Homeಮುಖಪುಟಎಲ್ಲಾ ಪ್ರಕರಣಗಳು ತಕ್ಷಣವೇ ಅಮಾನತು: ರೈತರ ಮುಂದೆ ಮತ್ತೇ ಮಂಡಿಯೂರಿದ ಮೋದಿ ಸರ್ಕಾರ

ಎಲ್ಲಾ ಪ್ರಕರಣಗಳು ತಕ್ಷಣವೇ ಅಮಾನತು: ರೈತರ ಮುಂದೆ ಮತ್ತೇ ಮಂಡಿಯೂರಿದ ಮೋದಿ ಸರ್ಕಾರ

- Advertisement -
- Advertisement -

ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಮತ್ತೇ ರೈತರ ಮುಂದೆ ಮಂಡಿಯೂರಿದೆ. ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ರೈತರ ವಿರುದ್ಧ ಹಾಕಲಾಗಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಅಮಾನತುಗೊಳಿಸಲಾವುದು ಎಂದು ಸರ್ಕಾರ ನಿರ್ಧರಿಸಿದ್ದು, ಹಾಗಾಗಿ ಕಳೆದ 15 ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಒಕ್ಕೂಟ ಸರ್ಕಾರವು ಒತ್ತಾಯಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಎಂಎಸ್ಪಿ ಬೇಡಿಕೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಭರವಸೆಯನ್ನು ಒಳಗೊಂಡಿರುವ ಒಂದು ಪ್ರಸ್ತಾವವನ್ನು ಸರ್ಕಾರವು ಮಂಗಳವಾರ ಸಂಜೆ ಕಳುಹಿಸಿದ್ದು, ಪೊಲೀಸ್ ಪ್ರಕರಣಗಳನ್ನು ಕೈಬಿಡುವ ಮೊದಲು ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಲಾಗಿದೆ. ಆದರೆ ರೈತರು ಪ್ರತಿಭಟನೆ ವಾಪಸ್ ಪಡೆಯಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ರೈತ ಹೋರಾಟ ಗೆದ್ದದ್ದು – ಗೆಲ್ಲಬೇಕಾದ್ದು

ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರವು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ಇದೇ ರೀತಿಯಲ್ಲಿ ಒಕ್ಕೂಟ ಸರ್ಕಾರವು ರೈತರಿಗೆ ಆರ್ಥಿಕ ಪರಿಹಾರ ನೀಡಬೇಕಾದ ಅಗತ್ಯವನ್ನು ರೈತರು ಒತ್ತಿ ಹೇಳಿದ್ದಾರೆ.

ಎಂಎಸ್ಪಿಯನ್ನು ಕಾನೂನು ಬದ್ಧಗೊಳಿಸಲಾಗುವುದು ಎಂಬ ಬೇಡಿಕೆಯನ್ನ ಒಳಗೊಂಡಿರುವ ಸರ್ಕಾರದ ಹೊಸ ಪ್ರಸ್ತಾವದ ಬಗ್ಗೆ ಚರ್ಚಿಸಲು ಐದು ರೈತ ಮುಖಂಡರ ತಂಡವು ದೆಹಲಿಯಲ್ಲಿ ಚರ್ಚೆ ನಡೆಸಿದ್ದು, ಮುಂದಿನ ಹೋರಾಟದ ನಡೆ ನಿರ್ಧರಿಸಲಿದ್ದಾರೆ.

ಇಂದು ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಿರಿಯ ಸಚಿವರನ್ನು ಭೇಟಿ ಮಾಡಿದ್ದು, ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ನಿನ್ನೆ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಬಹುತೇಕ ರೈತರ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡಲು ಒಕ್ಕೂಟ ಸರ್ಕಾರ ಇಚ್ಛೆ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕೇಂದ್ರಕ್ಕೆ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ 702 ರೈತರ ಪಟ್ಟಿ ಕಳುಹಿಸಿದ SKM

ಸರ್ಕಾರ ರೈತರೊಂದಿಗೆ ಇಂದು ನಡೆದ ಮಾತುಕತೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಅನುಮೋದಿಸಿದ ಪರಿಷ್ಕೃತ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಟ್ರಾಕ್ಟರ್‌ ಟು ಟ್ವಿಟರ್‌ ಹೇಳಿದೆ. “ನಿನ್ನೆ ಸರ್ಕಾರದ ಪ್ರಸ್ತಾವನೆಗೆ ರೈತರು ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಸರ್ಕಾರವು ಹೊಸ ಪರಿಷ್ಕೃತ ಪ್ರಸ್ತಾವನೆಯನ್ನು ಕಳುಹಿಸಿದೆ. ಈ ಪರಿಷ್ಕೃತ ಪ್ರಸ್ತಾವನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಒಪ್ಪಿಗೆ ನೀಡಿದೆ. ಅಧಿಕೃತ ಪತ್ರ ಬರುವವರೆಗೆ ಸಂಯುಕ್ತ ಕಿಸಾನ್ ಮೋರ್ಚಾ ನಾಳೆ ಮಧ್ಯಾಹ್ನದ ಸಭೆಯಲ್ಲಿ ಈ ಪ್ರಸ್ತಾವನೆಯ ಕುರಿತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ” ಎಂದು ಅದು ಟ್ವೀಟ್ ಮಾಡಿದೆ.

ಇದನ್ನೂ ಓದಿ:ಪೆಪ್ಸಿ ಕಂಪೆನಿಯ ವಿರುದ್ದ ರೈತರಿಗೆ ಜಯ: ‘ಲೇಸ್‌ ಆಲೂಗಡ್ಡೆ’ಗಳ ಪೇಟೆಂಟ್ ರದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೋದಿಯವರು ರೈತರ ಮುಂಧೆ ಅಲ್ಲಾ ಕಳ್ಳ ನಕ್ಲಿ ರೈತರ ಮುಂಧೆ ತಲೆ ಬಾಗಿಧಾರೆ ಕಾರಣ ನಿಜವಾದ ರೈತರಿಗೆ ತೊಂದರೆ ಆಗಬಾರದೆಂದು ಇದು ನಮ್ಮ ದೇಶಕ್ಕಾಗಿ ಮೋದಿ ಅವರು ತಮ್ಮ ಅಸ್ತಿತ್ವ ಬಿಟ್ಟು ರೈತ ಪರ ಕಾಳಜಿ ತೋರಿದ ಹಾಗಾಗಿಧೆ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...