ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ‘ಶಿವಲಿಂಗ’ದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ (ಡಿಯು) ಪ್ರೊಫೆಸರ್, ‘ಅಂಬೇಡ್ಕರ್ ನಾಮ’ ಸಂಪಾದಕ ರತನ್ ಲಾಲ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಆದರೆ ಶನಿವಾರ, ದೆಹಲಿಯ ತೀಸ್ ಹಜಾರಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ.
ಅವರ ಬಂಧನದ ಬಗ್ಗೆ ಪೊಲೀಸ್ ಉಪ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ದೃಢಪಡಿಸಿದ್ದಾರೆ. “ಪ್ರೊಫೆಸರ್ ರತನ್ ಅವರು ಮಂಗಳವಾರ ಕಟ್ಟಡವೊಂದರ ಫೋಟೋವನ್ನು ಪೋಸ್ಟ್ ಮಾಡಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದ್ದು, ತನಿಖೆಯನ್ನು ಕೈಗೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರತನ್ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಮತ್ತು 295A ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಮೂಲದ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ ರತನ್ ಲಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎಂದು ಹಳೆಯ ಚಿತ್ರಗಳು ವೈರಲ್!
ವಕೀಲ ವಿನೀತ್ ಜಿಂದಾಲ್ ಅವರು ತನ್ನ ದೂರಿನಲ್ಲಿ, ರತನ್ ಲಾಲ್ ಅವರು ಇತ್ತೀಚೆಗೆ “ಶಿವಲಿಂಗದ ಮೇಲೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಟ್ವೀಟ್” ಅನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಿಕ್ಕಿದೆ ಎನ್ನಲಾಗಿರುವ ‘ಶಿವಲಿಂಗ’ದ ವಿಚಾರದ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಇದು ಅತ್ಯಂತ ಸೂಕ್ಷ್ಮ ಸ್ವರೂಪದ್ದಾಗಿದೆ. ಈ ವಿಷಯವು ನ್ಯಾಯಾಲಯದ ಮುಂದೆ ಬಾಕಿ ಇದೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
प्रो. @ratanlal72 साहब ने सत्य ही तो कहा है और जहां सत्य है वहां शिव है और शिव ही सुंदर है जहां शिव है वहां मैं हूं…. भावार्थ यह हुआ कि रतनलाल सत्य के साथ हैं शिव सत्य है मैं शिव के साथ अर्थात रतनलाल साहब के साथ हूं। "सत्यम शिवम् सुंदरम"#WesupportProfRatanlal pic.twitter.com/DsIvbdqU7d
— Aniruddh Singh Vidrohi (@MandalArmyChief) May 18, 2022
ಪ್ರೊಫೆಸರ್ ರತನ್ ಲಾಲ್ ಅವರು ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ. “ಭಾರತದಲ್ಲಿ, ನೀವು ಯಾವುದೇ ವಿಷಯದ ಬಗ್ಗೆ ಮಾತನಾಡಿದರೆ, ಯಾರಿಗಾದರೂ ಅಥವಾ ಇನ್ನೊಬ್ಬರ ಭಾವನೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಇದು ಹೊಸದೇನಲ್ಲ. ನಾನು ಇತಿಹಾಸಕಾರನಾಗಿದ್ದು, ಇಂತಹ ಹಲವಾರು ಅವಲೋಕನಗಳನ್ನು ಮಾಡಿದ್ದೇನೆ ಮತ್ತು ಅವುಗಳನ್ನು ಬರೆದಿದ್ದೇನೆ” ಎಂದು ಹೇಳಿದ್ದಾರೆ.



ಹಿಂದೂ ಭಾವನೆಗಳ ಬಗ್ಗೆ ಮಾತನಾಡಿದ ಈ ಅಯೋಗ್ಯನನ್ನ ಅಲ್ಲೇ ಕಡಿದು ಹಾಕಬೇಕಿತ್ತು .ಈ ಕಮ್ಯೂನಿಸ್ಟ್ ಭೋಳಿ ಮಗನ್ನ ಕಡಿದು ಊರಿನ ಬಾಗಲಿಗೆ ನೇತಾಡಬೇಕಿತ್ತು
ಹಿಂದೂ ವೈದಿಕರಲ್ಲಿ 33 ಕೋಟಿ ದೇವರಿದ್ದು ಅವರ ಕುರಿತು ಅತಿ ವಿಚಿತ್ರ ಕಥೆಗಳೂ ಇರುವುದರಿಂದ, ನಾವು ಜೋರಾಗಿ ಕೆಮ್ಮಿದರೂ 33 ಕೋಟಿ ದೇವರಲ್ಲಿ ಯರಾದರೊಬ್ಬ ದೇವರಿಗೆ ಅವಮಾನ ಆಗುವುದು ಖಚಿತ. ಹಾಗಾದರೆ ನಾವು ಕೆಮ್ಮುವುದನ್ನು ಸೀನುವುದನ್ನು ನಿಲ್ಲಿಸಬೇಕೇ ??😢😢
ಬ್ರಾಹ್ಮಣ್ಯ ಹಿಂದುತ್ವದ ಮುಖವಾಡ ಧರಿಸಿ ಮೇರೆಯಲು ಪ್ರಾರಂಭಿಸಿದೆ ಬಹುಸಂಖ್ಯಾತರಿಗೆ ವಿದ್ಯೆ ನಿಶಿದ್ದವಾಗಿದ್ದ ಕಾಲದಲ್ಲಿ ಎನೆನೊ ಸುಳ್ಳು ಪುಸ್ತಕಗಳು ಕಾಲ್ಪನಿಕ ವೇದ ಪುರಾಣ ಬರೆದು ಜನರನ್ನು ನಂಬಿಸಿ ತಮ್ಮ ಹೊಟ್ಟೆಪಾಡು ಮಾಡಿಕೊಂಡು ಸುಖ ಜೀವನ ಮಾಡಿಕೊಂಡು ರಾಜ ಮಹಾರಾಜರನ್ನು ಓಲೈಸಿಕೊಂಡು ಬದುಕಿದ್ದ ವೈದಿಕ ಸನಾತನಿಗಳಿಗೆ ಆದುನಿಕ ಶಿಕ್ಷಣ ಪಡೆದ ಜನ ತಮ್ಮ ಕಾಲ್ಪನಿಕ ಕಥೆಗೆ ಪ್ರತಿಕ್ರಿಯಿಸುತ್ತಿರುವುದು ಹತಾಶೆ ಮೂಡಿಸಿದೆ.
ಇದೆಲ್ಲ ಮಾಟ ಮಂತ್ರ ಮಾಡಿ ಕಲ್ಪನೆ ಯಾ ಸಂಕಲ್ಪ ಮಾಡಿದ್ದಾರೆ ಬಿಜೆಪಿ ಸರ್ಕಾರ ಬಾರುತ್ತೆ ಅಂತಾ ಈ ಮಾಂತ್ರಿಕ ಚೀನಾ ದ ಮಾಂತ್ರಿಕ ವಿದ್ಯೆ ಜೋತೆಗೆ ಪೆಗಾಸಸ್ ಸ್ಪೈವೇರ್ ಬಳಸಿಕೋಂಡು ಜನರ ನೆಮ್ಮದಿ ಕೆಡಿಸಿ ಸೀನಿಮಾ ತರ ಎಲ್ಲಾರನ್ನು ನಟನೆ ಮಾಡುತ್ತಾನೆ ತುಮಕೂರು ಪ್ರಸಾದ್ ಬಂಗಾರಿ ಮತ್ತು ಮಂತೇಶ್ ಬಾಬು ವಿರಪುರ (ಶಿವಕೂಮಾರ್ ಸ್ವಾಮಿ ಜಿ ಊರು) ಪಕ್ಕಾ ಶಾಂತಪುರ