Homeಅಂತರಾಷ್ಟ್ರೀಯ“ಅಪ್ಪನಿಂದ ಒಂದು ದೊಡ್ಡ ಮುತ್ತು!”: ಚೇಗುವಾರ ಕುರಿತು ಆಪ್ತವಾಗಿ ಮಾತಾಡಿದ ಮಗಳು ಅಲೈದಾ...

“ಅಪ್ಪನಿಂದ ಒಂದು ದೊಡ್ಡ ಮುತ್ತು!”: ಚೇಗುವಾರ ಕುರಿತು ಆಪ್ತವಾಗಿ ಮಾತಾಡಿದ ಮಗಳು ಅಲೈದಾ…

ನಾನು ಕೊನೆಯ ಬಾರಿ ತಂದೆಯನ್ನ ನೋಡಿದ್ದು ನನಗೆ ಏಳು ವರ್ಷಗಳಿದ್ದಾಗ. ಬೊಲಿವಿಯಾಗೆ ಹೋಗುತ್ತಾ ನಮ್ಮನ್ನ ಭೇಟಿ ಮಾಡಲು ಬಂದಿದ್ದರು. ನಂತರ ಅವರ ಸಾವಿನ ಸುದ್ಧಿ ತಿಳಿಯಿತು.

- Advertisement -
- Advertisement -

ಕೃಪೆ: ಆಂಧ್ರಜ್ಯೋತಿ

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಚೆಗೆವೆರಾ ವೃತ್ತಿಯಲ್ಲಿ ವೈದ್ಯ. ನಂತರ ಕ್ಯೂಬಾ ವಿಮುಕ್ತಿಗಾಗಿ ಕ್ರಾಂತಿಕಾರಿ ಹೋರಾಟ ಆಯ್ಕೆ ಮಾಡಿಕೊಂಡವನು. 1967ರಲ್ಲಿ ಬೊಲೆವಿಯಾನ್ ಸೈನ್ಯದ ಕೈಯಲ್ಲಿ ಕೊಲೆಯಾದರು. ಆತನ ಎರಡನೆ ಹೆಂಡತಿ ಅಲೈದಾ ಮಾರ್ಚಗೆ ನಾಲ್ಕು ಜನ ಮಕ್ಕಳು. ಅವರಲ್ಲಿ ಅಲೈದಾ ದೊಡ್ಡವಳು. ಅಲೈದಾ ಸಹ ವೈದ್ಯೆಯಾಗಿದ್ದು ಕ್ಯೂಬಾ ಅಲ್ಲದೆ ಹಿಂದುಳಿದ ದೇಶಗಳಲ್ಲಿ ಮಕ್ಕಳ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಲೈದಾಗೆ ಭಾರತ ಹೊಸದಲ್ಲ . ಚೆಗುವೆರಾ ಕೂಡ 1959ರಲ್ಲಿ ಇಲ್ಲಿಗೆ ಬಂದಿದ್ದರು. ಕ್ಯೂಬಾ ಆ ಕ್ರಾಂತಿಯ ಹಿಂದೆ ಇದ್ದ ಒಂದು ಬಲವಾದ ಶಕ್ತಿ ಚೆಗುವೆರಾ. ಜಾಗತಿಕ ಮಟ್ಟದಲ್ಲಿ ಬಂಡಾಯದ ಸಂಕೇತ ಚೆ ಗುವೇರಾ. ಕ್ಯೂಬಾ ಕ್ರಾಂತಿಗೆ ಕಳೆದ ವಾರಕ್ಕೆ 60 ವರ್ಷಗಳು ಪೂರ್ಣಗೊಂಡಿದೆ. ಹಾಗಾಗಿ ಕೇರಳ, ದೆಹಲಿ ಮುಂತಾದ ಹಲವು ಕಡೆ ಕ್ಯೂಬಾ ಕ್ರಾಂತಿ ಕುರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಲೈದಾ ಭಾರತಕ್ಕೆ ಬಂದಿದ್ದಾರೆ. ತನ್ನ ತಂದೆ ಚೆ ಗುವೆರಾ ಬಗೆಗಿನ ನೆನಪುಗಳ ಕುರಿತು ಮಾತನಾಡಿದ್ದಾರೆ. ಅದರ ಅಕ್ಷರ ರೂಪ ಇಲ್ಲಿದೆ.

ಅಪ್ಪನೊಡನೆ ನನ್ನ ಬಾಲ್ಯ

ನನಗೆ ನಾಲ್ಕು ವರ್ಷ ವಯಸ್ಸಿದ್ದಾಗ ನಮ್ಮ ತಂದೆ ನಮ್ಮನ್ನ ಬಿಟ್ಟು ಕ್ರಾಂತಿಕಾರಿ ಮಾರ್ಗದಲ್ಲಿ ಹೊರಟುಬಿಟ್ಟರು. ಆತ ಅಜ್ಞಾತವಾಗಿ ಇರುತ್ತಿದ್ದರು. ಅಲ್ಲಿಂದಲೇ ಪತ್ರಗಳನ್ನು ಬರೆಯುತ್ತಿದ್ದರು. ಆಗಾಗ ಮಾರುವೇಶದಲ್ಲಿ ನಮ್ಮನ್ನು ಬೇಟಿಯಾಗುತ್ತಿದ್ದರು. ಆಗಲೂ ಸಹ ‘ನಾನು ನಿಮ್ಮ ತಂದೆಯ ಸ್ನೇಹಿತ’ ಎಂದು ಅರ್ಜೆಂಟೀನಾ ಭಾಷೆಯ ಧಾಟಿಯಲ್ಲಿ ಹೇಳಿದ್ದು ನನಗೆ ನೆನಪಿದೆ. ಆತನೆ ನನ್ನ ತಂದೆ ಎಂದು ನಾನು ಕಂಡುಹಿಡಿಯಲಿಲ್ಲ.

 

ಮಾರುವೇಷದಲ್ಲಿ ಅವರು ಬಂದಾಗ ನಡೆದ ಒಂದು ಘಟನೆ ಇನ್ನೂ ನನಗೆ ನೆನಪಿದೆ. ನಾವು ಒಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದೆವು, ನಾನು ಕೆಳಕ್ಕೆ ಬಿದ್ದುಹೋದೆ. ನನ್ನ ತಲೆಗೆ ಪೆಟ್ಟು ಬಿತ್ತು. ಅವರು ವೈದ್ಯರಲ್ಲವೇ! ಓಡಿಬಂದು, ನನ್ನನ್ನು ಮೇಲಕ್ಕೆ ಎತ್ತಿದರು. ನನಗೆ ಚಿಕಿತ್ಸೆ ಮಾಡಲು ಶುರು ಮಾಡಿದರು. ಒಂದು ಬಾರಿ ನನಗೆ ಕೊಟ್ಟ ಸಿಹಿ ತಿಂಡಿಯ ಇಡೀ ಪ್ಯಾಕೆಟನ್ನು ನನ್ನ ತಮ್ಮನಿಗೆ ಕೊಟ್ಟುಬಿಟ್ಟೆ. ಅವರು ತುಂಬಾ ಖುಷಿಪಟ್ಟರು. ‘ನಿನ್ನನ್ನು ನೋಡಿದರೆ ನನಗೆ ಹೆಮ್ಮೆಯೆನಿಸುತ್ತದೆ. ಮಕ್ಕಳಲ್ಲಿ ದೊಡ್ಡವಳಾಗಿ ನಿನ್ನ ಸಿಹಿ ತಿಂಡಿಯೆಲ್ಲ ಅವರಿಗೆ ಕೊಟ್ಟಿದ್ದು ಘನತೆಯ ಕೆಲಸ, ನಾನು ನಿನಗೆ ಮತ್ತೊಂದು ಪ್ಯಾಕೆಟ್ ಕೊಡುತ್ತೇನೆ ಬಿಡು’ ಎಂದಿದ್ದರು.

ನಾನು ಕೊನೆಯ ಬಾರಿ ತಂದೆಯನ್ನ ನೋಡಿದ್ದು ನನಗೆ ಏಳು ವರ್ಷಗಳಿದ್ದಾಗ. ಬೊಲಿವಿಯಾಗೆ ಹೋಗುತ್ತಾ ನಮ್ಮನ್ನ ಬೇಟಿ ಮಾಡಲು ಬಂದಿದ್ದರು. ನಂತರ ಅವರ ಸಾವಿನ ಸುದ್ಧಿ ತಿಳಿಯಿತು.

ಅವರನ್ನೆ ಅನುಸರಿಸುತ್ತಿದ್ದೆ!

ಅಪ್ಪನ ಜೊತೆ ಹೆಚ್ಚು ಕಾಲ ಕಳೆಯದೆ ಹೋದರು ಸಹ ಅವರ ಪ್ರಭಾವ ನನ್ನ ಮೇಲೆ ಬಲವಾಗಿದೆ. ಚಿಕ್ಕಂದಿನ ವಿಷಯಗಳು ನನಗೆ ಕಡಿಮೆ ನೆನಪಿವೆ. ಆದರೂ ಅಪ್ಪನ ವಿಷಯಗಳೆನ್ನೆಲ್ಲ ಅಮ್ಮ ನಮಗೆ ಪ್ರತಿ ಬಾರಿ ಹೇಳುತ್ತಿದ್ದರು. ನಂತರ ನಮ್ಮ ತಂದೆಯ ಬಗ್ಗೆ ‘ಮೋಟಾರ್ ಸೈಕಲ್ ಡೈರೀಸ್’ ನಂತಹ ಪ್ರಕಟಿತ ರಚನೆಗಳು, ಅಪ್ರಕಟಿತ ಪುಸ್ತಕಗಳು, ಪತ್ರಗಳನ್ನು ಓದುತ್ತಿರುವಾಗ ಮತ್ತಷ್ಟು ಅರ್ಥ ಮಾಡಿಕೊಂಡೆ. ಅವರೂ ಇಂದು, ಎಂದಿಗೂ ನನ್ನ ಹಿರೋ, ಒಂದುವೇಳೆ ನಮ್ಮ ತಂದೆ ಬದುಕಿದ್ದರೆ, ಈಗ ನಾನು ಮಾಡುತ್ತಿರುವುದೇನನ್ನು ಮಾಡುತ್ತಿರಲಿಲ್ಲ. ಯಾವಾಗಲೂ ಅವರ ಜೊತೆಯೇ ಇರುತ್ತಿದ್ದೆ. ಅವರನ್ನೇ ಅನುಸರಿಸುತ್ತಿದ್ದೆ.

ಜನರಿಗೆ ಕೊಡುವ ಪ್ರತಿಫಲ… ?

ನಮ್ಮ ತಂದೆ ವೈದ್ಯರಾದ್ದರಿಂದ ನಾನು ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ ಎಂದು ಹಲವಾರು ಜನ ಅಂದುಕೊಳ್ಳುತ್ತಿರುತ್ತಾರೆ. ಅದು ವಾಸ್ತವವಲ್ಲ. ನಮ್ಮ ತಾಯಿ ನಾಲ್ಕು ಮಕ್ಕಳಿಗೆ ಜನ್ಮನೀಡಿದರು. ಪ್ರತಿಬಾರಿಯೂ ಸಿಜೇರಿಯನ್ ಮಾಡಬೇಕಾಗಿ ಬಂದಿತು. ಕೊನೆಯ ಭಾರಿ ಮಾಡಿದಾಗ ಏನೋ ವ್ಯತ್ಯಾಸವಾಯಿತು. ಹೊಲಿಗೆ ಸರಿಯಾಗಿ ಬೀಳಲಿಲ್ಲ. ಇನ್‍ಫೆಕ್ಷನ್ ಆಗಿ ಆ ಜಾಗವನ್ನು ಆಲ್ಕೋಹಾಲ್‍ನಿಂದ ಶುಭ್ರಗೊಳಿಸಲು ನಾನು ಸಹಾಯ ಮಾಡುತ್ತಿದ್ದೆ. ಆಗ ನನ್ನ ವಯಸ್ಸು ಕೇವಲ ನಾಲ್ಕು ವರೆ ವರ್ಷ. ಇಂತಹವೆಲ್ಲ ವೈದ್ಯ ವೃತ್ತಿಯ ಮೇಲೆ ನನ್ನ ಆಸಕ್ತಿಯನ್ನು ಹೆಚ್ಚಿಸಿದವು. ನಾನು ಇಪ್ಪತ್ತ್ಮೂರು ವರ್ಷದಿಂದ ವೈದ್ಯ ವೃತ್ತಿಯಲ್ಲಿ ಇದ್ದೇನೆ. ‘ನಾನು ಚೆ ಗುವೆರಾ ಮಗಳಾದ್ದರಿಂದ , ಜನರು ನನಗೆ ಅಪಾರವಾದ ಪ್ರೀತಿಯನ್ನು ನೀಡುತ್ತಿದ್ದಾರೆ. ಇದಕ್ಕೆ ಬದಲಾಗಿ ನಾನೇನು ನೀಡಬಲ್ಲೆ?’ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡಾಗ, ಜನಸಾಮಾನ್ಯರ ಆರೋಗ್ಯದ ಬಗ್ಗೆ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗ್ಗೆ ಶ್ರಧ್ದೆ ತೋರಿಸುವುದು ಅವರಿಗೆ ನಾನು ತಿರುಗಿ ನೀಡುವ ಪ್ರತಿಫಲ ಎಂದಿನ್ನಿಸುತ್ತದೆ. ಏಕೆಂದರೆ ಮಕ್ಕಳೇ ನಮ್ಮ ಭವಿಷ್ಯವಾಗಿದ್ದಾರೆ.

ಮಕ್ಕಳಾ ಅಥವಾ ಹೋರಾಟವಾ?

ಯಾರೋ ಒಂದು ಬಾರಿ ಕೇಳಿದರು. ಡಾಕ್ಟರ್, ನಿಮ್ಮ ಮಕ್ಕಳು ಒಂದು ಕಡೆ, ಕ್ರಾಂತಿಕಾರಿ ಹೋರಾಟ ಒಂದು ಕಡೆ ಆದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದಾಗ ‘ಹೋರಾಟವನ್ನೇ’ ಎಂದಿದ್ದೇನೆ. ಏಕೆಂದರೆ ನಾನು ಬೆಳೆದ ಘನತೆಯ ರೀತಿಯಲ್ಲಿಯೇ ನನ್ನ ಮಕ್ಕಳು ಬೆಳೆಯಬೇಕೆಂದು ಬಯಸುತ್ತೇನೆ. ನಾನು ಸಹ ಸಂತೋಷವನ್ನು, ಒಳ್ಳೆಯ ವಸ್ತುಗಳನ್ನು ಬಯಸುತ್ತೇನೆ. ಆದರೆ ಅವುಗಳಿಗಾಗಿ ಮನುಷ್ಯತ್ವ ಬೆಳೆಯಲು ಅಡ್ಡಿಯಾದರೆ ಆದರ್ಶಗಳನ್ನು ಬಿಟ್ಟುಕೊಡುವುದಿಲ್ಲ. ನಾನು ಎಂದಿಗೂ ಒಪ್ಪಿಕೊಳ್ಳದ ವಿಷಯಗಳು ಎರಡು ವಸಹಾತು ಆಳ್ವಿಕೆ ಮತ್ತು ಜನಾಂಗೀಯ ತಾರತಮ್ಯ

ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ

ಚೆ ಹೆಸರಿನಲ್ಲಿ ನಡೆಯುವ ವ್ಯಾಪಾರವನ್ನು ಒಪ್ಪಿಕೊಳ್ಳುವುದಿಲ್ಲ

ಚೆ ಗುವೆರಾ ಪರಂಪರೆಯನ್ನು ಆರ್ಥಿಕ ಪ್ರಯೋಜನಗಳಿಗಾಗಿ ಕೆಲವರು ಉಪಯೋಗಿಸಿಕೊಳ್ಳುತ್ತಿದ್ದಾರೆ ಅದನ್ನು ನಾವು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಒಳ ಉಡುಪುಗಳ ಮೇಲೆ, ಜೀನ್ಸ್ ಪ್ಯಾಂಟ್‍ಗಳ ಮೇಲೆ.. ಎಲ್ಲಿ ಅಂದರೆ ಅಲ್ಲಿ ನಮ್ಮ ತಂದೆಯನ್ನು ಚಿತ್ರಿಸಿ ಮಾರಾಟ ಮಾಡುತ್ತಿದ್ದಾರೆ . ಇದು ಅವರಿಗೆ ಗೌರವ ತರುವ ವಿಷಯವಲ್ಲ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಬದಲಾಗಿ ಕಾನೂನು ಹೋರಾಟ ಮಾಡುತ್ತೇವೆ.

ಸಮಸ್ಯೆಗಳ ಪರಿಹಾರಕ್ಕೆ ಉತ್ತರವೇನು ಗೊತ್ತೆ?

ಚೇ ಗುವೇರರನ್ನು ಅವರ ಸ್ವತಂತ್ರ ಅಭಿಪ್ರಾಯಗಳನ್ನು, ಆಲೋಚನಾ ವಿಧಾನವನ್ನು ಭಾರತದ ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಕಳೆದ ಇನ್ನೂರು ವರ್ಷಗಳಿಂದ ಬಂಡವಾಳಶಾಹಿ ನೀತಿ ಜಗತ್ತಿನ ಹಿಡಿತ ಸಾಧಿಸುತ್ತಿದೆ. ಆದರೆ ದಮನಿತ ವರ್ಗಗಳ ಜನಸಾಮಾನ್ಯರು ಎದುರಿಸುತ್ತಿರುವ ಅನೇಕ ಪ್ರಧಾನ ಸಮಸ್ಯೆಗಳಾವುದನ್ನು ಆ ನೀತಿಯಿಂದ ಪರಿಹರಿಸಲಾಗಲಿಲ್ಲ. ದೀನ ದಮನಿತ ಜನರ ಸಮಸ್ಯೆಗಳನ್ನು ಪರಿಹರಿಸುವುದು ಸೋಷಯಲಿಸಂ, ಕಮ್ಯೂನಿಸಂ ಮಾತ್ರವೇ. ಕ್ಯೂಬಾ ಕ್ರಾಂತಿಯಾಗಿ ಈ ವರ್ಷಕ್ಕೆ 60 ವರ್ಷ. ಆದರೆ ಕ್ರಾಂತಿಯ ಗುರಿ ಇನ್ನೂ ಪೂರ್ತಿಯಾಗಿಲ್ಲ. ಇಲ್ಲಿಯವರೆಗೂ ನಡೆದದ್ದು ಪೂರ್ತಿ ಸಂತೃಪ್ತಿಕರವಾಗಿಲ್ಲ. ಮಾಡಬೇಕಾದ ಕೆಲಸಗಳು ಎಷ್ಟೋ ಬಾಕಿ ಉಳಿದಿವೆ. ಪ್ರಸ್ತುತ ಕಾಲದಲ್ಲಿ ಚೆಗುವೆರಾ ಸಿದ್ಧಾಂತಗಳನ್ನು ಪ್ರಜೆಗಳು ಅನುಸರಿಸುವುದು ಮುಖ್ಯವಾಗಿದೆ. ಎಲ್ಲರಿಗೂ ಒಂದು ಅತ್ಯುತ್ತಮವಾದ ಜಗತ್ತು ಇರಬೇಕೆಂದು ಅವರು ಹೋರಾಡಿದರು. ಎಲ್ಲರಿಗೂ ಅತ್ಯುತ್ತಮವಾದ, ಸಮಾನವಾದ ಅವಕಾಶಗಳಿರುವ ಪ್ರಪಂಚವನ್ನು ರೂಪಿಸುವುದಕ್ಕಾಗಿ ಅವರಂತಹ ಮತ್ತಷ್ಟು ಜನ ಪುರುಷರು, ಮಹಿಳೆಯರ ಅವಶ್ಯಕತೆ ಈ ದಿನಗಳಲ್ಲಿ ಹೆಚ್ಚಾಗಿದೆ.

ತಂದೆಯ ಕೊನೆಯ ಪತ್ರ

ಚೆಗುವೆರಾ ಕುಟುಂಬವಾಗಿ ನಾವು ಪ್ರತ್ಯೇಕವಾದ ಸೌಕರ್ಯಗಳನ್ನು ಎಂದಿಗೂ ಬಯಸಲಿಲ್ಲ. ಅದಕ್ಕೆ ನಮ್ಮ ತಂದೆ ಸಂಪೂರ್ಣ ವಿರುದ್ದ. ನಮ್ಮ ತಾಯಿಯು ಸಹ ಯಾರಿಂದಲೂ ಸಹಾಯವನ್ನು ಬಯಸಲಿಲ್ಲ. ನಾವು ಎಷ್ಟೋ ಕಷ್ಟಗಳನ್ನು ಅನುಭವಿಸಿದೆವು. ತನ್ನ ಹಳೆಯ ಬ್ಲೌಸುಗಳಿಂದ ನಮ್ಮ ತಮ್ಮಂದಿರಿಗೆ ಪ್ಯಾಂಟ್ ಹೊಲಿದು ಕೊಡುತ್ತಿದ್ದರು ಅಮ್ಮ. ಆದರೂ ನಾವು ಸಂತೋಷವಾಗಿ ಇರುತ್ತಿದ್ದೆವು. ಸಾಧಾರಣ ಕ್ಯೂಬಾ ಮಕ್ಕಳ ರೀತಿಯಲ್ಲಿಯೇ ಬೆಳೆದೆವು. ನಾನು ಫಿಡಲ್ ಕ್ಯಾಸ್ಟ್ರೋ ಜೊತೆ ಯಾವುಗಲೂ ಇರುತ್ತಿದ್ದೆ. ಅವರು ಮರಣಿಸುವವರೆಗೂ ಅದು ಮುಂದುವರೆಯಿತು.

ನಮ್ಮ ತಂದೆ ಮರಣಿಸಿದಾಗ, ಆ ಸುದ್ಧಿಯನ್ನು ನಮಗೆ ತಿಳಿಸಬೇಕೆಂದು ಕ್ಯಾಸ್ಟ್ರೋ ಅಂದುಕೊಂಡರು. ಆದರೆ ನಮ್ಮ ತಾಯಿ ಅದಕ್ಕೆ ಒಪ್ಪಲಿಲ್ಲ. ಅದು ನನ್ನ ಜವಾಬ್ದಾರಿ ಎಂದು ನನ್ನ ತಾಯಿ ಹೇಳಿದ್ಧಳಂತೆ. ಆದರೆ ನಮ್ಮ ತಂದೆ ಒಂದು ಪತ್ರ ಬರೆದಿದ್ದಾರೆಂದು, ಒಂದು ವೇಳೆ ಯುದ್ಧದಲ್ಲಿ ನಾನು ಮರಣಿಸಿದರೆ ಅದನ್ನು ನಮಗೆ ಕೊಡಬೇಕು, ಅವರಿಗಾಗಿ ನಾವು ಅಳಬಾರದೆಂದು ಹೇಳಿದ್ದಾರೆ ಎಂದು ಕ್ಯಾಸ್ಟ್ಟ್ರೋ ಹೇಳಿದ್ದರು. ಮರುದಿನ ನಮ್ಮ ತಾಯಿ ನನ್ನನ್ನು ಕರೆದರು. ಆಕೆ ಕಣ್ಣೀರಿನ ಕೋಡಿಯಾಗಿದ್ದರು. ನನ್ನ ಕೈಯಲ್ಲಿ ಒಂದು ಪತ್ರವನ್ನು ಇಟ್ಟರು. “ಈ ಪತ್ರವನ್ನು ನೀವು ನೋಡುವ ಹೊತ್ತಿಗೆ ನಿಮಗೆ ಗೊತ್ತು – ನಾನು ನಿಮ್ಮ ಜೊತೆ ಇರುವುದಿಲ್ಲ’ ಎಂದು ಬರೆದಿತ್ತು. ನಾನು ಅಳುವುದಕ್ಕೆ ಶುರು ಮಾಡಿದೆ ಅದು ಬಹಳ ಚಿಕ್ಕ ಪತ್ರ. ಅದರ ಕೊನೆಯಲ್ಲಿ “ಅಪ್ಪನಿಂದ ಒಂದು ದೊಡ್ಡ ಮುತ್ತು!” ಎಂದು ಇತ್ತು. ತಂದೆ ಇನ್ನು ನಮಗೆ ಇಲ್ಲವೆಂದು ಅರ್ಥವಾಯಿತು.


ಇದನ್ನೂ ಓದಿ: ಇಂದು ಚೆಗುವಾರ ಜನ್ಮ ದಿನ: ಸಂಗಾತಿ ‘ಚೆ’ ಎಂಬ ವಿಸ್ಮಯಕ್ಕೆ ಸಾವಿಲ್ಲ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...