ಮೂಲಕ ಹೋದಾಗ ಮಾಹಿತಿಗಳು ಖಚಿತವಾಗಿರುವುದಿಲ್ಲ. ಶ್ರೀನಿವಾಸ್ ದಲಿತ ಕೇರಿಗೆ ಹೋಗುತ್ತೇನೆ ಎಂದಾಗ, ‘ದಲಿತರ ಬಗ್ಗೆ ನಾವೇ ಹೇಳುತ್ತೇವೆ.. ಅವರಿಗೇನು ಗೊತ್ತು’ ಎಂದು ಬ್ರಾಹ್ಮಣರು ಹೇಳುತ್ತಾರೆ; ಇದು ಬ್ರಾಹ್ಣಣಿಸಮ್’ ಎಂದು ವಿವರಿಸಿದರು.

‘ಅಂಬೇಡ್ಕರ್ ಪ್ರಶ್ನಿಸಿದ್ದು ಇದನ್ನೇ, ‘ನಮ್ಮನ್ನೇಕೆ ಹೀಗೆ ನಡೆಸಿಕೊಳ್ಳುತ್ತಿದ್ದೀರಾ’ ಎನ್ನುತ್ತಾರೆ. ಆದ್ದರಿಂದ ಅಂಬೇಡ್ಕರ್ ಅವರ ಮಾನಶಾಸ್ತ್ರ ಅಧ್ಯಯನವನ್ನು ನಾವು ಓದಬೇಕಾಗಿದೆ. ಅವರು ಸಮಾನತೆ, ಸ್ವಾತಂತ್ರ ಮತ್ತು ಸಹೋದರತೆ ಎಂದು ಪ್ರತಿಪಾದಿಸುತ್ತಾರೆ.. ಅದು ಮೇಲ್ಮುಖ ಚಲನೆ. ಆದರೆ, ಮಾನವ ಶಾಸ್ತ್ರಜ್ಞರು ಎಂದು ಗುರುತಿಸಲ್ಪಟ್ಟ ಶ್ರೀನಿವಾಸ್, ಸಂಸ್ಕೃತೀಕರಣದ ಮೇಲ್ಮುಖ ಚಲನೆ ಎನ್ನುತ್ತಾರೆ. ಇವೆರಡರ ನಡುವಿನ ವ್ಯತ್ಯಾಸ ಎಂದರೆ ‘ನೀವು ಯಾಕೆ ಈ ರೀತಿ ವರ್ತಿಸುತ್ತಿದ್ದೀರಿ? ಮತ್ತು ನೀವು ಹೇಗೆ ನಡೆಸಿಕೊಳ್ಳುತ್ತಿದ್ದೀರಿ? ಎಂಬುದು. ಅದೇ ಅಂಬೇಡ್ಕರ್ ಅವರ ಮಾನವಶಾಸ್ತ್ರ ಅಧ್ಯಯನದ ಬಹಳ ದೊಡ್ಡ ವಿಚಾರ’ ಎಂದು ಹೇಳಿದರು.

‘ರಂಜಿತ್ ಗುಹಾ, ಪಾರ್ಥ ಚಟರ್ಜಿ ತರಹದವರು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ‘ಸಬಾಲ್ಟರ್ನ್’ ಅಧ್ಯಯನ ನಡೆಸಿದ್ದಾರೆ. ಅವರು ಎಲ್ಲಿಯೂ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ವಿದೇಶೀಯ ಅಧ್ಯಯನಕಾರರಾದ ಲೂಯಿಸ್ ಟಬೇಟೋ, ರಿಸ್ತೆ, ಡಿ.ಡಿ. ಕೋಸಂಬಿ, ನಿರ್ಮಲ್ ಕುಮಾರ್, ರಜನಿ ಕೊಠಾರಿ ಸೇರಿದಂತೆ ಅನೇಕರನ್ನು ಸಮಾಜ ಶಾಸ್ತ್ರಜ್ಞರು, ಮಾನವ ಕುಲ ಶಾಸ್ತ್ರಜ್ಞರು ಎಂದು ಗುರುತಿಸುತ್ತಾರೆ. ಆದರೆ, ಎಲ್ಲಿಯೂ ಅಂಬೇಡ್ಕರ್ ಅವರನ್ನು ಮಾನವ ಕುಲ ಶಾಸ್ತ್ರಜ್ಞ ಎಂದು ಗುರುತಿಸಿಲ್ಲ. ಏಕೆಂದರೆ, ಇವರಿಗೆ ಅಂಬೇಡ್ಕರ್ ಅವರನ್ನು ಯಾವ ರೀತಿ ಓದಬೇಕು ಎಂಬ ಗ್ರಹಿಕೆಯೇ ಇರಲಿಲ್ಲ. ಗ್ರಹಿಕೆ ಇಲ್ಲದ ಓದಿನಿಂದ ಮೊದಲ ದೃಷ್ಟಿಕೋನವೇ ಬದಲಾಗುತ್ತದೆ; ಆಗ ನಮ್ಮ ಸಂವೇದನೆ ಕೂಡ ಬದಲಾಗುತ್ತದೆ. ಸಂವೇದನೆ ಬದಲಾದಾಗ ನಮ್ಮ ವಿಚಾರ ಮಂಡನೆ ಕೂಡ ಬದಲಾಗುತ್ತದೆ’ ಎಂದರು.

‘ಅಂಬೇಡ್ಕರ್ ಅವರ ಮಾನವ ಶಾಸ್ತ್ರ ಅಧ್ಯಯನದ ಬಗ್ಗೆ ನಾವು ಮಾತನಾಡಬೇಕಾದರೆ, ಅವರು ಬರೆದ ಮೂರು ಮುಖ್ಯ ವಿಷಯಗಳ ಬಗ್ಗೆ ನಾವು ಓದಬೇಕು. 1916ರಲ್ಲಿ ಅವರು ಮಂಡಿಸಿ ಪ್ರಬಂಧ; ಅದರಲ್ಲಿ ಅವರು ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುತ್ತಲೇ ‘ಎಕ್ಸೋಗಾಮಿ ಮತ್ತು ಎಂಡೋಗಾಮಿ’ ಬಗ್ಗೆ ಚರ್ಚೆ ಮಾಡುತ್ತಾರೆ. ಇವೆಲ್ಲವೂ ನಮಗೆ ಅರ್ಥ ಮಾಡಿಕೊಳ್ಳಬೇಕಾದರೆ ನಾವು ಅವರ ಮಾನವ ಶಾಸ್ತ್ರ ಅಧ್ಯಯನವನ್ನು ಓದಬೇಕು’ ಎಂದು ಹೇಳಿದರು.

ಸಮಾವೇಶವನ್ನು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಬರಗೂರು ರಾಮಚಂದ್ರಪ್ಪ, ವಕೀಲರಾದ ಅನಂತ್ ನಾಯ್ಕ್ ಮತ್ತು ಹಿರಿಯ ಪತ್ರಕರ್ತರಾದ ಪ್ರದೀಪ್ ಮಾಲ್ಗುಡಿ ಇದ್ದರು.

ಇದನ್ನೂ ಓದಿ; ಪಾಕಿಸ್ತಾನ ಪರ ಘೋಷಣೆ ಆರೋಪ ಸಾಬೀತಾದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...