ಹಿಜಾಬ್ ಧರಿಸಿದ ಬಾಲಕಿಗೆ ಓದು ಮುಂದುವರಿಸಲು ಅವಕಾಶ ನೀಡುವಂತೆ ಕೇರಳ ಸಚಿವರ ಸೂಚನೆ

ಕೊಚ್ಚಿಯ ಕ್ರಿಶ್ಚಿಯನ್ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮುಸ್ಲಿಂ ಹುಡುಗಿ ತನ್ನ ಧಾರ್ಮಿಕ ಗುರುತಾದ ಹಿಜಾಬ್ ಧರಿಸಿ ಶಿಕ್ಷಣ ಮುಂದುವರಿಸಲು ಅವಕಾಶ ನೀಡುವಂತೆ ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮಂಗಳವಾರ ನಿರ್ದೇಶನ ನೀಡಿದ್ದಾರೆ. ‘ಯಾವುದೇ ಶಿಕ್ಷಣ ಸಂಸ್ಥೆಯು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವ ಕೇರಳದಲ್ಲಿ, ಯಾವುದೇ ವಿದ್ಯಾರ್ಥಿಯು ಧರ್ಮದ ಕಾರಣಕ್ಕೆ ತೊಂದರೆ ಎದುರಿಸಬಾರದು. ‘ಹಿಜಾಬ್’ (ಧಾರ್ಮಿಕ ಶಿರಸ್ತ್ರಾಣ) ಧರಿಸಿದ ಬಾಲಕಿಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಮತ್ತು ಆಕೆಯ … Continue reading ಹಿಜಾಬ್ ಧರಿಸಿದ ಬಾಲಕಿಗೆ ಓದು ಮುಂದುವರಿಸಲು ಅವಕಾಶ ನೀಡುವಂತೆ ಕೇರಳ ಸಚಿವರ ಸೂಚನೆ