Homeಮುಖಪುಟವೇದಾಂತ ಸ್ಟೆರ್‌‌ಲೈಟ್ ವಿರೋಧಿ ಹಿಂಸಾಚಾರ: ರಜನಿಕಾಂತ್‌ಗೆ ಸಮನ್ಸ್

ವೇದಾಂತ ಸ್ಟೆರ್‌‌ಲೈಟ್ ವಿರೋಧಿ ಹಿಂಸಾಚಾರ: ರಜನಿಕಾಂತ್‌ಗೆ ಸಮನ್ಸ್

ಈ ಹಿಂದೆ ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಸನ್ ಅವರು ರಜನಿಕಾಂತ್‌ಗೆ ಸಮನ್ಸ್ ನೀಡಿದ್ದರಾದರೂ ಅವರು ಸಮಸ್ಸ್‌‌ನಿಂದ ವಿನಾಯತಿ ಪಡೆದಿದ್ದರು.

- Advertisement -
- Advertisement -

ತಮಿಳುನಾಡಿನ ತೂತುಕುಡಿಯಲ್ಲಿರುವ ದೈತ್ಯ ಗಣಿಗಾರಿಕಾ ಕಂಪೆನಿಯಾದ ವೇದಾಂತ ಗ್ರೂಪ್‌ನ ಸ್ಟೆರ್‌ಲೈಟ್‌ ತಾಮ್ರ ಕರಗಿಸುವ ಘಟಕದಿಂದಾಗಿ ಪರಿಸರ ಹಾನಿಯಾಗುತ್ತಿದೆ. ಜನ ಹಲವಾರು ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಈ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಅಲ್ಲಿನ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. 2018ರಲ್ಲಿ ಪ್ರತಿಭಟನೆ ವೇಳೆ ಪೊಲೀಸ್​ ಗುಂಡು ಹಾರಿಸಿ 13 ಜನ ಮೃತಪಟ್ಟಿದ್ದರು. ಇದೀಗ ಈ ಹಿಂಸಾಚಾರಕ್ಕೆ ಸಂಬಂಧ ಪಟ್ಟಂತೆ ತನಿಖೆಗೆ ಸಹಕರಿಸುವಂತೆ ಸೂಚಿಸಿ ಚಿತ್ರ ನಟ ರಜನಿಕಾಂತ್‌ ಅವರಿಗೆ ವಿಚಾರಣಾ ನ್ಯಾಯಾಲಯ ಸಮಸ್ಸ್ ಜಾರಿ ಮಾಡಿದೆ.

2018 ರಲ್ಲಿ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳೂ ಸಹ ಪ್ರತಿಭಟನೆಗೆ ಮುಂದಾಗಿದ್ದವು. ಆದರೆ, ಶಾಂತಿಯುತವಾಗಿ ನಡೆಯುತ್ತಿದ್ದ ಈ ಪ್ರತಿಭಟನೆ ಪೊಲೀಸ್​ ದಾಳಿಯಿಂದಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಕೊನೆಗೆ ಜನಸಮೂಹವನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ ಪರಿಣಾಮ 13 ಜನರು ಮೃತಪಟ್ಟಿದ್ದರು.ಈ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು.

ಇದನ್ನೂ ಓದಿ: ನಟ ರಜನಿಕಾಂತ್ ಅವರ ಬಹುನಿರೀಕ್ಷಿತ ಹೊಸ ಪಕ್ಷ ಜನವರಿಯಲ್ಲಿ ಆರಂಭ

ಘಟನೆಯ ನಂತರ ಗಾಯಾಳುಗಳನ್ನು ಭೇಟಿಯಾಗಿದ್ದ ರಜನಿಕಾಂತ್‌, ಪ್ರತಿಭಟನೆಯಲ್ಲಿ ಸಾಮಾಜ ವಿರೋಧಿಗಳು ನುಸುಳಿದ್ದರಿಂದ ಹಿಂಸಾಚಾರ ಸಂಭವಿಸಿದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಏಕ ಮಹಿಳಾ ನ್ಯಾಯಾಂಗ ಪೀಠವು ಅವರಿಗೆ ಸಮನ್ಸ್ ನೀಡಿದೆ. ಈ ಹಿಂದೆ ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಸನ್ ಅವರು ರಜನಿಕಾಂತ್ ಅವರಿಗೆ ಸಮನ್ಸ್ ನೀಡಿದ್ದರಾದರೂ ಅವರು ಸಮಸ್ಸ್‌‌ನಿಂದ ವಿನಾಯತಿ ಪಡೆದಿದ್ದರು.

ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರದ ಆಡಳಿತದ ವಿರುದ್ದ ಕಿಡಿಕಾರಿದ್ದ ರಜನಿಕಾಂತ್, ಹಿಂಸಾಚಾರಕ್ಕೆ ಸಮಾಜ ವಿರೋಧಿಗಳು ಕಾರಣ, ಅವರ ವಿರುದ್ದ ಕಠಿಣ ಕ್ರಮತೆಗೆದುಕೊಳ್ಳಲು ಒತ್ತಾಯಿಸಿದ್ದರು. ರಜನಿಕಾಂತ್ ಅವರ ಹೇಳಿಕೆಯು ಪೊಲೀಸರು ಮಿತಿಮೀರಿದ ಬಲವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದ ಸ್ಥಳೀಯರನ್ನು ತೀವ್ರವಾಗಿ ಅಸಮಾಧಾನಗೊಳಿಸಿತ್ತು.

ಇದನ್ನೂ ಓದಿ: ದೇಶದ ಶಾಂತಿಗಾಗಿ ಯಾವುದೇ ಪಾತ್ರ ವಹಿಸಲು ಸಿದ್ದ: ರಜನಿಕಾಂತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...