ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ, ಗುರುವಾರ ಲಡಾಖ್ ಘರ್ಷಣೆಯನ್ನು ನಿಲ್ಲಿಸುವುದರ ಕುರಿತು ಚರ್ಚಿಸಿದ್ದಾರೆ.
ಜೂನ್ 15 ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.
ಜುಲೈ 31 ರಂದು, ಭಾರತ ಮತ್ತು ಭೂತಾನ್‌ನಲ್ಲಿ ಚೀನಾ ಪ್ರಾದೇಶಿಕ ಹಕ್ಕುಗಳನ್ನು ಮಂಡಿಸುವುದರೊಂದಿಗೆ ಜಗತ್ತನ್ನು ಪರೀಕ್ಷಿಸಲಾಗುತ್ತಿದೆ ಆದರೆ, ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳು ಚೀನಾದ ಬೆದರಿಕೆಗಳಿಂದ ಜಗತ್ತನ್ನು ಜಾಗೃತಗೊಳಿಸಿವೆ ಎಂದು ಪೊಂಪಿಯೊ ಹೇಳಿದ್ದಾರೆ.
ನಮ್ಮ ಹುರುಪಿನ ರಾಜತಾಂತ್ರಿಕತೆಯು ಸಿ.ಸಿ.ಪಿ [ಚೈನೀಸ್ ಕಮ್ಯುನಿಸ್ಟ್ ಪಾರ್ಟಿ] ಯ ಬೆದರಿಕೆಗೆ ಅಂತರರಾಷ್ಟ್ರೀಯ ಜಾಗೃತಿ ಮೂಡಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಮತ್ತು ಶಾಂತಿ ಪ್ರಕ್ರಿಯೆಯನ್ನು ನಿಯಂತ್ರಿಸುವ ಪ್ರಯತ್ನಗಳು ಸೇರಿದಂತೆ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ನಡೆಯುತ್ತಿರುವ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರದ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಕೇಲ್ ಬ್ರೌನ್ ಹೇಳಿದ್ದಾರೆ.
“ಕಾರ್ಯದರ್ಶಿ ಪೊಂಪಿಯೊ ಮತ್ತು ಸಚಿವ ಜೈಶಂಕರ್ ಅವರು ಇಂಡೋ-ಪೆಸಿಫಿಕ್ ಮತ್ತು ಜಗತ್ತಿನಾದ್ಯಂತ ಶಾಂತಿ, ಸಮೃದ್ಧಿ ಮತ್ತು ಭದ್ರತೆಯನ್ನು ಮುನ್ನಡೆಸಲು ಅಮೇರಿಕಾ-ಭಾರತ ಸಂಬಂಧದ ಒಟ್ಟು ಬಲದ ಸಹಮತವಿದೆ ಎಂದು ಪುನರುಚ್ಚರಿಸಿದರು” ಎಂದು ವಕ್ತಾರರು ಹೇಳಿದ್ದಾರೆ.
ಜೈಶಂಕರ್ ಮತ್ತು ಪೊಂಪಿಯೊ ವಿವಿಧ ವಿಷಯಗಳ ಬಗ್ಗೆ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅಮೇರಿಕಾ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನೊಂದಿಗಿನ ಒಪ್ಪಂದದ ಬಗ್ಗೆ ಸಮಾಲೋಚನೆ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಅಮೇರಿಕಾ-ಭಾರತ 2 + 2 ಮಂತ್ರಿ ಸಂವಾದವನ್ನು ಎದುರು ನೋಡುತ್ತೇವೆ ಎಂದು ಅವರು ಹೇಳಿದರು.
ನವೆಂಬರ್ 2017 ರಲ್ಲಿ, ಭಾರತ, ಪೆಸಿಫಿಕ್‌ನಲ್ಲಿನ ನಿರ್ಣಾಯಕ ಸಮುದ್ರ ಮಾರ್ಗಗಳನ್ನು ಚೀನಾದ ಪ್ರಭಾವದಿಂದ ದೂರವಿಡುವ ಪ್ರಯತ್ನದಲ್ಲಿ, ಹೊಸ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಭಾರತ, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಲ್ಕು ದೇಶಗಳು ಸೇರಿ ಚತುರ್ಭುಜ ಒಕ್ಕೂಟವನ್ನು ರಚಿಸಿದವು.
ನವೆಂಬರ್ 2018 ರಲ್ಲಿ, ಮೊದಲ ಭಾರತ-ಯುಎಸ್ 2 + 2 ಸಂವಾದವನ್ನು, ಒಂದು ಕಡೆ ರಕ್ಷಣಾ ಸಚಿವರು ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು, ಇನ್ನೊಂದೆಡೆ ರಕ್ಷಣಾ ಕಾರ್ಯದರ್ಶಿ ಮತ್ತು ಅಮೇರಿಕಾ ರಾಜ್ಯ ಕಾರ್ಯದರ್ಶಿ ನಡುವೆ ನಡೆಸಲಾಯಿತು.
ಇದನ್ನೂ ಓದಿ: 500 ಮಿಲಿಯನ್ ಡಾಲರ್ ಖರ್ಚಿನಲ್ಲಿ ಡಾಟಾ ಸೆಂಟರ್ ಸ್ಥಾಪಿಸುತ್ತಿರುವ ಟಿಕ್‌ಟಾಕ್!


