Homeಮುಖಪುಟ10 ಸಾವಿರ ವೆಚ್ಚದಲ್ಲಿ ವೆಂಟಿಲೇಟರ್‌ ತಯಾರಿಸಿದ ಕಾಶ್ಮೀರಿ ಯುವಕರ ತಂಡ!

10 ಸಾವಿರ ವೆಚ್ಚದಲ್ಲಿ ವೆಂಟಿಲೇಟರ್‌ ತಯಾರಿಸಿದ ಕಾಶ್ಮೀರಿ ಯುವಕರ ತಂಡ!

- Advertisement -
- Advertisement -

ಜಮ್ಮು-ಕಾಶ್ಮೀರದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಸ್ಥಳೀಯವಾಗಿ ಸಿಗುವ ಉಪಕರಣಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದ ವೆಂಟಿಲೇಟರ್ ಸಿದ್ದಪಡಿಸಿದ್ದಾರೆ. ಅದಕ್ಕೆ ರೌಡಾರ್ ಎಂದು ಹೆಸರಿಡಲಾಗಿದೆ.

ಇಂಡಿಯನ್ ಇನ್ಸ್ಟಿಟೂಟ್ ಆಫ್ ಬಾಂಬೆಯ ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್ ನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಜಲ್ ಕಾರ್ನಾಯಿಸ್ ನೇತೃತ್ವದ ತಂಡ ಈ ತಾಂತ್ರಿಕ ವೆಂಟಿಲೇಟರ್‌ಅನ್ನು ಸಿದ್ದಪಡಿಸಿದೆ. ಇದಕ್ಕೆ ತಗುಲಿದ ವೆಚ್ಚ 10 ಸಾವಿರ ರೂಪಾಯಿ ಎಂದು ಹೇಳಿಕೊಂಡಿದೆ.

ತಂಡದಲ್ಲಿ ಪಿ.ಎಸ್.ಶೋಯಿಬ್, ಆಸಿಪ್ ಶಾ, ಶಾಖರ್ ನೆವಿ, ಮುಜೀದ್ ರೌಲ್ ಇದ್ದು ಕೇವಲ 10 ಸಾವಿರ ರೂಪಾಯಿ ವೆಚ್ಚದಲ್ಲಿ ವೆಂಟಿಲೇಟರ್ ನಿರ್ಮಿಸಿದೆ. ಹೆಚ್ಚು ಹೆಚ್ಚು ತಯಾರಿಸಿದರೆ ಅದರ ವೆಚ್ಚ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಂಡ ಹೇಳಿದೆ.

ಇದು ಕೇವಲ ಇಂಡಸ್ಟ್ರಿಯಲ್ ಉದ್ದೇಶಕ್ಕಾಗಿ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೂ ಇದು ಅಗತ್ಯವಾಗಲಿದೆ. ಆರಂಭದಲ್ಲಿ ನಮಗೆ ಸಂಪನ್ಮೂಲದ ಕೊರತೆ ಎದುರಿಸಿದೆವು. ಯಾವ ಮಾದರಿಯ ವೆಂಟಿಲೇಟರ್ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡು ಸ್ಥಳೀಯವಾಗಿಯೇ ಸಿಗುವ ಉಪಕರಣಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಸಿದ್ದಪಡಿಸಿದ್ದೇವೆ ಎಂದು ಜಲ್ ಕಾರ್ನಾಯಿಸ್ ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ನರ್ಸ್‌ ಆಗಿ ಬದಲಾದ ಮುಂಬೈ ಮೇಯರ್‌: ಭಾರೀ ಮೆಚ್ಚುಗೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...