Homeಮುಖಪುಟಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ : ನಟ ರಜನಿಕಾಂತ್

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ : ನಟ ರಜನಿಕಾಂತ್

- Advertisement -

ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್), ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಕುರಿತು ರಾಜಕೀಯ ಪಕ್ಷಗಳು ಸಾರ್ವಜನಿಕರನ್ನು ಪ್ರಚೋದಿಸುತ್ತಿವೆ ಎಂದು ನಟ ರಜನಿಕಾಂತ್ ಹೇಳಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ದೇಶದಲ್ಲಿ ಮುಸ್ಲಿಮರಿಗೆ ಏನಾದರೂ ತೊಂದರೆಯಾದರೆ ನಾನು ಅವರ ಪರವಾಗಿ ದ್ವನಿ ಎತ್ತುತ್ತೇನೆ’ ಎಂದರು.

“ಈ ಕಾನೂನಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಿಎಎ ಮೇಲೆ ಭಯವನ್ನು ಹರಡುತ್ತಿವೆ ಇದು ತುಂಬಾ ತಪ್ಪು. ಸಿಎಎ ಭಾರತೀಯ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸ್ಪಷ್ಟವಾಗಿ ಹೇಳಿದೆ. ಇದು ನೆರೆಯ ರಾಷ್ಟ್ರಗಳ ನಿವಾಸಿಗಳಿಗೆ ಪೌರತ್ವ ನೀಡುವ ಕಾನೂನಾಗಿದೆ ” ಎಂದು ರಜನಿಕಾಂತ್ ಹೇಳಿದರು.

“ಇಲ್ಲಿ ಮುಸ್ಲಿಮರು ಚೆನ್ನಾಗಿಯೆ ಇದ್ದಾರೆ, ಅವರನ್ನು ಕೆಲವರು ಪ್ರಚೋದಿಸುತ್ತಿದ್ದಾರೆ, ವಿಭಜನೆಯ ಸಮಯದಲ್ಲಿ ಕೆಲವರು ಪಾಕಿಸ್ತಾನಕ್ಕೆ ಹೋದರೆ ಉಳಿದುಕೊಂಡಿರುವ ಮುಸ್ಲಿಮರು ಇದುವೆ ನಮ್ಮ ತಾಯಿನಾಡು ಎಂದು ನಿರ್ಧರಿಸಿ ಇಲ್ಲಿಯೆ ವಾಸಿಸುವುದಾಗಿ ಉಳಿದವರು, ಯಾರಾದರೂ ಅವರನ್ನು ದೇಶದಿಂದ ಹೊರಗೆ ಕಳುಹಿಸುವುದು ಹೇಗೆ? ಇಲ್ಲಿ ಮುಸ್ಲಿಮರಿಗೆ ಏನಾದರೂ ತೊಂದರೆಯಾದರೆ ನಾನು ಮೊದಲು ಧ್ವನಿ ಎತ್ತುತ್ತೇನೆ. ಎಂದಿದ್ದಾರೆ.

“ಸಿಎಎ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಮೊದಲು ಆಳವಾಗಿ ವಿಶ್ಲೇಷಿಸಬೇಕು. ಜೊತೆಗೆ ಪ್ರಾಧ್ಯಾಪಕರು ಅಥವಾ ಹಿರಿಯರೊಂದಿಗೆ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ರಾಜಕೀಯ ಮುಖಂಡರು ತಮ್ಮನ್ನು ಲಾಭಕ್ಕಾಗಿ ಬಳಸುತ್ತಾರೆ . ಒಂದು ವೇಳೆ ಎಫ್ಐಆರ್ ಆದರೆ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಕಳೆದುಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ನಾಗರಿಕರು ಮತ್ತು ವಿದೇಶಿಯರ ನಡುವೆ ವ್ಯತ್ಯಾಸವನ್ನು ತೋರಿಸಲು ಎನ್‌ಪಿಆರ್ ಅತ್ಯಗತ್ಯ ಎಂದು ರಜನಿಕಾಂತ್ ಹೇಳಿದರು. “ಎನ್‌ಪಿಆರ್ ಅತ್ಯಗತ್ಯ, ಕಾಂಗ್ರೆಸ್ ಇದನ್ನು 2010 ರಲ್ಲಿ ಮಾಡಿತ್ತು, ಅದನ್ನು 2015 ರಲ್ಲಿಯೂ ಮಾಡಲಾಯಿತು ಹಾಗೂ ಅದನ್ನು 2021 ರಲ್ಲಿ ಜನಸಂಖ್ಯೆಗಾಗಿ ಮಾಡಬೇಕಾಗಿದೆ. ಈ ದೇಶದ ಎಲ್ಲ ನಾಗರಿಕರು ಮತ್ತು ಹೊರಗಿನಿಂದ ಬಂದವರು ಯಾರು ಎಂದು ನಮಗೆ ತಿಳಿಯಬೇಕಲ್ಲವೇ? ”ಎಂದು ಅವರು ಕೇಳಿದರು.

“ಎನ್‌ಆರ್‌ಸಿ ಇದು ಕರಡು ಮಾಡಿದ ನಂತರವೇ ವಿವರಗಳು ಹೊರಬರುತ್ತವೆ ಎನ್‌ಆರ್‌ಸಿ ಇನ್ನೂ ಜಾರಿಗೆ ಬಂದಿಲ್ಲ …ಅದು ಬಂದರೆ ಅದರ ವಿವರಗಳನ್ನು ತಿಳಿದುಕೊಳ್ಳುತ್ತೇನೆ.” ಎಂದರು

ಶ್ರೀಲಂಕಾದ ತಮಿಳರ ಬಗ್ಗೆ,”ಕಳೆದ 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಉಭಯ ಪೌರತ್ವವನ್ನು ನೀಡುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು. “ಶ್ರೀಲಂಕಾದಲ್ಲಿ ಇರುವ ತಮಿಳರಿಗೆ ತೊಂದರೆ ಕೊಡಬಾರದು, ಅವರು ಚೋಳರ ಕಾಲದಿಂದಲೂ ಅಲ್ಲಿ ವಾಸಿಸುತ್ತಿದ್ದಾರೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial