ಅಣ್ಣಾ ವಿಶ್ವವಿದ್ಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವ ವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಏಕೈಕ ಅಪರಾಧಿ 37 ವರ್ಷದ ಜ್ಞಾನಶೇಖರನ್‌ಗೆ ಚೆನ್ನೈನ ಮಹಿಳಾ ನ್ಯಾಯಾಲಯ ಸೋಮವಾರ (ಜೂ.2) 30 ವರ್ಷಗಳ ವಿನಾಯಿತಿ ಇಲ್ಲ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ ವಾರ, ನ್ಯಾಯಾಲಯವು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 64(1) (ಅತ್ಯಾಚಾರ) ಸೇರಿದಂತೆ 11 ನಿಬಂಧನೆಗಳ ಅಡಿಯಲ್ಲಿ ಜ್ಞಾನಶೇಖರನ್‌ ದೋಷಿ ಎಂದು ಘೋಷಿಸಿತ್ತು. ಇಂದು (ಸೋಮವಾರ) ಶಿಕ್ಷೆ ಪ್ರಮಾಣ ಘೋಷಿಸುವುದಾಗಿ ತಿಳಿಸಿತ್ತು. ಸೋಮವಾರ ಪುಳಲ್‌ನ ಕೇಂದ್ರ ಕಾರಾಗೃಹದಿಂದ ಪೊಲೀಸ್ ವ್ಯಾನ್‌ನಲ್ಲಿ … Continue reading ಅಣ್ಣಾ ವಿಶ್ವವಿದ್ಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ