Homeಮುಖಪುಟಸಂಸತ್ತಿನಲ್ಲಿ ಸಕ್ರಿಯವಾಗಿ, ಜನರಿಗೆ ಹತ್ತಿರವಾಗಬೇಕು; ರಾಹುಲ್ ಗಾಂಧಿಗೆ ದಿಗ್ವಿಜಯ್ ಸಿಂಗ್ ಸಲಹೆ

ಸಂಸತ್ತಿನಲ್ಲಿ ಸಕ್ರಿಯವಾಗಿ, ಜನರಿಗೆ ಹತ್ತಿರವಾಗಬೇಕು; ರಾಹುಲ್ ಗಾಂಧಿಗೆ ದಿಗ್ವಿಜಯ್ ಸಿಂಗ್ ಸಲಹೆ

ಕಾಂಗ್ರೆಸ್ಸಿನ ಹಲವಾರು ನಾಯಕರು ತಮ್ಮದೇ ಆದ ಬೇಡಿಕೆಯೊಂದಿಗೆ ಮನವಿ ಮಾಡಿದರು.

- Advertisement -
- Advertisement -

ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಿ ಮರಳಿ ಅಧಿಕಾರ ವಹಿಸಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಮುಖಂಡರು ಇಂದು, ಅವರ ಕುಟುಂಬ ಹಿನ್ನೆಲೆಯುಳ್ಳ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರೊಂದಿಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ಸಿನ ಹಲವಾರು ನಾಯಕರು ತಮ್ಮದೇ ಆದ ಬೇಡಿಕೆಯೊಂದಿಗೆ ಮನವಿ ಮಾಡಿದರು. ಅವರಲ್ಲಿ ಗಾಂಧಿ ಕುಟುಂಬ ನಿಷ್ಠಾವಂತ ಮತ್ತು ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ 2018 ರಲ್ಲಿ ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಳ್ಳುವ ಮೊದಲು ಪಕ್ಷದ ಮುಖ್ಯಸ್ಥರ ಹುದ್ದೆಗೆ ಒಂದಕ್ಕಿಂತ ಹೆಚ್ಚು ಬಾರಿ ಅವರನ್ನು ಆಯ್ಕೆ ಮಾಡಿದ್ದರು.

ಸಂಸತ್ತಿನಲ್ಲಿ ಹೆಚ್ಚು ಸಕ್ರಿಯ ವಾಗಿರಬೇಕು ಎಂದು ರಾಹುಲ್ ಗಾಂಧಿಗೆ ಹೇಳಿದರು. ಅವರು ಜನರಿಗೆ ಹೆಚ್ಚು ಹತ್ತಿರವಾಗಬೇಕು ಎಂದು ಹೇಳುವ ಮೂಲಕ ರಾಹುಲ್ ಗಾಂಧಿಯವರ ಸಾಮೂಹಿಕ ಸಂಪರ್ಕದ ಕೊರತೆಯ ಟೀಕೆಗಳನ್ನು ಮೌನವಾಗಿ ಒಪ್ಪಿ, ಸಲಹೆ ನಿಡಿದ್ದಾರೆ.

ಈ ಮೂಲಕ ಶರದ್ ಪವಾರ್ ರಾಹುಲ್ ಗಾಂಧಿಗೆ ನೀಡಿದ ಸಲಹೆಯನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

“ರಾಹುಲ್ ರಾಜಕೀಯವನ್ನು ವಿಭಿನ್ನವಾಗಿ ಮಾಡಲು ಬಯಸುತ್ತಾನೆ. ನಾವು ಅವನಿಗೆ ಹಾಗೆ ಮಾಡಲು ಅವಕಾಶ ನೀಡಬೇಕು. ಆದರೆ ನಂತರ ಆತ ಸಂಸತ್ತಿನಲ್ಲಿ ಹೆಚ್ಚು ಸಕ್ರಿಯರಾಗಿರಬೇಕು ಮತ್ತು ಜನರಿಗೆ ಹೆಚ್ಚು ಹತ್ತಿರವಾಬೇಕೆಂದು ನಾವು ಬಯಸುತ್ತೇವೆ. ಶರದ್ ಪವಾರ್ ಅವರ ಸಲಹೆಯಂತೆ ಅವರು ಭಾರತದಾದ್ಯಂತ ಯಾತ್ರೆ ಹೋಗಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗುರುವಾರ, ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥರಾಗಿ ಮರಳಬೇಕೆಂದು ಕರೆ ನೀಡಿ, ಕಳೆದ ಯುಪಿಎ ಸರ್ಕಾರದ ಭಾಗವಾಗಿದ್ದವರು ಪಕ್ಷದ ಶೀಘ್ರ ಕುಸಿತಕ್ಕೆ ಕಾರಣವೆಂದು ಕಿರಿಯ ನಾಯಕರು ವಾದಿಸಿದರು.

ಹತ್ತು ವರ್ಷ ಆಡಳಿತ ನಡೆಸಿದ್ದ ಯುಪಿಎ 2014ರಲ್ಲಿ ಅಧಿಕಾರವನ್ನು ಕಳೆದುಕೊಂಡಿತ್ತು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಸಹ ತೀರಾ ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಗೆದ್ದುಕೊಂಡಿತ್ತು. ರಾಹುಲ್ ಗಾಂಧಿ ಕೂಡ ಅಮೇಠಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು.

ನಂತರ ರಾಹುಲ್ ಗಾಂಧಿ ನೈತಿಕ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಪಕ್ಷದ ಆಂತರಿಕ ಸಭೆಯಲ್ಲಿ ಹಲವಾರು ಭಿನ್ನ ಅಭಿಪ್ರಾಯಗಳು ಹೊರ ಬಂದವು.

2014ರ ಚುನಾವಣೆಯ ಸೋಲು, 2019ರ ಸೋಲು, ನಾಯಕತ್ವ, ಹಿರಿಯರು-ಕಿರಿಯರ ನಡುವಿನ ಭಿನ್ನಾಭಿಪ್ರಾಯ, ಮನಮೋಹನ್ ಸಿಂಗ್, ಕೊರೊನಾ ಪರಿಸ್ಥಿತಿಯಲ್ಲಿ  ಪಕ್ಷದ ಕೆಲಸ, ಬಿಜೆಪಿ ವಿರುದ್ಧದ ದಾಳಿ ಮುಂತಾದ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.

ಆದರೆ ಈಗ ನಾವು ಬಿಜೆಪಿ, ಆರ್ ಎಸ್ ಎಸ್, ಮೋದಿ-ಶಾ ವಿರುದ್ದ ಹೋರಾಡುವಲ್ಲಿ ಒಂದಾಗಬೇಕು. ಇದಕ್ಕಾಗಿ ಒಮ್ಮತದ ಅಭಿಪ್ರಾಯ ಇರಬೇಕು ಎಂದು ತಮಿಳುನಾಡಿನ ಕಿರಿಯ ಕಾಂಗ್ರೇಸ್ ನಾಯಕ ಮಾಣಿಕ್ಕಂ ಠಾಗೋರ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: BCG ಲಸಿಕೆ ಕೊರೊನಾ ಹರಡುವಿಕೆಯನ್ನು ನಿಧಾನಗೊಳಿಸಬಹುದು: ವಿಜ್ಞಾನಿಗಳ ಸಂಶೋಧನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...