Homeಕರ್ನಾಟಕರಂಗಾಯಣ ನಿರ್ದೇಶಕರ ನೇಮಕಾತಿಯನ್ನು ರದ್ದುಪಡಿಸಿದ ರಾಜ್ಯ ಸರ್ಕಾರ: ರಂಗಕರ್ಮಿಗಳ ಆಕ್ರೋಶ

ರಂಗಾಯಣ ನಿರ್ದೇಶಕರ ನೇಮಕಾತಿಯನ್ನು ರದ್ದುಪಡಿಸಿದ ರಾಜ್ಯ ಸರ್ಕಾರ: ರಂಗಕರ್ಮಿಗಳ ಆಕ್ರೋಶ

- Advertisement -
- Advertisement -

ಸರ್ಕಾರ ದಿಢೀರನೇ ರಂಗಾಯಣ ನಿರ್ದೇಶಕರ ನೇಮಕಾತಿಯನ್ನು ಮತ್ತು ರಂಗಸಮಾಜದ ಸಾರ್ವತ್ರಿಕ ಮಂಡಳಿ ಸದಸ್ಯರುಗಳ ನಾಮನಿರ್ದೇಶನವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಆ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡುವವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳೇ ನಿರ್ದೇಶಕರನ್ನಾಗಿ ನೇಮಕಗೊಂಡಿರುತ್ತಾರೆ. ಮೈಸೂರು ರಂಗಾಯಣದ ನಿರ್ದೇಶಕರರಾದ ಭಾಗಿರಥಿ ಬಾಯಿ ಕದಂ, ಶಿವಮೊಗ್ಗದ ನಿರ್ದೇಶಕರಾಗಿ ಎಂ.ಗಣೇಶ್, ಕಲ್ಬುರ್ಗಿ ರಂಗಾಯಣದ ಮಹೇಶ್ ವಿ.ಪಾಟೀಲ್, ಧಾರವಾಡದ ನಿರ್ಧೇಕರಾದ ಪ್ರಮೋದ್ ಶಿಗ್ಗಾಂವ್ ಹಾಗೂ ರಂಗಸಮಾಜದ ಸಾರ್ವತ್ರಿಕ ಮಂಡಳಿ ಸದಸ್ಯರಾದ ಶ್ರೀಪಾದ್ ಭಟ್, ಗೋಪಾಲಕೃಷ್ಣ ನಾಯರಿ, ಮಲ್ಲಿಕಾರ್ಜುನ ಕಡಕೋಳ, ವಿಶ್ವೇಶ್ವರಿ ಹಿರೇಮಠ, ಸಹನಾ ಪಿಂಜಾರ್, ಎಲ್.ಕೃಷ್ಣಪ್ಪ. ಎಂ.ಚಂದ್ರಾಕಾಂತರವರ ನೇಮಕಾತಿಯನ್ನು ರದ್ದುಗೊಳಿಸಿ, ಪದಮುಕ್ತಗೊಳಿಸಲಾಗಿದೆ.

“ಇದೀಗ ಬಂದಿರುವ ಸುದ್ದಿಯಂತೆ ರಾಜ್ಯ ಸರ್ಕಾರ ನಾಲ್ಕೂ ರಂಗಾಯಣದ ನಿರ್ದೇಶಕರ ಮತ್ತು ರಂಗ ಸಮಾಜದ ಸದಸ್ಯರ ಅಧಿಕಾರ ಆವಧಿಯನ್ನು ರದ್ದು ಪಡಿಸಿ, ಪದಮುಕ್ತಗೊಳಿಸಲು ಆದೇಶಿಸಿದೆ. ಇದು ಸರ್ಕಾರಕ್ಕೆ ಗೌರವ ತರುವ ಆದೇಶ ಅಲ್ಲ. ಆ ನಿರ್ದೇಶಕರು ಮತ್ತು ಸದಸ್ಯರು ಹಾಕಿಕೊಂಡ ಯೋಜನೆ ಹಾಗೂ ಕನಸುಗಳನ್ನು ಹೊಸಕಿ ಹಾಕುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಅವರ ಕಾಲಾವಧಿಯನ್ನು ಮುಂದುವರಿಸಿ. ನನಗೆ ಗೊತ್ತಿರುವಂತೆ ಶ್ರೀ ಡಾ. ಎಂ ಗಣೇಶ್, ಶ್ರೀ ಪ್ರಮೋದ್ ಶಿಗ್ಗಾಂವ್, ಶ್ರೀಮತಿ ಭಾಗೀರಥಿ ಬಾಯಿ ಕದಂ ಎಲ್ಲರೂ ಹೊಸ ತಲೆಮಾರಿನ ನಿರ್ದೇಶಕರು ಬಹಳ ಜತನದಿಂದ ಕೆಲಸ ಮಾಡುತ್ತಿದ್ದಾರೆ, ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಅದನ್ನು ಸಂಪೂರ್ಣವಾಗಿ ಮುಗಿಸಲು ಬಿಡಿ”. ಎಂದು ರಂಗ ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ಇದೊಂದು ಅನಿಷ್ಟ ಅನಾರೋಗ್ಯಕರ ಪದ್ಧತಿ. ಇವರು ಹೀಗೆ ಮಾಡುತ್ತಿದ್ದಾರೆಂದು ಅವರು, ಅವರು ಹಾಗೆ ಮಾಡುತ್ತಿದ್ದಾರೆಂದು ಇವರು ಈ ರೀತಿ ಮಾಡುವುದು ಸರಿಯಲ್ಲ. ರಂಗಾಯಣದ ನಿರ್ದೇಶಕನೆಂದರೆ ಆತ/ಆಕೆ ಓಬ್ಬ ಕ್ರಿಯಾಶೀಲ ವ್ಯಕ್ತಿ. ಅವರು ಹಲವಾರು ರಂಗಕನಸನ್ನ ಈಡೇರಿಸಲು ರಂಗಾಯಣದ ಜವಾಬ್ದಾರಿ ಹೊತ್ತಿರುತ್ತಾರೆ. ಶಿವಮೊಗ್ಗ, ಧಾರವಾಡ, ಮೈಸೂರಿನ ರಂಗಾಯಣದ ನಿರ್ದೇಶಕರು ಸಮರ್ಥವಾಗಿ ಕೆಲಸಮಾಡುತ್ತಿದ್ದಾರೆ. ಅವರನ್ನು ಅವರ ಅವಧಿಯವರೆಗೆ ಮುಂದುವರೆಯಲು ಬಿಟ್ಟು ಸರ್ಕಾರ ಉದಾತ್ತತೆ ತೋರಿಸಬಹುದಾಗಿತ್ತು. ಒಂದು ಅನಿಷ್ಟ ಪದ್ಧತಿಗೆ ಇತೀಶ್ರೀ ಹಾಡಬಹುದಾಗಿತ್ತು. ಈಗಲಾದರೂ ಸರಿ ಮತ್ತೂಮ್ಮೆ ಸರಕಾರ ತನ್ನ ಈ ವಿವೇಚನೆ ಇಲ್ಲದ ನಿರ್ಧಾರವನ್ನು ಮರುಪರಿಶೀಲನೆ ಮಾಡಿಕೊಳ್ಳಬೇಕು. ರಂಗಾಯಣ ಯಾವುದೋ ಒಂದು ನಿಗಮ ಮಂಡಳಿಯಂತಲ್ಲ” ಎಂದು ಈ ಹಿಂದೆ ಧಾರವಾಡ ರಂಗಾಯಣದ ರಂಗನಿರ್ದೇಶಕರಾಗಿದ್ದ ಪ್ರಕಾಶ್ ಗರುಡರವರು ಹೇಳಿದ್ದಾರೆ

ದೇಶದ ರಂಗಭೂಮಿಯ ಇತಿಹಾಸದಲ್ಲಿ ಕನ್ನಡ ರಂಗಭೂಮಿ ತನ್ನದೇ ಆದ ಸ್ಥಾನ ಪಡೆಯಲು ಕಾರಣ ಸಾಕಷ್ಟು ಸ್ವತಂತ್ರ ರಂಗ ಪ್ರಯೋಗಗಳು. ಮತ್ತು ವ್ಯವಸ್ಥೆಯ ಹುಳಕುಗಳನ್ನು ಕನ್ನಡಿಯಂತೆ ರಂಗದ ಮೇಲೆ ತೋರಿಸಿದ ಸಾಕಷ್ಟು ಹಿರಿಯ ರಂಗಕರ್ಮಿಗಳ ಶ್ರಮದಿಂದ. ಕನ್ನಡ ರಂಗಭೂಮಿಯ ಚರಿಯತ್ರೆಯಲ್ಲಿ ಹಲವು ರಂಗ ಸಂಸ್ಥೆಗಳು ಕಲೆಗಾಗಿ ದುಡಿದಿವೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿ ಸರ್ಕಾರಿ ಸಂಸ್ಥೆಯಾದ ಕನ್ನಡ ಸಂಸ್ಕೃತಿ ಇಲಾಖೆಯ ಮೇಲಿದೆ. ಆದರೆ ಇಲಾಖೆ ಇತ್ತೀಚಿಗೆ ಕಲೆಯ ಆಳ ಅಗಲ ತಿಳಿಯದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈಗೆ ಸಿಕ್ಕು ಕೇವಲ ಕಲೆಗಾಗಿ ಕಲೆ ಎನ್ನುವಂತೆ ಆಗಿ ಹೋಗಿದೆ.

ಇತ್ತಿಚಿಗೆ ಬಂದ ಬಿ.ಎಸ್.ಯಡಿಯೂರಪ್ಪನವರ ಹೊಸ ಸರ್ಕಾರ ಕಳೆದ ಸರ್ಕಾರ ನೇಮಕ ಮಾಡಿದ್ದ ರಂಗಾಯಣ ನಿರ್ದೇಶಕರು ಮತ್ತು ರಂಗ ಸಮಾಜದ ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸುವುದರಿಂದ ರಾಜಕೀಯ ಗಾಳಿ ಸೋಕಿದೆ. ರಂಗಾಯಣ ಮತ್ತು ರಂಗಭೂಮಿಯ ಚಟುವಟಿಕೆಗಳನ್ನು ಈ ರೀತಿಯಾಗಿ ರಾಜಕೀಯವಾಗಿ ನೋಡುವುದು ಶುದ್ಧ ತಪ್ಪು. ಏಕೆಂದರೆ ರಂಗಾಯಣದ ರಂಗನಿರ್ದೇಶಕರು ಮತ್ತು ರಂಗಸಮಾಜ ತಮಗೆ ನೀಡಿದ ಸಮಯದಲ್ಲಿ ಒಂದಷ್ಟು ರಂಗ ಚಟುವಟಿಕೆಗಳ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಈ ರೀತಿ ದಿಢೀರನೇ ಅವರನ್ನು ಮನೆಗೆ ಕಳುಹಿಸುವುದು ರಂಗಭೂಮಿಗೆ ಮಾಡಿದ ಅವಮಾನವಾಗಿದೆ. ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಎಲ್ಲಾ ರಾಜಕೀಯ ಸಂಸ್ಥೆಗಳಂತೆ ನೋಡದೆ, ವಿಶೇಷವಾದ ಸ್ವತಂತ್ರ ಸಂಸ್ಥೆಗಳಾಗಿಯೇ ನೋಡಬೇಕಿದೆ.

ನಮ್ಮ ಕರ್ನಾಟಕದಲ್ಲಿ ಒಂದಷ್ಟು ಸ್ಫಷ್ಟ ಸಾಂಸ್ಕೃತಿಕ ನೀತಿಗಳನ್ನು ರೂಪಿಸಿಕೊಳ್ಳುವ ಮೂಲಕ ಇಂತಹ ಅವಘಡಗಳನ್ನು ತಪ್ಪಿಸಬೇಕಿದೆ. ಈಗ ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ ಪಕ್ಷ ಸರ್ಕಾರವನ್ನು ರಚಿಸಿರುವುದರಿಂದ ಅದು ಮತ್ತೆ ನೇಮಕ ಮಾಡುವ ರಂಗನಿರ್ದೇಶಕರು ಅದೇ ರೀತಿಯ ಮನಸ್ಥಿತಿಯವರಾದರೆ ರಂಗಭೂಮಿಯ ವಾತಾವರಣವೇ ಕಲುಷಿತಗೊಳ್ಳವ ಅವಕಾಶ ಹೆಚ್ಚಾಗಿಯೇ ಇದೆ ಎಂದು ಯುವ ರಂಗಕರ್ಮಿ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...