ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ ಪ್ಯಾನೆಲ್ ಚರ್ಚೆಯಲ್ಲಿ ಬಂದಿದ್ದ ಅತಿಥಿಯೊಬ್ಬರು ಚರ್ಚೆ ನಡೆಯುತ್ತಿರುವ ಹೊತ್ತಿಗೆ ತಿನ್ನಲು ಪ್ರಾರಂಭಿಸಿದ್ದಾರೆ. ಇದೀಗ ವಿಡಿಯೋ ವೈರಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಅರ್ನಾಬ್ ಅವರನ್ನು ಟ್ರೋಲ್ ಮಾಡಿದ್ದಾರೆ.
just eating Arnab's words.pic.twitter.com/Izrhz1Sozc
— Mitul (@2mitul2) July 19, 2020
ಅರ್ನಾಬ್ ಅವರ ಚಾನೆಲ್ ನಲ್ಲಿ ನಡೆದ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಭಾರತದ ನಟಿ ಕಸ್ತೂರಿ ಶಂಕರ್ ಚರ್ಚೆಯ ನಡುವೆ ಆಹಾರ ಸೇವಿಸಿದ್ದರು. ಈ ಬಗ್ಗೆ ನಂತರ ಪ್ರತಿಕ್ರಿಯೆ ನೀಡಿದ ನಟಿ “ನಾನು ಅರ್ನಾಬ್ ಮಾತುಗಳನ್ನು 60 ನಿಮಿಷ ಕೇಳಿದೆ, ಆದರೂ ಅವರು ನನ್ನನ್ನು ಮಾತನಾಡಲು ಬಿಡಲಿಲ್ಲ, ಹಾಗಾಗಿ ನಾನು ಅಲ್ಲಿಂದ ಹೊರಟು ಊಟ ಮಾಡಿದೆ. ಆದರೆ ಸ್ಕೈಪ್ ಅನ್ನು ಸೈನ್ ಆಫ್ ಮಾಡಲು ಮರೆತಿದ್ದೆ. ಪ್ರಮಾಧಕ್ಕಾಗಿ ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ! ಯಾರನ್ನೂ ಅವನಾನಿಸುವ ಉದ್ದೇಶ ಇರಲಿಲ್ಲ” ಎಂದು ಹೇಳಿದ್ದಾರೆ.
Lol. Nothing to do with confidence. I spent 60 minutes watching Arnab in hypermode, He wasnt gonna let me talk anyways, so I left and grabbed lunch. but forgot to sign off skype. Apologies to everyone for the mess up ! No offence or disrespect intended!
— Kasturi Shankar (@KasthuriShankar) July 19, 2020
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಅರ್ನಾಬ್ ಗೋಸ್ವಾಮಿಯವರನ್ನು ಕಾಲೆಳೆದು ವ್ಯಂಗ್ಯವಾಡಿದ್ದಾರೆ. ಕವಿ ಶಂಕರ್ ಎನ್ ಕೆಂಚನೂರು “ಡಿಬೇಟಲ್ಲಿ ಹೇಗಿರ್ಬೇಕು ಅನ್ನೋದನ್ನ ಈ ಯಮ್ಮ ಚೆನ್ನಾಗಿ ತಿಳ್ಕೊಂಡಿದೆ. ಸುಮ್ನೆ ಟೈಮ್ ವೇಸ್ಟ್ ಮಾಡೋ ಬದಲು ಈ ರೀತಿ ಯೂಸ್ ಮಾಡ್ಕೊಬೇಕು” ಎಂದು ಹೇಳಿದ್ದಾರೆ.
ಗೊಬ್ಬರದ ಡಿಬೇಟಲ್ಲಿ ಹೇಗಿರ್ಬೇಕು ಅನ್ನೋದನ್ನ ಈ ಯಮ್ಮ ಚೆನ್ನಾಗಿ ತಿಳ್ಕೊಂಡಿದೆ ಸುಮ್ನೆ ಟೈಮ್ ವೇಸ್ಟ್ ಮಾಡೋ ಬದಲು ಈ ರೀತಿ ಯೂಸ್ ಮಾಡ್ಕೊಬೇಕು
Posted by Shankar N Kenchanuru on Sunday, July 19, 2020
ನಿಮ್ಮೋ ತಾಯಿ ಎಂಬ ಟ್ರೋಲ್ ಪೇಜ್, ‘ಅರ್ನಾಬ್‌ನ ಕಾರ್ಯಕ್ರಮದಲ್ಲಿ ಏನಾದರೂ ಉಪಯುಕ್ತವಾದದ್ದು ಮಾಡಿದ್ದರೆ ಅದು ಇವರು ಮಾತ್ರ ಎಂದು ವ್ಯಂಗ್ಯವಾಡಿದೆ.
She is only one to have done something useful in Arnab's show.
pic.twitter.com/gkhnMQIEr3— Nimmo Tai (@CrypticMiind) July 19, 2020
ಓದಿ: ಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್ ಕ್ಷಮೆಯಾಚಿಸಿದ ಅರ್ನಬ್ ಗೋಸ್ವಾಮಿ


