ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ನಿನ್ನೆ (ಅ.8) ಪ್ರಕಟಗೊಂಡಿದ್ದು, 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮೂರನೇ ಬಾರಿಗೆ ಸರ್ಕಾರ ರಚಿಸಲು ಮುಂದಾಗಿದೆ. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ತಲೆಕೆಳಗಾಗಿ ಕಾಂಗ್ರೆಸ್ 37 ಕ್ಷೇತ್ರಗಳನ್ನು ಮಾತ್ರ ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದೆ.
ಕಾಂಗ್ರೆಸ್ ಸರ್ಕಾರ ರಚಿಸಿಯೇ ಬಿಟ್ಟಿತು ಎಂಬ ಪರಿಸ್ಥಿತಿಯ ನಡುವೆ ಬಿಜೆಪಿ ಗೆಲುವು ಸಾಧಿಸಿರುವುದು ಸ್ವತಃ ಬಿಜೆಪಿಯವರಿಗೇ ಆಶ್ವರ್ಯವಾಗಿದೆ. ಕಾಂಗ್ರೆಸ್ ಸೋಲಿನ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದೆ.
ಈ ನಡುವೆ ಆಮ್ ಆದ್ಮಿ ಪಕ್ಷ (ಎಎಪಿ)ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ತಮ್ಮದೇ ಪಕ್ಷದ ವಿರುದ್ದ ಗಂಭೀರ ಆರೋಪ ಮಾಡಿದ್ದು, “ಎಎಪಿ ಹರಿಯಾಣದಲ್ಲಿ ಸ್ಪರ್ಧಿಸಿದ್ದೇ ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು” ಎಂದಿದ್ದಾರೆ.
“ಬಿಜೆಪಿಗೆ ಸವಾಲು ಹಾಕಿದ್ದ ವಿನೇಶ್ ಪೋಗಟ್‌ನಂತವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಸೋಲಿಗೆ ಎಎಪಿ ಕಾರಣವಾಗಿದೆ. ಎಎಪಿಗೆ ಬಿಜೆಪಿಯನ್ನು ಸೋಲಿಸುವತ್ತ ಗಮನ ಇರಲಿಲ್ಲ” ಎಂದು ಹೇಳಿದ್ದಾರೆ.
सिर्फ़ कांग्रेस से बदला लेने के लिए हरियाणा में उतरे। मुझपे BJP एजेंट होने के झूठे आरोप लगाए, ख़ुद आज INDIA अलायन्स से ग़द्दारी करके INC की वोट काट रहे हैं!
सब छोड़ो, विनेश फोगाट तक को हराने के लिए प्रत्याशी उतारा।
क्यों ऐसा हाल आ गया है कि अपने गृह राज्य में ज़मानतें नहीं बचा…
— Swati Maliwal (@SwatiJaiHind) October 8, 2024
“ನನ್ನನ್ನು ಬಿಜೆಪಿ ಏಜೆಂಟ್ ಎಂದು ಎಎಪಿ ಸುಳ್ಳಾರೋಪ ಹೊರಿಸಿತ್ತು. ಆದರೆ, ಈಗ ಅದುವೇ ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹ ಬಗೆದಿದೆ” ಎಂದು ಮಲಿವಾಲ್ ಕಿಡಿಕಾರಿದ್ದಾರೆ.
ಎಎಪಿ ನಾಯಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಎಕ್ಸ್‌ನಲ್ಲಿ ಟೀಕಾ ಪ್ರಹಾರ ನಡೆಸಿರುವ ಮಲಿವಾಲ್, “ನಿಮ್ಮ ತವರು ರಾಜ್ಯ ಹರಿಯಾಣದಲ್ಲಿ ಎಎಪಿ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ. ಆದರೆ, ಇನ್ನೂ ಸಮಯ ಮೀರಿಲ್ಲ. ನಿಮ್ಮ ಅಹಂ ತ್ಯಜಿಸಿ, ಕಣ್ಣುಗಳಿಂದ ಪರದೆಯನ್ನು ಸರಿಸಿ. ಜನರಿಗಾಗಿ ದುಡಿಯಿರಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Jammu and Kashmir Assembly Elections 2024 | ಸೋತರೂ ಗೆದ್ದ ಬಿಜೆಪಿ; ಗೆದ್ದರೂ ಸೋತ ಕಾಂಗ್ರೆಸ್; ಪಾರಮ್ಯ ಮೆರೆದ ಎನ್‌ಸಿ!


