ಸಮುದ್ರ ಗಡಿ ದಾಟಿದ ಆರೋಪ; ಮತ್ತೆ 23 ತಮಿಳು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಅಂತಾರಾಷ್ಟ್ರೀಯ ಕಡಲ ಗಡಿ ದಾಟಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ತಮಿಳುನಾಡಿನ 23 ಮೀನುಗಾರರನ್ನು ಬಂಧಿಸಿ ಮೂರು ದೋಣಿಗಳನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಈ ಮೀನುಗಾರರು ನೆಡುಂತೀವು ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಶ್ರೀಲಂಕಾ ನೌಕಾಪಡೆಯ ಗಸ್ತು ದೋಣಿ ಅವರನ್ನು ಸುತ್ತುವರೆದಿದೆ. ಬಂಧಿತ ಮೀನುಗಾರರನ್ನು ಕಂಕಸಂತುರೈ ನೌಕಾ ಶಿಬಿರಕ್ಕೆ ಕರೆದೊಯ್ಯಲಾಗಿದ್ದು, ಜಾಫ್ನಾ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಅಕ್ಟೋಬರ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಸಮುದ್ರದ ಗಡಿ ದಾಟಿದ ಆರೋಪದ ಮೇಲೆ ರಾಮೇಶ್ವರಂನ 16 ಮೀನುಗಾರರನ್ನು ಶ್ರೀಲಂಕಾ … Continue reading ಸಮುದ್ರ ಗಡಿ ದಾಟಿದ ಆರೋಪ; ಮತ್ತೆ 23 ತಮಿಳು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ