Homeಮುಖಪುಟದೆಹಲಿಯಲ್ಲಿ ಮದ್ಯ ಮಾರಾಟ ದ್ವಿಗುಣ: ರಿಯಾಯಿತಿ ಹಿಂಪಡೆದ ದೆಹಲಿ ಸರ್ಕಾರ!

ದೆಹಲಿಯಲ್ಲಿ ಮದ್ಯ ಮಾರಾಟ ದ್ವಿಗುಣ: ರಿಯಾಯಿತಿ ಹಿಂಪಡೆದ ದೆಹಲಿ ಸರ್ಕಾರ!

- Advertisement -
- Advertisement -

ದೆಹಲಿಯಲ್ಲಿ ಕಳೆದ ತಿಂಗಳು 24.50 ಮಿಲಿಯನ್ (2.4 ಕೋಟಿ) ಲೀಟರ್ ಮದ್ಯ ಮಾರಾಟವಾಗಿದೆ. ಈ ಪ್ರಮಾಣವು 2019-20 ರಲ್ಲಿ ಸರಾಸರಿ ಮಾಸಿಕ ಮಾರಾಟವಾಗಿದ್ದ 13.2 ಮಿಲಿಯನ್ ಲೀಟರ್‌ಗಿಂತ ದ್ವಿಗುಣವಾಗಿದೆ ಎಂದು ದೆಹಲಿ ಸರ್ಕಾರ ಹೈಕೋರ್ಟ್‌‌ಗೆ ತಿಳಿಸಿದೆ.

ದೆಹಲಿಯಲ್ಲಿ ಮದ್ಯ ಮಾರಾಟ ಮತ್ತು ಕೊಳ್ಳುವಿಕೆಗೆ ನೀಡಲಾಗಿದ್ದ ರಿಯಾಯಿತಿ ದರವನ್ನು ದೆಹಲಿ ಸರ್ಕಾರ ಹಿಂಪಡೆದುಕೊಂಡಿದೆ. ಸರ್ಕಾರ ಈ ನಡೆಯನ್ನು ಪ್ರಶ್ನಿಸಿ ಮದ್ಯ ಮಾರಾಟಗಾರರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ಕಾಮೇಶ್ವರ ರಾವ್ ಅವರ ಮುಂದೆ ದೆಹಲಿ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು, “ಜನರು ತಮ್ಮ ಸಾಮಾನ್ಯ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಹಣವನ್ನು ವ್ಯಯಿಸಿ ಮದ್ಯ ಸೇವನೆ ಮಾಡುವುದಿಲ್ಲ. ಹೀಗಾಗಿ, ಜನರ ಮದ್ಯ ಸೇವನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಿಯಾಯಿತಿಯನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಮಾರಾಟವಾಗದೇ ಉಳಿಯುವ ಸಂಗ್ರಹಣೆಯ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ” ಎಂದು ವಿವರಿಸಿದೆ.

ಕೆಲವು ಪರವಾನಿಗೆದಾರರು (ದೊಡ್ಡ ಆರ್ಥಿಕ ಆಸ್ತಿ ಹೊಂದಿರುವವರು) ಅಂದಾಜು ಚಿಲ್ಲರೆ ಮಾರ್ಜಿನ್ನಿಂದ 50% ಅಥವಾ ಹೆಚ್ಚಿನ ರಿಯಾಯಿತಿಯನ್ನು ಮದ್ಯದ ಮೇಲೆ ನೀಡಲು ಪ್ರಾರಂಭಿಸಿದರು. ಇದು ಜನರು ತಮ್ಮ ಅಗತ್ಯಕ್ಕಿಂತ ಹೆಚ್ಚು ಮದ್ಯವನ್ನು ಖರೀದಿಸಲು ಪ್ರೇರೇಪಿಸಿತು ಎಂದು ಸರ್ಕಾರ ಹೇಳಿದೆ.

“ಮದ್ಯಪಾನವನ್ನು ಉತ್ತೇಜಿಸುವುದನ್ನು ಮತ್ತು ಮದ್ಯದ ಅಕ್ರಮ ವ್ಯಾಪಾರವನ್ನು ತಡೆಗಟ್ಟುವುದು ದೆಹಲಿ ಸರ್ಕಾರದ ಪ್ರಾಥಮಿಕ ಉದ್ದೇಶವಾಗಿದೆ. ಅಲ್ಲದೆ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯೂ ಮುಖ್ಯವಾಗಿದೆ. ಮದ್ಯ ಮಾರಾಟಕ್ಕೆ ಅನುಮತಿಸುವ ಮಿತಿಯನ್ನು ಮೀರಿ ಅಕ್ರಮ ಮದ್ಯ ಸಾಗಾಣಿಕೆ ಮತ್ತು ಸಂಗ್ರಹಣೆಯ ಮೂಲಕ ಗ್ರಾಹಕರಿಗೆ ಆಮಿಷ ಒಡ್ಡಲಾಗುತ್ತಿದೆ. ಅದನ್ನು ತಡೆಗಟ್ಟವುದು ಸರ್ಕಾರದ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯಾಗಿದೆ” ಎಂದು ಸರ್ಕಾರ ತನ್ನ ಅಫಿಡೇವಿಟ್ನಲ್ಲಿ ತಿಳಿಸಿದೆ.

ರಿಯಾಯಿತಿಯನ್ನು ತೆಗೆದುಹಾಕುವ ನಿರ್ಧಾರದಿಂದ ತಮ್ಮ ಮಾರಾಟವು ಕುಸಿದಿದೆ ಮತ್ತು ಜನರು ಅಗ್ಗದ ಮದ್ಯಕ್ಕಾಗಿ ನೆರೆಯ ನಗರಗಳಿಗೆ ಹೋಗುತ್ತಿದ್ದಾರೆ. ಇದರಿಂದ ತಮಗೆ ಕೋಟಿಗಟ್ಟಲೆ ನಷ್ಟ ಉಂಟಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಅರ್ಜಿದಾರರ ಅರ್ಜಿಗಳನ್ನು ವಿರೋಧಿಸಿದ ಸರ್ಕಾರ, ನಗರದಲ್ಲಿ ಅನುಮತಿಯ ಮಿತಿಯನ್ನು ಮೀರಿ ಮದ್ಯವನ್ನು ಮಾರಾಟ ಮಾಡುವುದು ಮತ್ತು ಗ್ರಾಹಕರಿಗೆ ಆಮಿಷವೊಡ್ಡುವುದು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುತ್ತಿದೆ. ಹೀಗಾಗಿ, ಮದ್ಯದ ಮೇಲಿನ ರಿಯಾಯಿತಿಯನ್ನು ಕೊನೆಗೊಳಿಸಲಾಗಿದೆ ಎಂದು ಹೇಳಿದೆ.


ಇದನ್ನೂ ಓದಿರಿ: ಉತ್ತರ ಪ್ರದೇಶ: ರೈಲಿನ ಎಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ, ಅವಘಡ ತಪ್ಪಿಸಲು ರೈಲು ತಳ್ಳಿದ ಪ್ರಯಾಣಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...