Homeಮುಖಪುಟಯುಪಿ ಚುನಾವಣೆ ಪ್ರಚಾರ ಪ್ರಾರಂಭಿಸಿದ ಎಎಪಿ: 300 ಯೂನಿಟ್‌‌ವರೆಗೆ ಉಚಿತ ವಿದ್ಯುತ್‌ ಭರವಸೆ!

ಯುಪಿ ಚುನಾವಣೆ ಪ್ರಚಾರ ಪ್ರಾರಂಭಿಸಿದ ಎಎಪಿ: 300 ಯೂನಿಟ್‌‌ವರೆಗೆ ಉಚಿತ ವಿದ್ಯುತ್‌ ಭರವಸೆ!

- Advertisement -
- Advertisement -

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ದೆಹಲಿ ಮುಖ್ಯಮಂತ್ರಿ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಕೂಡಾ ಸ್ಪರ್ಧಿಸಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಪಕ್ಷವು, ತನ್ನ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿರುವ ‘ಉಚಿತ ವಿದ್ಯುತ್‌’ ನೀಡುವ ಭರವಸೆಯನ್ನು ರಾಜ್ಯದ ಜನತೆಗೆ ನೀಡಿದೆ. ಚುನಾವಣಾ ಅಭಿಯಾನವನ್ನು ಪಕ್ಷವು ರಾಜ್ಯದ ಗೌತಮಬುದ್ದ ನಗರ ಜಿಲ್ಲೆಯಿಂದ ಪ್ರಾರಂಭಿಸಿದೆ.

ರಾಜ್ಯದ ಜನತೆಗೆ ಪಕ್ಷವು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ ಎಂದು ಪಕ್ಷದ ಪದಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. “ಉಚಿತ ವಿದ್ಯುತ್” ಅಭಿಯಾನವನ್ನು ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಸಂಜಯ್ ಸಿಂಗ್ ಅವರು ಅಕ್ಟೋಬರ್ 10 ರಂದು ಆರಂಭಿಸಿದ್ದಾರೆ ಎಂದು ಎಎಪಿ ಗೌತಮ್ ಬುದ್ಧ ನಗರ ಘಟಕದ ಅಧ್ಯಕ್ಷ ಭೂಪೇಂದ್ರ ಜಡೌನ್ ಹೇಳಿದ್ದಾರೆ.

ಇದನ್ನೂ ಓದಿ: ಗೋವಾ ಚುನಾವಣೆ: ನಿರುದ್ಯೋಗಿಗಳಿಗೆ ಭತ್ಯೆ, ಸ್ಥಳೀಯರಿಗೆ 80% ಮೀಸಲಾತಿ – ಕೇಜ್ರಿವಾಲ್ ಘೋಷಣೆ

“ಈ ಅಭಿಯಾನ ಇದುವರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಎಎಪಿ ಕಾರ್ಯಕರ್ತರು ಇಲ್ಲಿರುವ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಾದ ನೋಯ್ಡಾ, ಜೇವರ್ ಮತ್ತು ದಾದ್ರಿಗಳಲ್ಲಿ ಮತದಾರರನ್ನು ತಲುಪುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರು ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 300 ಯೂನಿಟ್ ವಿದ್ಯುತ್ ಅನ್ನು ಜನರಿಗೆ ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಮತ್ತು ಅವರ ಬಾಕಿ ಬಾಕಿ ಮನ್ನಾ ಮಾಡಲಾಗುವುದು ಎಂದು ಜಡೌನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಭಿಯಾನದ ಭಾಗವಾಗಿ, ಎಎಪಿ ಕಾರ್ಯಕರ್ತರು “ಪ್ರೀ ಬಿಜ್ಲಿ ಕಿ ಬಾತ್, ಜನತಾ ಕೇ ಸಾಥ್” ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಜಿಲ್ಲೆಯ ಪ್ರತಿ ಮನೆಗೂ “ಖಾತರಿ ಕಾರ್ಡ್” ನೀಡಲಾಗುತ್ತಿದೆ. ಮೂಲ ಸೌಕರ್ಯಗಳ ಸಮಸ್ಯೆಗಳೊಂದಿಗೆ ಸಾರ್ವಜನಿಕರ ಬಳಿಗೆ ಹೋಗುವುದರಿಂದ, ಜನರ ಪ್ರೀತಿ ಮತ್ತು ಬೆಂಬಲ ಲಭ್ಯವಾಗುತ್ತದೆ ಎಂದು ನಾವು ನಂಬುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೈತರ ಮೇಲೆ ನಿಮಗ್ಯಾಕೆ ಅಷ್ಟೊಂದು ದ್ವೇಷ: ಪ್ರಧಾನಿಗೆ ಕೇಜ್ರಿವಾಲ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...