Homeಕರ್ನಾಟಕಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಸೇರಿದಂತೆ ಆರು ಮಂದಿಗೆ ’ಮಾಸ್ತಿ ಪ್ರಶಸ್ತಿ’

ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಸೇರಿದಂತೆ ಆರು ಮಂದಿಗೆ ’ಮಾಸ್ತಿ ಪ್ರಶಸ್ತಿ’

- Advertisement -
- Advertisement -

’ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್’‌ ವತಿಯಿಂದ ಕನ್ನಡದ ಪ್ರಮುಖ ಸಾಹಿತಿ ’ಮಾಸ್ತಿ ವೆಂಕಟೇಶ ಅಯ್ಯಂಗಾರ್’‌ ಅವರ ಹೆಸರಲ್ಲಿ ನೀಡಲಾಗುವ ಈ ಸಾಲಿನ ‘ಮಾಸ್ತಿ ಪ್ರಶಸ್ತಿ’ ಪ್ರಕಟಗೊಂಡಿದ್ದು, ಜೆಎನ್‌ಯು ಮಾಜಿ ಪ್ರೊಫೆಸರ್‌, ಸಂಶೋಧಕ ಪುರುಷೋತ್ತಮ ಬಿಳಿಮಲೆ ಹಾಗೂ ಸಾಹಿತಿ ಸುಬ್ರಾಯ ಚೊಕ್ಕಾಡಿ ಸೇರಿದಂತೆ ಆರು ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಪತ್ರಿಕೋದ್ಯಮದಲ್ಲಿ ಆತ್ಮಸಾಕ್ಷಿ & ಸಮಗ್ರತೆಗಾಗಿ ಲೂಯಿಸ್ ಎಂ. ಲಿಯಾನ್ಸ್ ಪ್ರಶಸ್ತಿ ಪಡೆದ ಕಾರವಾನ್!

  • ಪುರುಷೋತ್ತಮ ಬಿಳಿಮಲೆ (ಸಂಶೋಧನೆ)
  • ಸುಬ್ರಾಯ ಚೊಕ್ಕಾಡಿ (ಕಾವ್ಯ)
  • ಎಸ್‌.ಆರ್.ವಿಜಯಶಂಕರ (ವಿಮರ್ಶೆ)
  • ಕೇಶವರೆಡ್ಡಿ ಹಂದ್ರಾಳ (ಕಥೆ)
  • ಸ.ರಘುನಾಥ (ಸೃಜನಶೀಲ)
  • ಸಂಧ್ಯಾ ಎಸ್‌.ಪೈ (ಶಿಶು ಸಾಹಿತ್ಯ)  ಒಟ್ಟು ಆರು ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾರ್ಚ್‌ 27 ರಂದು ಭಾರತೀಯ ವಿದ್ಯಾಭವನ ಸಭಾಂಗಣ, ಬೆಂಗಳೂರು ಇಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ತಿಳಿಸಿದ್ದಾರೆ.

ಮಾಸ್ತಿ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು, ಮಾಸ್ತಿ ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿವೆ.

ಪ್ರಶಸ್ತಿಯಲ್ಲಿ ಬರುವ ಹಣವನ್ನು ತಾನು ಹೋರಾಟಕ್ಕೆ ವಿನಿಯೋಗಿಸುವುದಾಗಿ ಸಂಶೋಧಕ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಇದನ್ನೂ ಓದಿ: ಸರಸ್ವತಿ ಪೂಜೆ ವಿರೋಧಿಸಿ ’ಜೀವಮಾನ ಸಾಧನೆ ಪ್ರಶಸ್ತಿ’ ತಿರಸ್ಕರಿಸಿದ ಮರಾಠಿ ಕವಿ ಯಶ್ವಂತ್‌ ಮನೋಹರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...