ಯಾವುದೆ ಆ್ಯಂಬುಲೆನ್ಸ್ ಸಿಗದ ಕಾರಣ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್‌ನಲ್ಲೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಆಸ್ಪತ್ರೆಯ ಅಧಿಕಾರಿಗಳು ಆಂಬ್ಯುಲೆನ್ಸ್ ನಿರಾಕರಿಸಿದ ಕಾರಣ ಈ ಘಟನೆ ನಡೆದಿದೆ ಎಂದು TNIE ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಹೋದರರಾದ ಚಂದ್ರಣ್ಣ ಮತ್ತು ಗೋಪಾಲಪ್ಪ ಅವರು ಶವವನ್ನು ಸವಾರ ಮತ್ತು ಹಿಂಬದಿ ಸವಾರನ ನಡುವೆ ತಮ್ಮ ತಂದೆಯ ಮೃತದೇಹವನ್ನು ಇಟ್ಟಯ ಆಸ್ಪತ್ರೆಯಿಂದ ಸುಮಾರು 3-4 ಕಿಮೀ ದೂರದಲ್ಲಿರುವ ದಳವಾಯಿಹಳ್ಳಿ ಗ್ರಾಮಕ್ಕೆ ಸವಾರಿ ಮಾಡಿದ್ದಾರೆ.
ಅಸ್ವಸ್ಥರಾಗಿದ್ದ ತಮ್ಮ ತಂದೆ ಗುಡುಗುಳ್ಳ ಹೊನ್ನೂರಪ್ಪ (80) ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಇದರ ನಂತರ ಸಹೋದರರಿಬ್ಬರು ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಸೇವೆಯನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ಕೋರಿದ್ದರು. ಆದರೆ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ವರಿದಯಾಗಿದೆ. ಅಷ್ಟೆ ಅಲ್ಲದೆ, ಪಾವಗಡ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ಮಧ್ಯ ಪ್ರವೇಶಿಸಿದರೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಮೂಲಗಳು ತಿಳಿಸಿದ್ದಾರೆ ವರದಿಯಾಗಿದೆ.
ವಾಗ್ವಾದದ ನಂತರ, ಸಹೋದರರಿಬ್ಬರು ತಮ್ಮ ಬೈಕ್‌ನಲ್ಲಿ ಶವವನ್ನು ಸಾಗಿಸಲು ನಿರ್ಧರಿಸಿದ್ದಾರೆ. ಘಟನೆಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎನ್.ಮಂಜುನಾಥ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆಯಲ್ಲಿ ಶವ ಸಾಗಿಸಲು ಯಾವುದೇ ವಾಹನದ ಸೌಲಭ್ಯಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನಾರೋಗ್ಯದ ವೇಳೆ ಕರೆತಂದಿದ್ದ 108 ಆ್ಯಂಬುಲೆನ್ಸ್‌ನಲ್ಲೇ ಊರಿಗೆ ಶವ ಸಾಗಿಸಲು ಸಿಬ್ಬಂದಿಗಳಲ್ಲಿ ಮಕ್ಕಳು ವಿನಂತಿಸಿದ್ದರು. ಆದರೆ, 108 ಆ್ಯಂಬುಲೆನ್ಸ್‌ನಲ್ಲಿ ಮೃತಪಟ್ಟ ಬಳಿಕ ಶವ ಸಾಗಿಸುವಂತಿಲ್ಲ ಎಂಬ ನಿಯಮ ಇರುವುದರಿಂದ ಶವ ಕೊಂಡೊಯ್ಯಲು ನಿರಾಕರಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.
ಬೈಕಿನಲ್ಲಿ ಶವವನ್ನು ಸಾಗಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಗೃಹ ಸಚಿವರ ತವರು ಜಿಲ್ಲೆಯಲ್ಲೆ ಇಂತದ್ದೊಂದು ದಾರುಣ ಘಟನೆ ನಡೆದಿರುವುದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರೆ ಆದ ಸಾಮಾಜಿಕ ಹೋರಾಟಗಾರ ಅನಿಲ್ ಚಿಕ್ಕದಾಳವಟ್ಟ ಅವರು ಘಟನೆಗೆ ಪ್ರತಿಕ್ರಿಯಿಸಿ, “ಅತಿ ಹಿಂದುಳಿದ ತಾಲ್ಲೂಕುಗಳ ದುಸ್ಥಿತಿ ಇದು. ಈ ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದಾರೆ. ಈ ಕ್ಷೇತ್ರದ ಶಾಸಕ ಮಾಜಿ ಸಚಿವರ ಮಗ. ಕನಿಷ್ಠ ಆರೋಗ್ಯ, ಶಿಕ್ಷಣದ ವ್ಯವಸ್ಥೆಯನ್ನಾದರೂ ಸರಿಪಡಿಸಿಕೊಳ್ಳಲಾರದ ದುಸ್ಥಿತಿ ನಮ್ಮದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ: ‘ಭ್ರಷ್ಟಾಚಾರವನ್ನು ನಾವು ಮರು ವ್ಯಾಖ್ಯಾನಿಸಬೇಕಾಗಿದೆ’ : ವಿ ಎಲ್ ನರಸಿಂಹಮೂರ್ತಿ


