‘ನ್ಯಾಯಯುತ ಬೇಡಿಕೆ ಮುಂದಕ್ಕೆ ಹಾಕುವ ಮತ್ತೊಂದು ಪ್ರಯತ್ನ..’; ನಾಗಮೋಹನ್‌ದಾಸ್‌ ಸಮಿತಿ ಮಧ್ಯಂತರ ವರದಿಗೆ ಎನ್.ಮೂರ್ತಿ ವಿರೋಧ

ಜಸ್ಟೀಸ್ ನಾಗಮೋಹನ್ ದಾಸ್ ಏಕಸದಸ್ಯ ಸಮಿತಿ ಒಳ ಮೀಸಲಾತಿ ಕುರಿತು ಗುರುವಾರ ಸಲ್ಲಿಸಿರುವ ಮಧ್ಯಂತರ ವರದಿ ಸಹ ನಮ್ಮ ನ್ಯಾಯಯುತ ಬೇಡಿಕೆಯನ್ನು ಮುಂದಕ್ಕೆ ಹಾಕುವ ಮತ್ತೊಂದು ಪ್ರಯತ್ನವಾಗಿದೆ ಎಂದು ಹಿರಿಯ ದಲಿತ ಮುಖಂಡರಾದ ಎನ್.ಮೂರ್ತಿ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸುಪ್ರೀಂಕೋರ್ಟಿನ ಏಳು ಮಂದಿ ನ್ಯಾಯಮೂರ್ತಿಗಳ ತೀರ್ಪಿನಂತೆ ಒಳಮೀಸಲಾತಿ ಜಾರಿಗಾಗಿ ಕರ್ನಾಟಕ ಸರಕಾರ ರಚಿಸಿರುವ ನ್ಯಾ. ನಾಗಮೋಹನ್‌ದಾಸ್ ಏಕಸದಸ್ಯ ಆಯೋಗ ನೀಡಿರುವ ಮಧ್ಯಂತರ ವರದಿ ಮಾದಿಗ ವಿರೋಧಿಯಾಗಿದೆ. ಮಧ್ಯಂತರ ವರದಿಯನ್ನು ಸರ್ಕಾರವೇ ಹೇಳಿ ಬರೆಸಿದೆ. … Continue reading ‘ನ್ಯಾಯಯುತ ಬೇಡಿಕೆ ಮುಂದಕ್ಕೆ ಹಾಕುವ ಮತ್ತೊಂದು ಪ್ರಯತ್ನ..’; ನಾಗಮೋಹನ್‌ದಾಸ್‌ ಸಮಿತಿ ಮಧ್ಯಂತರ ವರದಿಗೆ ಎನ್.ಮೂರ್ತಿ ವಿರೋಧ