ರಾಜ್ಯ ಸರ್ಕಾರ ಅಂಗೀಕರಿಸಲು ಉದ್ದೇಶಿಸಿರುವ ಕರ್ನಾಟಕ ಗೋಹತ್ಯೆ ನಿಷೇದ ಮಸೂದೆ-2020 ರ ವಿರೋಧಿ ಜನಾಂದೋಲದ ರಾಜ್ಯ ಮಟ್ಟದ ಪೂರ್ವಭಾವಿ ಸಭೆ ಡಿಸೆಂಬರ್ 21 (ಸೋಮವಾರ) ರಂದು ಬೆಂಗಳೂರಿನ ಬಿಬಿಎಂಪಿ ಕಚೇರಿ ಬಳಿಯ ಹಜ್ರತ್ ಹಮೀದ್ ಶಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ: ವಯಸ್ಸಾದ ದನಗಳನ್ನು ಸರ್ಕಾರವೇ ಖರೀದಿಸಲಿ – ಸಿದ್ದರಾಮಯ್ಯ ಸಲಹೆ
’2020 ರ ಕರ್ನಾಟಕ ಗೋಹತ್ಯೆ ನಿಷೇದ ಕಾಯ್ದೆ ವಿರೋಧಿ ಜನಾಂದೋಲನ -ಕರ್ನಾಟಕ’ ವೇದಿಕೆಯ ನೇತೃತ್ವದಲ್ಲಿ ಈ ಸಭೆ ನಡೆಸಲಿದ್ದು, “ನಾವು ರೈತರು, ದಲಿತರು, ಹಿಂದುಳಿದವರು, ಮುಸ್ಲಿಮರು, ದನ, ಕರು, ಹಸು, ಎಮ್ಮೆ, ಕೋಣ ಸಾಕುವವರು ಮತ್ತು ತಿನ್ನುವವರಾಗಿದ್ದೇವೆ. ಇಂತಹ ನಾವೇಕೆ ಸಂವಿಧಾನ ವಿರೋಧಿ, ಅವೈಜ್ಞಾನಿಕ, ರೈತ ವಿರೋಧಿ ಕರ್ನಾಟಕ ಗೋ ಹತ್ಯೆ ನಿಷೇದ (ಕರಡು) ಮಸೂದೆ 2020 ನ್ನು ವಿರೋಧಿಸಬಾರದು” ಎಂದು ವೇದಿಕೆಯು ಪ್ರಶ್ನಿಸಿದೆ.
ಆಂದೋಲನದ ರಾಜ್ಯಮಟ್ಟದ ಪೂರ್ವಬಾವಿ ಸಭೆ ಬೆಳಿಗ್ಗೆ 11 ಗಂಟೆಗೆ, ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ಹಿಂಭಾಗದ, ಬಿಬಿಎಂಪಿ ಕಚೇರಿ ಬಳಿಯ ಹಜ್ರತ್ ಹಮೀದ್ ಶಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ಆತಂಕ ವ್ಯಕ್ತಪಡಿಸಿದ ಮೃಗಾಲಯದ ಅಧಿಕಾರಿಗಳು!


