Homeಮುಖಪುಟತೆರಿಗೆ ಹೆಚ್ಚಳದ ವಿರುದ್ದ ದೆಹಲಿಯಲ್ಲಿ ಸಹಿ ಸಂಗ್ರಹ ಮಾಡುತ್ತಿರುವ ಎಎಪಿ; ಬಿಜೆಪಿ ಪ್ರತಿಕ್ರಿಯಿಸಿದ್ದೇನು?

ತೆರಿಗೆ ಹೆಚ್ಚಳದ ವಿರುದ್ದ ದೆಹಲಿಯಲ್ಲಿ ಸಹಿ ಸಂಗ್ರಹ ಮಾಡುತ್ತಿರುವ ಎಎಪಿ; ಬಿಜೆಪಿ ಪ್ರತಿಕ್ರಿಯಿಸಿದ್ದೇನು?

- Advertisement -
- Advertisement -

ದೆಹಲಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ಸ್ಥಳೀಯ ಸಂಸ್ಥೆಗಳ “ಹೊಸ ಕಠಿಣ ನೀತಿಗಳು” ಮತ್ತು ತೆರಿಗೆ ಹೆಚ್ಚಳದ ವಿರುದ್ಧದ ಅಭಿಯಾನದ ಭಾಗವಾಗಿ ತಮ್ಮ ಪಕ್ಷವು ಒಂದು ಲಕ್ಷ ಸಹಿಯನ್ನು ಸಂಗ್ರಹಿಸಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ನಾಯಕ ಸೌರಭ್ ಭರದ್ವಾಜ್ ಬುಧವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ವಕ್ತಾರ ಭಾರದ್ವಾಜ್, “ಬಿಜೆಪಿ ಆಡಳಿತದ ದೆಹಲಿ ಮುನ್ಸಿಪಲ್ ಕಾರ್ಪೋರೇಷ್‌‌ನ ‘ಕಠಿಣ ಹೊಸ ನೀತಿಗಳು’ ಮತ್ತು ತೆರಿಗೆ ಹೆಚ್ಚಳ ವಿರುದ್ಧ ಪಕ್ಷವು ನಡೆಸುತ್ತಿರುವ ಅಭಿಯಾನವು 1 ಲಕ್ಷ ಸಹಿಗಳನ್ನು ಸಂಗ್ರಹಿಸಿದೆ” ಎಂದು ಹೇಳಿದ್ದಾರೆ.

ಹೊಸ ನೀತಿಗಳನ್ನು ಜಾರಿಗೆ ತಂದ ನಂತರ ಮತ್ತು ತೆರಿಗೆ ಹೆಚ್ಚಳದ ನಂತರ ಬಿಜೆಪಿ ಆಡಳಿತದ ನಾಗರಿಕ ಸಂಸ್ಥೆಗಳ ವಿರುದ್ಧ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಪಕ್ಷ ನಾಯಕರು ನಮ್ಮ ಕೆಲಸವನ್ನು ಹೊಗಳುತ್ತಿದ್ದಾರೆ-ಸಿಧು ಹೇಳಿಕೆಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

“ಆಮ್ ಆದ್ಮಿ ಪಕ್ಷವು ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಕೌನ್ಸಿಲರ್‌ಗಳು ವ್ಯಾಪಾರಿಗಳ ಸಹಿಯನ್ನು ಸಂಗ್ರಹಿಸಲು ವಿವಿಧ ಮಾರುಕಟ್ಟೆಗಳಿಗೆ ಮತ್ತು ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು, ಪಕ್ಷವು ತನ್ನ ಮೈಲಿಗಲ್ಲನ್ನು ತಲುಪಿದೆ. ಒಟ್ಟು ಒಂದು ಲಕ್ಷ ಸಹಿಯನ್ನು ಸಂಗ್ರಹಿಸಲಾಗಿದೆ” ಎಂದು ಭರದ್ವಾಜ್ ಹೇಳಿದ್ದಾರೆ.

ಆಮ್‌ ಆದ್ಮಿ ಪಕ್ಷದ ಹೇಳಿಕೆಗೆ ದೆಹಲಿ ಬಿಜೆಪಿ ಪ್ರತಿಕ್ರಿಸಿದ್ದು, “ಎಎಪಿ ನಾಯಕರು ತಮ್ಮ ಭ್ರಮೆಯ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ. ತಾವು ಏನು ಕನಸು ಕಾಣುತ್ತಿದ್ದೇವೂ ಅದನ್ನೆ ಎಲ್ಲರೂ ನಂಬಬೇಕೆಂದು ಬಯಸುತ್ತಾರೆ” ಎಂದು ಹೇಳಿದೆ.

“ನಾನು ಹಳೆಯ ದೆಹಲಿ ಮೂಲದ ವ್ಯಾಪಾರಿಯಾಗಿದ್ದು, ಹಳೆಯ ದೆಹಲಿಯ ವ್ಯಾಪಾರಿಗಳಾಗಲಿ ಅಥವಾ ಇತರ ಯಾವುದೇ ಪ್ರಮುಖ ಮಾರುಕಟ್ಟೆಯ ವ್ಯಾಪಾರಿಗಳಾಗಲಿ, ಯಾರೂ ಕೂಡಾ ಎಎಪಿ ಸಹಿ ಸಂಗ್ರಹ ಅಭಿಯಾನದ ಬಗ್ಗೆ ಕೇಳಿಲ್ಲ” ಎಂದು ಹೇಳಿದ್ದಾರೆ.

ದೆಹಲಿಯ ವ್ಯಾಪಾರಿಗಳು ಯಾವಾಗಲೂ ಬಿಜೆಪಿಗೆ ಬೆಂಬಲವಾಗಿ ನಿಂತಿದ್ದಾರೆ. ಕೆಲವು ಶುಲ್ಕಗಳ ಏರಿಕೆಯಿಂದಾಗಿ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಪಕ್ಷವು ಗಣನೆಗೆ ತೆಗೆದುಕೊಂಡಿದ್ದು, ಅವಗಳನ್ನು ಶೀಘ್ರದಲ್ಲೇ ಪರಿಹರಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಕಡಿತವಿಲ್ಲ, 300 ಯುನಿಟ್ ಉಚಿತ ವಿದ್ಯುತ್- ಉತ್ತರಾಖಂಡ ಚುನಾವಣೆಗೆ ಕೇಜ್ರಿವಾಲ್ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...