Homeಮುಖಪುಟಪ್ರವಾಸೋದ್ಯಮ ಹೆಚ್ಚಿಸುವ ಗುರಿ | ಪಹಲ್ಗಾಮ್‌ನಲ್ಲಿ ಸಚಿವ ಸಂಪುಟ ಸಭೆ ನಡೆಸಲಿರುವ ಸಿಎಂ ಒಮರ್ ಅಬ್ದುಲ್ಲಾ

ಪ್ರವಾಸೋದ್ಯಮ ಹೆಚ್ಚಿಸುವ ಗುರಿ | ಪಹಲ್ಗಾಮ್‌ನಲ್ಲಿ ಸಚಿವ ಸಂಪುಟ ಸಭೆ ನಡೆಸಲಿರುವ ಸಿಎಂ ಒಮರ್ ಅಬ್ದುಲ್ಲಾ

- Advertisement -
- Advertisement -

ಏಪ್ರಿಲ್ 22 ರಂದು ಭಯೋತ್ಪಾದಕ ದಾಳಿ ನಡೆದ ಪಹಲ್ಗಾಮ್‌ನಲ್ಲೆ ಸಚಿವ ಸಂಪುಟ ಸಭೆ ನಡೆಸಲು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸರ್ಕಾರ ತೀರ್ಮಾನಿಸಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದ ಪ್ರವಾಸೋದ್ಯಮ ವಲಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇಂದು (ಮಂಗಳವಾರ) ನಡೆಯುವ ಸಚಿವ ಸಂಪುಟ ಸಭೆಯು ಜನರ ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ಮತ್ತು ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಇದಾಗಿದೆ ಎಂದು ವರದಿ ಹೇಳಿದೆ. ಪ್ರವಾಸೋದ್ಯಮ ಹೆಚ್ಚಿಸುವ ಗುರಿ

ಏಪ್ರಿಲ್ 22 ರ ದಾಳಿಯ ನಂತರ ಕಣಿವೆಯಲ್ಲಿ ಪ್ರವಾಸೋದ್ಯಮವನ್ನು ಹೇಗೆ ಪುನರುಜ್ಜೀವನಗೊಳಿಸುವುದು ಎಂಬುದರ ಕುರಿತು ಸಲಹೆಗಳನ್ನು ಸಂಗ್ರಹಿಸಲು ಸಿಎಂ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಪಹಲ್ಗಾಮ್‌ನಲ್ಲಿ ಪ್ರವಾಸೋದ್ಯಮ ಪಾಲುದಾರರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಸೂಚಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಪಹಲ್ಗಾಮ್‌ನಲ್ಲಿ ಸಂಪುಟ ಸಭೆ ನಡೆಸುವುದು ಕಾಶ್ಮೀರ ಪ್ರವಾಸಿಗರಿಗೆ ಸುರಕ್ಷಿತ ತಾಣವಾಗಿ ಉಳಿದಿದೆ ಎಂಬ ಸಂದೇಶವನ್ನು ಕಳುಹಿಸುವ ಉದ್ದೇಶಪೂರ್ವಕ ಪ್ರಯತ್ನವೆಂದು ಪರಿಗಣಿಸಲಾಗಿದೆ. ಶ್ರೀನಗರ ಮತ್ತು ಜಮ್ಮುವಿನ ಅವಳಿ ರಾಜಧಾನಿಗಳ ಹೊರಗೆ ನಡೆಯಲಿರುವ ಒಮರ್ ನೇತೃತ್ವದ ಸರ್ಕಾರದ ಈ ಅವಧಿಯಲ್ಲಿ ಇದು ಮೊದಲ ಕ್ಯಾಬಿನೆಟ್ ಸಭೆಯಾಗಲಿದೆ.

ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಪ್ರವಾಸಿಗರನ್ನು ರಕ್ಷಿಸಲು ಪ್ರಯತ್ನಿಸುವಾಗ ಸ್ಥಳೀಯ ಕುದುರೆ ಸವಾರ ಸಾವನ್ನಪ್ಪಿದ್ದರು. ಜೊತೆಗೆ ಮೇ 7-10 ರಂದು ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಮಿಲಿಟರಿ ಘರ್ಷಣೆಯ ನಂತರ, ಕಣಿವೆಯಲ್ಲಿ ಪ್ರವಾಸೋದ್ಯಮ ವಲಯವು ಗಣನೀಯ ನಷ್ಟವನ್ನು ಅನುಭವಿಸಿದೆ ಎಂದು ವರದಿ ಹೇಳಿದೆ.

ಈ ದಾಳಿಗಳ ನಂತರ, ಪ್ರವಾಸಿಗರು ಪ್ರದೇಶವನ್ನು ತೊರೆದಿದ್ದು ಮತ್ತು ವ್ಯಾಪಕ ಬುಕಿಂಗ್ ರದ್ದತಿ ನಡೆಯಿತು. ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿರುವ ಹೋಟೆಲ್‌ಗಳು, ದಕ್ಷಿಣ ಕಾಶ್ಮೀರದ ಪಹಲ್ಗಾಮ್, ಮಧ್ಯ ಕಾಶ್ಮೀರದ ಸೋನಾಮಾರ್ಗ್ ಮತ್ತು ಉತ್ತರ ಕಾಶ್ಮೀರದ ಗುಲ್ಮಾರ್ಗ್ ಸೇರಿದಂತೆ ಬಹುತೇಕ ಶೂನ್ಯ ಜನಪ್ರವಾಹ ಅನುಭವಿಸುತ್ತಿವೆ ಎಂದು ವರದಿಗಳು ಉಲ್ಲೇಖಿಸಿವೆ.

ಪಹಲ್ಗಾಮ್‌ನಲ್ಲಿ ಇಂದಿನ ಸಂಪುಟ ಸಭೆಯ ನಂತರ, ಮುಖ್ಯಮಂತ್ರಿ ಮೇ 28 (ಬುಧವಾರ) ರಂದು ಉತ್ತರ ಕಾಶ್ಮೀರದ ಗುಲ್ಮಾರ್ಗ್‌ನ ವಿಶ್ವಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿ ಅಧಿಕೃತ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ, ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು, ಸಿಎಂ ಸಲಹೆಗಾರ, ಮುಖ್ಯ ಕಾರ್ಯದರ್ಶಿ, ಇಲಾಖೆಗಳ ಮುಖ್ಯಸ್ಥರು ಮತ್ತು ಇತರ ಹಿರಿಯ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಸ್ತುತ ನಿರ್ಜನ ಸ್ಥಳಗಳಲ್ಲಿ ಸರ್ಕಾರಿ ಸಭೆಗಳನ್ನು ನಡೆಸುವುದು ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ ಮತ್ತು ಕೆಲವು ಪ್ರವಾಸಿಗರು ಕಣಿವೆಗೆ ಪ್ರಯಾಣಿಸುವುದನ್ನು ಪರಿಗಣಿಸಲು ಪ್ರೇರೇಪಿಸಬಹುದು ಎಂದು ಪ್ರವಾಸೋದ್ಯಮ ಪಾಲುದಾರರೊಬ್ಬರು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.

ಪಹಲ್ಗಾಮ್, ಗುಲ್ಮಾರ್ಗ್ ಮತ್ತು ಇತರ ಸ್ಥಳಗಳಲ್ಲಿ ಸರ್ಕಾರಿ ಸಭೆಗಳನ್ನು ನಡೆಸುವ ಸಿಎಂ ಅವರ ನಿರ್ಧಾರವು “ಮನೆ ಬಾಗಿಲಿನಲ್ಲೇ ಆಡಳಿತ” ಉಪಕ್ರಮದ ಭಾಗವಾಗಿದೆ ಎಂದು ಹಿರಿಯ ಎನ್‌ಸಿ ನಾಯಕ ಮತ್ತು ಶಾಸಕ ತನ್ವೀರ್ ಸಾದಿಕ್ ಒತ್ತಿ ಹೇಳಿದ್ದಾರೆ. “ನಿಮಗೆ ನೆನಪಿರಬಹುದು, ಅವರು ಕಳೆದ ಬಾರಿ ಸಿಎಂ ಆಗಿದ್ದಾಗ, ಅವರು ಆಗಾಗ್ಗೆ ಸಿವಿಲ್ ಸೆಕ್ರೆಟರಿಯೇಟ್‌ನ ಹೊರಗೆ ವಿವಿಧ ಸ್ಥಳಗಳಲ್ಲಿ ಕ್ಯಾಬಿನೆಟ್ ಸಭೆಗಳನ್ನು ನಡೆಸುತ್ತಿದ್ದರು” ಎಂದು ಅವರು ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ನೀತಿ ಆಯೋಗದ ಇತ್ತೀಚಿನ ಸಭೆಯಲ್ಲಿ, ಸಿಎಂ ಒಮರ್ ಅಬ್ದುಲ್ಲಾ ಅವರು ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಲು ಮತ್ತು ಸುಂದರವಾದ ಕಣಿವೆಗೆ ಮರಳುವಂತೆ ಪ್ರೋತ್ಸಾಹಿಸಲು ಕಾಶ್ಮೀರದಲ್ಲಿ ಪಿಎಸ್‌ಯು ಸಮ್ಮೇಳನಗಳು, ಸಭೆಗಳು, ಪ್ರೋತ್ಸಾಹಕ ಪ್ರವಾಸಗಳು ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ನಡೆಸುವ ಪ್ರಸ್ತಾಪವನ್ನು ಮಾಡಿದ್ದಾರೆ. ಪ್ರವಾಸೋದ್ಯಮ ಹೆಚ್ಚಿಸುವ ಗುರಿ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಕೋವಿಡ್ | ರಾಜ್ಯದಲ್ಲಿ ಆತಂಕಪಡುವ ಪರಿಸ್ಥಿತಿಯಿಲ್ಲ: ಸಿಎಂ ಸಿದ್ದರಾಮಯ್ಯ

ಕೋವಿಡ್ | ರಾಜ್ಯದಲ್ಲಿ ಆತಂಕಪಡುವ ಪರಿಸ್ಥಿತಿಯಿಲ್ಲ: ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -