Homeಮುಖಪುಟಅಮಿತ್ ಶಾ-ದೇವೇಂದ್ರ ಫಡ್ನವಿಸ್ ಭೇಟಿ: ಮಹಾರಾಷ್ಟ್ರದಲ್ಲಿಯೂ ಆಪರೇಷನ್ ಕಮಲ?

ಅಮಿತ್ ಶಾ-ದೇವೇಂದ್ರ ಫಡ್ನವಿಸ್ ಭೇಟಿ: ಮಹಾರಾಷ್ಟ್ರದಲ್ಲಿಯೂ ಆಪರೇಷನ್ ಕಮಲ?

- Advertisement -
- Advertisement -

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಆತಂಕ ಎದುರಿಸುತ್ತಿರುವುದರ ನಡುವೆಯೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರವರು ಗೃಹಸಚಿವ ಅಮಿತ್‌ ಶಾರವರನ್ನು ಭೇಟಿಯಾಗಿರುವುದು ಮಹಾರಾಷ್ಟ್ರದಲ್ಲಿಯೂ ಆಪರೇಷನ್ ಕಮಲ ನಡೆಯಲಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಹುಮತವಿಲ್ಲದಿದ್ದರೂ ಸರ್ಕಾರ ರಚಿಸಿ ಮುಖಭಂಗ ಅನುಭವಿಸಿದ್ದ ದೇವೇಂದ್ರ ಫಡ್ನವಿಸ್ ಈ ಬಾರಿಯಾದರೂ ಸರ್ಕಾರ ರಚಿಸುವ ಉಮೇದಿನಲ್ಲಿದ್ದಾರೆ ಎಂಬ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

ಆದರೆ ಈ ಊಹಾಪೋಹಗಳನ್ನು ಫಡ್ನವಿಸ್ ಅಲ್ಲಗೆಳೆದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯ ನಂತರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೊಂದು “ರಾಜಕೀಯೇತರ” ಭೇಟಿ ಎಂದು ತಿಳಿಸಿದ್ದಾರೆ.

ಇದು ರಾಜ್ಯದ ಸಕ್ಕರೆ ಉದ್ಯಮಕ್ಕೆ ಆರ್ಥಿಕ ನೆರವು ಪಡೆಯುವ ಗುರಿಯನ್ನು ಹೊಂದಿದೆ. ಮತ್ತು ರಾಜ್ಯದ ಕೊರೊನಾ ವೈರಸ್ ಸನ್ನಿವೇಶದ ಬಗ್ಗೆ ಅಮಿತ್‌ ಷಾಗೆ ವಿವರಿಸುವ ಮತ್ತು ಪರಿಸ್ಥಿತಿಯನ್ನು ತಿಳಿಸಲು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಸಮಯ ಕೋರುವ ಸಭೆಯಾಗಿದೆ ಎಂದು ಫಡ್ನವಿಸ್ ಹೇಳಿದ್ದಾರೆ.

“ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಾವು ಆಸಕ್ತಿ ಹೊಂದಿಲ್ಲ … ಕರೊನಾ ವೈರಸ್ ವಿರುದ್ಧ ಹೋರಾಡುವ ಸಮಯವಿದು” ಎಂದು ಅವರು ಹೇಳಿದ್ದಾರೆ.

“ಮಹಾರಾಷ್ಟ್ರದಲ್ಲಿ ಯಾವುದೇ ‘ಆಪರೇಷನ್ ಕಮಲ’ ನಡೆಯುವುದಿಲ್ಲ. ಸರ್ಕಾರವು ಆಂತರಿಕ ವಿರೋಧಾಭಾಸಗಳಿಂದ ಕೂಡಿದೆ. ಹಾಗಾಗ ಅದು ತಾನಾಗಿಯೇ ಕುಸಿಯುತ್ತದೆ” ಎಂದು ಫಡ್ನವಿಸ್ ತಿಳಿಸಿದ್ದಾರೆ.

ಫಡ್ನವೀಸ್‌ರವರಿಗೆ ರಾಷ್ಟ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಲಾಗಿದೆ ಎಂಬ ಊಹಾಪೋಹಗಳನ್ನು ಸಹ ಅವರು ತಿರಸ್ಕರಿಸಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದ ಹಲವು ಬಿಜೆಇ ನಾಯಕರು ಸಹ ಅವರೊಂದಿಗೆ ದೆಹಲಿಗೆ ಹೋದ ಬಗ್ಗೆ ಕೇಳಿದಾಗ, ಅವರು ಸಕ್ಕರೆ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.

ಬಿಜೆಪಿಯ ಮುಖಂಡರಾದ ಹರ್ಷವರ್ಧನ್ ಪಾಟೀಲ್, ಧನಂಜಯ್ ಮಹಾದಿಕ್, ರಂಜಿತ್ ಸಿನ್ಹ್ ಮೋಹೈಟ್, ಶಾಸಕ ಜಯಕುಮಾರ್ ಗೋರ್, ಸಂಸದ ರಂಜಿತ್ ನಿಂಬಲ್ಕರ್, ಮತ್ತು ಬಿಜೆಪಿಯ ಮಿತ್ರರಾದ ಜನ್ಸುರಾಜ್ಯ ಶಕ್ತಿ ಪಕ್ಷದ ವಿನಯ್ ಕೋರೆ ಅವರು ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಫಡ್ನವೀಸ್ ಅವರೊಂದಿಗೆ ಭಾಗವಹಿಸಿದ್ದರು ಎನ್ನಲಾಗಿದೆ.


ಇದನ್ನೂ ಓದಿ: ವಾರಣಾಸಿ: ನೇಪಾಳಿ ಯುವಕನ ತಲೆ ಬೋಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ಹಿಂದುತ್ವವಾದಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸರಕಾರದ ವಿರುದ್ಧ ‘ಖಾಲಿ ಚೊಂಬು’ ಹಿಡಿದು ಪ್ರತಿಭಟನೆ

0
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು ಬೆಂಗಳೂರು ನಗರದ ಮೇಕ್ರಿ ಸರ್ಕಲ್ ಬಳಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದ್ದು, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯ...