Homeಕರ್ನಾಟಕಹೆಣ್ಣು ಮಕ್ಕಳ ಕೈಕಾಲು ತೆಗೆಯಲು ಸೂಚಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಯನ್ನೆ ಮೊದಲು ಜೈಲಿಗೆ ಕಳಿಸಬೇಕು

ಹೆಣ್ಣು ಮಕ್ಕಳ ಕೈಕಾಲು ತೆಗೆಯಲು ಸೂಚಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಯನ್ನೆ ಮೊದಲು ಜೈಲಿಗೆ ಕಳಿಸಬೇಕು

- Advertisement -
- Advertisement -

‘ಸಂಗಾತಿಯನ್ನು ಆಯ್ಕೆ ಮಾಡುವಾಗ ಮಗಳು ನಿಮ್ಮ ಮಾತು ಕೇಳದಿದ್ದರೆ ಆಕೆಯ ಕೈಯೋ ಕಾಲನ್ನೋ ಮುರಿದು ಬಿಡಿ’ ಎಂಬ ಮಾತನ್ನು ಕೊರಟಗೆರೆ ತಾಲೂಕು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯವಾದ ಸಲಹೆಯನ್ನು ನೀಡಿದ್ದಾರೆ. ಎಂಥೆಂಥ ಮಹಾಪುರುಷರು ವೀರಶೈವರಲ್ಲಿದ್ದಾರೆ ಎಂಬುದಕ್ಕೆ ಈ ಪುಣ್ಯಾತ್ಮನ ಮಾತು ಸಾಕ್ಷಿಯಾಗಿದೆ. ಸಕಲ ಜೀವಪ್ರೇಮಿಯಾಗಿರಿ ಎಂದು ಬಸವಣ್ಣನವರು ಸಾರುತ್ತ ಬಂದಿದ್ದರೆ , ಹಾರುವರ ಪ್ರಭಾವಕ್ಕೆ ಒಳಗಾದ ವೀರಶೈವವಾದಿಗಳು ಮನುವಾದಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬಿಟ್ಟಿದ್ದಾರೆ. ‘ಬ್ರಾಹ್ಮಣರಿಗಿಂತಲೂ ಬ್ರಾಹ್ಮಣ್ಯ ಹೊಂದಿದ ವ್ಯಕ್ತಿ ತುಂಬಾ ಅಪಾಯಕಾರಿ’ ಎಂಬ ಮಾತು ಸತ್ಯ.

ವೈದಿಕರಿಗಿಂತಲೂ ವೈದಿಕತ್ವದ ಬಗೆಗೆ ಆಸಕ್ತಿ ಹೊಂದಿದ ನಾನು ಅವರಿಗಿಂತಲೂ ಒಂದು ಕೈ ಮಿಗಿಲು ಎಂಬ ಧೋರಣೆಗಳುಳ್ಳ ವೀರಶೈವ ಮಠಾಧೀಶರು ತಮ್ಮ ತಲೆಯಲ್ಲಿ ವೈದಿಕತ್ವದ ಕಸವನ್ನು ತುಂಬಿಕೊಂಡು ಬಗ್ಗಡಗೊಂಡಿದ್ದಾರೆ. ಹೀಗಾಗಿಯೆ ಈ ವೀರಶೈವವಾದಿ ಮಠಾಧಿಪತಿಗಳು ನಾವೂ ಹಿಂದುಗಳು ಎಂದು ಹೇಳುತ್ತ ನಡೆದಿದ್ದಾರೆ. ಬಹುತೇಕ ವೀರಶೈವ ಪೀಠದಲ್ಲಿ ಪೀಠಾಧಿಕಾರಿಯಾಗಿ ಅಮರಿಕೊಂಡಿರುವ ಮಠಾಧೀಶರಿಗೆ ಯಾವುದೆ ತಿಳುವಳಿಕೆ ಇಲ್ಲ. ಸಂಸ್ಕøತದ ಸುಳ್ಳು ಸೊಟ್ಟುಗಳ ನಾಲ್ಕಾರು ಮಂತ್ರಗಳು ಬಾಯಿಪಾಠ ಮಾಡಿಕೊಂಡು ಕಂಡ ಕಂಡದಲ್ಲಿ ತಮ್ಮ ದಡ್ಡ ಭಕ್ತರ ಮುಂದೆ ಅವನ್ನೇ ಹೇಳಿ ತಮ್ಮ ಪ್ರೌಢಿಮೆ ಮೆರೆಯುತ್ತಾರೆ. ಇಂಥವರಿಗೆ ಸಾಮಾನ್ಯ ಜ್ಞಾನವೂ ಗಗನ ಕುಸುಮ.

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವಾ

ಎಂದು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮಹಿಳೆಯನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ. ಪ್ರೀತಿಯನ್ನು ಬಿಟ್ಟು ಜೀವನ ಮಾಡಲು ಯಾರಿಗಾದರೂ ಸಾಧ್ಯವೆ ? ನಮ್ಮೆಲ್ಲರ ಜನನಕ್ಕೆ ಮೂಲ ಕಾರಣ ಮಾಯೆ (ಪ್ರೀತಿ), ನಮ್ಮ ಮಗಳಾಗಿ ಜನಿಸುವವಳು ಹೆಣ್ಣೆ, ನಮ್ಮೊಂದಿಗೆ ಜೀವ ಪಥದಲ್ಲಿ ಹೆಜ್ಜೆ ಹಾಕುವವಳು ಹೆಣ್ಣೆ. ಇವಳನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ ಎಂದು ಹೇಳಿ ಹೆಣ್ಣನ್ನು ಗೌರವಾರ್ಹ ವ್ಯಕ್ತಿಯಾಗಿ ಕಂಡಿದ್ದಾರೆ.

ಹೆಣ್ಣು ಕೇವಲ ಭೋಗದ ವಸ್ತುವಾಗಿ ಕಂಡ ಸನಾತನ ಪರಂಪರೆಯ ಜನ ಆಕೆಯನ್ನು ಸತಿ ಸಹಗಮನಕ್ಕೆ ಹಿಂದೆ ದೂಡಿದ್ದರು. ದೇವರ ಹೆಸರಿನ ಮೇಲೆ ಆಕೆಯನ್ನು ಬಸವಿಗೆ ಬಿಟ್ಟಿದ್ದರು. ಕೆರೆಗೆ ಆಹಾರವಾಗಿಯೂ ಹೆಣ್ಣನ್ನೆ ಬಲಿಕೊಟ್ಟರು. ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಚಿಂತನೆಯೆ ಪ್ರಜಾಪ್ರಭುತ್ವ ವಿರೋಧಿ. ಬ್ರಾಹ್ಮಣಶಾಹಿ ವ್ಯವಸ್ಥೆಯಲ್ಲಿ ಇಂದಿಗೂ ಮಹಿಳೆಗೆ ಪೂಜೆಯ ಹಕ್ಕನ್ನು ನಿರಾಕರಿಸಲಾಗಿದೆ. ಮಹಿಳೆ ಮುಟ್ಟಾಗುತ್ತಾಳಾದ್ದರಿಂದ ಆಕೆ ಕೀಳು ಎಂಬುದು ಪ್ರಚಲಿತದಲ್ಲಿದೆ. ಹಲವಾರು ದೇವಸ್ಥಾನದಲ್ಲೂ ಮಹಿಳೆಯರನ್ನು ನಿರಾಕರಿಸಲಾಗಿದೆ. ಆದ್ದರಿಂದಲೆ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣದ ಹತ್ಯೆ ನಿರಾಂತಕವಾಗಿ ನಡೆದೆ ಇದೆ.

ಕೊರಟಗೆರೆಯ ಈ ಮಠಾಧೀಶನ ತಲೆಯಲ್ಲಿರುವುದು ವೈದಿಕ ಮಿದುಳು. ವೈದಿಕ ಮಿದುಳು ಸಹಜವಾಗಿಯೆ ಅಸಮತೋಲನವಾಗಿರುತ್ತದೆ. ಅದಕ್ಕೆ ಯೋಚಿಸುವ ಶಕ್ತಿ ಇರೋದಿಲ್ಲ. ತಾನಷ್ಟೇ ಶ್ರೇಷ್ಠ ಉಳಿದವರು ಕನಿಷ್ಠ ಎಂಬ ಭ್ರಮೆ ಹೊತ್ತುಕೊಂಡಿರುತ್ತದೆ. ಮಹಿಳೆ ಅಂದರೆ ಅದೊಂದು ಉಪಯೋಗಿಸಿ ಬಿಸಾಡುವ ವಸ್ತು ಮಾತ್ರವಾಗಿರುತ್ತದೆ. ಆದ್ದರಿಂದಲೆ ಹೆಣ್ಣು ನಿಮ್ಮ ಮಾತು ಕೇಳದೆ ಹೋದರೆ ಅವಳ ಕೈಯನ್ನೋ- ಕಾಲನ್ನೋ ಕತ್ತರಿಸಿ ಎಂದು ಈ ಪುಣ್ಯಾತ್ಮ ಗುರು ತನ್ನ ಭಕ್ತರಿಗೆ ಅಪ್ಪಣೆ ಕೊಡಿಸಿದ್ದಾನೆ. ಮೊದಲೆ ತಿಳುವಳಿಕೆಯ ಕೊರತೆಯಿಂದ ಮೂರಾಬಟ್ಟೆಯಾದ ಭಕ್ತರೆಂಬ ತಲೆ ಹಿಡುಕರಿಗೆ ಗುರುವಿನ(?) ಈ ಮಾತುಗಳು ಅತ್ಯಂತ ಪ್ರೇರಕ ಅನಿಸುತ್ತವೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹಾಡುತ್ತ ಗುರುವಿನ ಮಾತಿನ ಮಾರ್ಗದಲ್ಲಿ ನಡೆಯುತ್ತ ಹೋದರೆ ಒಂದೊಂದು ಕುಟುಂಬವೂ ತಮ್ಮ ಮನೆಯಲ್ಲಿಯೆ ಸ್ಮಶಾನವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ.

ಅರಿವಿಲ್ಲದೆ ನಿಮ್ಮ ಮನೆಯ ಹೆಣ್ಣು ಮಗು ಜಾರುತ್ತಿದ್ದರೆ ಆಕೆಗೆ ವಿವೇಕ ನೀಡಿ, ಸಂಯಮದಿಂದ ವರ್ತಿಸುವಂತೆ ತಿಳಿ ಹೇಳಬೇಕು. ಸಾಂಸಾರಿಕ ಜೀವನವೆಂಬದು ಸಂತಸದ ಮಾರ್ಗವಾಗಬೇಕಾದರೆ ಸತಿಪತಿಗಳೊಂದಾಗಿ ನಡೆದಾಗಲೆ ಹಿತವಾಗಬಲ್ಲುದು ಎಂಬುದನ್ನು ಅವರಿಗೆ ಮನದಷ್ಟು ಮಾಡಿಸಬೇಕು. ತಮ್ಮ ಹಾಗೂ ಆ ಹುಡುಗನ ಕುಟುಂಬದ ರೀತಿ ರಿವಾಜುಗಳು ಹೊಂದಿಕೆಯಾಗಬಲ್ಲವೆ ? ಎಂಬುದನ್ನು ಇಣುಕಿ ನೋಡಲು ಹಚ್ಚಬೇಕು.

ಇಂಥ ಮನ ಬದಲಾವಣೆಯ ಚಿಂತನೆಯನ್ನು ಬಿಟ್ಟು, ಆ ಹೆಣ್ಣು ಮಗುವಿನ ಕಾಲೋ ಕೈಯೋ ತೆಗೆಯಿರಿ. ಅವಳನ್ನು ಶಾಶ್ವತ ಅಂಗವೈಕಲ್ಯಕ್ಕೆ ದೂಡಿ ಎಂಬ ವಿವೇಕರಹಿತ ವೀರಭದ್ರಶಿವಾಚಾರ್ಯನನ್ನು ಯಾವುದೆ ಮುಲಾಜು ಇಲ್ಲದೆ ಜೈಲಿಗೆ ಅಟ್ಟಬೇಕು. ಹಿಂಸೆಯನ್ನು ಪ್ರಚೋದಿಸುವ ಇಂಥ ಮಠಾಧೀಶ ಇದ್ದರೆಷ್ಟು? ಬಿಟ್ಟರೆಷ್ಟು! ಇನ್ನಾದರೂ ವೀರಶೈವ ವಾದಿಗಳು ಇಂಥ ಅಯೋಗ್ಯ ಮಠಾಧೀಶರ ಬೆನ್ನುಬಿದ್ದು ತಮ್ಮನ್ನು ತಾವು ಹಾಳು ಮಾಡಿಕೊಳ್ಳದೆ, ತಮ್ಮ ಬದುಕನ್ನು ಶರಣರ ವಚನಗಳ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...