ಶಿವಮೊಗ್ಗದ ಮಾಂಸದ ಅಂಗಡಿಯೊಂದಕ್ಕೆ ತೆರಳಿ ಹಲಾಲ್ ಮಾಂಸವನ್ನು ಮಾರಾಟ ಮಾಡದಂತೆ, ಅಂಗಡಿ ಮಾಲಿಕನಿಗೆ ಹಲ್ಲೆ ನಡೆಸಿದ ಐವರು ಬಜರಂಗದಳದ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾಗಿ ವರದಿಯಾಗಿದೆ. ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳ ಕಾರ್ಯಕರ್ತರು ಹಲಾಲ್ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲಿಕ ತೌಸಿಫ್ ಅವರಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದರು.
ಈ ಸಂಬಂಧ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಐವರು ದುಷ್ಕರ್ಮಿಗಳು ಮಾಂಸದ ಅಂಗಡಿಯೊಳಗೆ ನುಗ್ಗಿ ಹಿಂದೂಗಳೇ ಇರುವ ಪ್ರದೇಶದಲ್ಲಿ ಮಾಂಸವನ್ನು ಮಾರಾಟ ಮಾಡುತ್ತಿದ್ದೀರಿ. ಹಲಾಲ್ ಮಾಂಸವನ್ನು ಮಾರಾಟ ಮಾಡದಂತೆ ಹೇಳಿದ್ದಾರೆ. ಜೊತೆಗೆ ಅವಾಚ್ಯ ಶಬ್ಧಗಳಿಂದಲೂ ಬೈದಿದ್ದರು. ಈ ವೇಳೆ ಅಂಗಡಿಯ ಮಾಲಕ ತೌಸೀಫ್ ಅವರು ಹಲಾಲ್ ಮಾಂಸ ಬೇಡ ಅಂತಿದ್ದರೆ ಬೇರೆ ಅಂಗಡಿಗೆ ತೆರಳುವಂತೆ ಕೇಳಿದ್ದರು. ಈ ವೇಳೆ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಇದೇ ದುಷ್ಕರ್ಮಿಗಳು ಅಲ್ಲಿನ ಜನತಾ ಹೋಟೆಲ್‌ಗೆ ಕೂಡಾ ನುಗ್ಗಿ ಹಲಾಲ್ ಮಾಡಿರುವ ಮಾಂಸವನ್ನು ಮಾರಾಟ ಮಾಡದಂತೆ ಕೇಳಿಕೊಂಡಿದ್ದಾರೆ. ಈ ವೇಳೆ ವಾಗ್ವಾದಕ್ಕೆ ಇಳಿದಿದ್ದ ಸಿಬ್ಬಂದಿಯ ಮೇಲೆ ದಾಳಿ ಮಾಡಿದ್ದಾರೆ ಎಂದು ಕೂಡಾ ವರದಿಯಾಗಿದೆ. ಈ ಘಟನೆಯ ಬಗ್ಗೆ ಕೂಡಾ ಎಫ್‌ಐಆರ್ ದಾಖಲಾಗಿದೆ ಎಂದು ಜಿಲ್ಲಾ ಎಸ್‌ಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಎರಡೂ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Incident from Janata Hotel – same group of #BajrangDal workers barge into hotel, tell the owner not to sell #halalmeat in hotel. Customer intervenes and gets into argument with the workers, ends up getting attacked. Case booked against them and they're arrested. pic.twitter.com/fxOxTCh9o4
— Imran Khan (@KeypadGuerilla) April 1, 2022
ಬಿಜೆಪಿ ಬೆಂಬಲಿತ ಸಂಘಟನೆಗಳು ಯುಗಾದಿ ಆಚರಣೆಯ ಸಂದರ್ಭದಲ್ಲಿ ಹಲಾಲ್ ಮಾಂಸ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿತ್ತು. ಇದಕ್ಕೆ ರಾಜ್ಯದ ಬಿಜೆಪಿ ಸರ್ಕಾರ ಬಹಿರಂಗವಾಗಿ ಬೆಂಬಲ ಕೂಡಾ ನೀಡುತ್ತಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, “ಹಲಾಲ್ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದು, ಹೈಕೋರ್ಟಿನ ಹಿಜಾಬ್ ರೋಡ್ ತೀರ್ಪಿನ ವಿರುದ್ಧ ಮುಸ್ಲಿಂ ಸಮುದಾಯದ ಪ್ರತಿಭಟನೆಯ ಪರಿಣಾಮವಾಗಿದೆ” ಎಂದು ಹೇಳಿ ಸಾಮರಸ್ಯ ಕೆಡಿಸುತ್ತಿರುವ ದುಷ್ಕರ್ಮಿಗಳನ್ನು ಸಮರ್ಥಿಸಿಕೊಂಡಿದ್ದಾರೆ.
“ಹಿಜಾಬ್ ವಿಷಯದಲ್ಲಿ ಇತ್ತೀಚಿನ ಹೈಕೋರ್ಟ್ ತೀರ್ಪನ್ನು ಪ್ರತಿಭಟಿಸಲು ಒಂದು ನಿರ್ದಿಷ್ಟ ಸಮುದಾಯದ ನಿರ್ಧಾರವು ಅಂತಹ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಅದು ಶೀಘ್ರದಲ್ಲೇ ತಣ್ಣಗಾಗಲಿ ಎಂದು ನಾನು ಬಯಸುತ್ತೇನೆ” ಎಂದು ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಭುಗಿಲೆದ್ದ ಆರ್ಥಿಕ ಬಿಕ್ಕಟ್ಟು; ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ
ಬಿಜೆಪಿ ಕಾರ್ಯಾಧ್ಯಕ್ಷ ಸಿ.ಟಿ.ರವಿ ಕೂಡ ಹಲಾಲ್ ಮಾಂಸವನ್ನು ನಿಷೇಧಿಸುವಂತೆ ಕೋರಿದ್ದು, ಇದನ್ನು ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ಆರ್ಥಿಕ ಜಿಹಾದ್ ಎಂದು ನಾಲಗೆ ಹರಿಯಬಿಟ್ಟಿದ್ದಾರೆ.
‘ಗಂಭೀರ ಆಕ್ಷೇಪ’ಗಳನ್ನು ಪರಿಶೀಲಿಸುತ್ತೇನೆ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಬಿಜೆಪಿ ಬೆಂಬಲಿತ ಗುಂಪುಗಳು ಹಲಾಲ್ ಮಾಂಸ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ ನಂತರ, ಮುಖ್ಯಮಂತ್ರಿ ಬೊಮ್ಮಾಯಿ ಹಲಾಲ್ ಮಾಂಸದ ವಿರುದ್ಧ ‘ಗಂಭೀರ ಆಕ್ಷೇಪಣೆ’ ವ್ಯಕ್ತವಾದ ಕಾರಣ ಈ ಬಗ್ಗೆ ತನಿಖೆ ನಡೆಸುವುದಾಗಿ ಬುಧವಾರ ಹೇಳಿದ್ದರು.
ಈ ವಿಷಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಿದೆ ಎಂದು ಹೇಳಿದ್ದ ಬೊಮ್ಮಾಯಿ, “ಇದು ಈ ಹಿಂದಿನಿಂದಲೂ ನಡೆಯುತ್ತಿರುವ ಅಭ್ಯಾಸವಾಗಿತ್ತು. ಈಗ, ಗಂಭೀರ ಆಕ್ಷೇಪಣೆಗಳು ಹುಟ್ಟಿಕೊಂಡಿವೆ. ನಾವು ಅದನ್ನು ಪರಿಶೀಲಿಸುತ್ತೇವೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಉಗಾದಿ ವರ್‍ಸತೊಡಕು: ದಲಿತರಿಗೆ ‘ಜಟ್ಕಾ ಕಟ್’ ಮಾಂಸ ಸಿಗುವುದೇ?


