HomeUncategorizedಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದುಕೊಟ್ಟ ’ಅಪ್ಪು ಡ್ಯಾನ್ಸ್'

ಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದುಕೊಟ್ಟ ’ಅಪ್ಪು ಡ್ಯಾನ್ಸ್’

- Advertisement -
- Advertisement -

“ರಿಯಲ್ ಲೆಜೆಂಡ್ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದು, ಶಾಶ್ವತವಾಗಿ ನನ್ನ ನೆನಪಿನಲ್ಲಿ ಉಳಿಯುತ್ತದೆ. ಆಗ ನಾನು ಕೇವಲ ಡ್ಯಾನ್ಸರ್ ಅಷ್ಟೆ. ಒಂದು ಅವಾರ್ಡ್ ಕಾರ್ಯಕ್ರಮಕ್ಕೆ ನಾವು ಡ್ಯಾನ್ಸ್ ರಿಹರ್ಸಲ್ ಮಾಡುತ್ತಿದ್ದೆವು. ಊಟದ ನಂತರ ಪುನೀತ್ ಸರ್ ಅವರು ತಮ್ಮ ಡ್ಯಾನ್ಸ್ ರಿಹರ್ಸಲ್‌ಗೆ ಬಂದರು. ಅವರನ್ನು ಸ್ವಾಗತಿಸಲು ನಾವೆಲ್ಲರೂ ಎದ್ದು ನಿಂತೆವು. ವೇದಿಕೆಯ ಒಂದು ಭಾಗದಲ್ಲಿ ಸಿನಿಮಾ ನಟ, ನಟಿಯರು ಮತ್ತು ಕೊರಿಯೋಗ್ರಾಫರ್ಸ್ ನಿಂತಿದ್ದರು. ಮತ್ತೊಂದು ಕಡೆ ನಾವು ಡ್ಯಾನ್ಸರ್‌ಗಳು ನಿಂತಿದ್ದೆವು. ಅಲ್ಲಿಗೆ ಬಂದ ಕೂಡಲೇ ಅವರು ಮೊದಲು ನೋಡಿದ್ದು ಡ್ಯಾನ್ಸರ್‌ಗಳನ್ನು. ಬಳಿಕ ಎಲ್ಲರಿಗೂ ಹಲೋ ಹೇಗಿದ್ದೀರಾ ಎಂದು ಕೇಳಿದರು. ಡ್ಯಾನ್ಸ್ ಅಭ್ಯಾಸ ಮಾಡಿ ಮಾಡಿ ಸುಸ್ತಾಗಿತ್ತು, ಮೈಕೈ ನೋವು ಕೂಡ ಇತ್ತು. ಆದರೆ, ಪುನಿತ್ ಅವರ ಎನರ್ಜಿ ಮತ್ತು ಅವರ ನಗು ನೋಡಿ ನಮಗೆ ಮತ್ತೆ ರಿಹರ್ಸಲ್ ಮಾಡಬೇಕು ಅನಿಸುತ್ತಿತ್ತು. ಎಲ್ಲರಿಗೂ ಫುಲ್ ಉತ್ಸಾಹ ಬಂದಿತ್ತು. ಪುನೀತ್ ರಾಜಕುಮಾರ್‌ನಂತಹ ನಟ ಈ ರೀತಿ ಮಾಡುವ ಅಗತ್ಯವಿರಲಿಲ್ಲ. ಅವರು ಅಲ್ಲಿಗೆ ಬರುತ್ತಿದ್ದಂತೆ ಮತ್ತೊಂದು ಭಾಗದಲ್ಲಿದ್ದ ಸೆಲೆಬ್ರಿಟಿಗಳನ್ನು ಮಾತನಾಡಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ಪ್ರತಿಯೊಬ್ಬರಿಗೂ ಒಂದೇ ರೀತಿಯ ಪ್ರೀತಿ ಮತ್ತು ಗೌರವ ಕೊಡುತ್ತಿದ್ದರು” ಇದು ತಾವು ಡ್ಯಾನ್ಸರ್ ಆಗಿದ್ದಾಗ ನಡೆದ ಘಟನೆಯನ್ನು ನಟಿ ಶ್ರುತಿ ಹರಿಹರನ್ ಸಾಮಾಜಿಕ ಜಾಲತಾಣವೊಂದರ ತಮ್ಮ ಪೋಸ್ಟ್‌ನಲ್ಲಿ ನೆನಪಿಸಿಕೊಂಡ ರೀತಿ.

ಇದು ಡ್ಯಾನ್ಸ್ ಬಗ್ಗೆ, ಡ್ಯಾನ್ಸರ್‌ಗಳ ಬಗ್ಗೆ ನಟ ಪುನಿತ್ ರಾಜಕುಮಾರ್ ಅವರಿಗಿದ್ದ ಪ್ರೀತಿ. ಪುನೀತ್ ರಾಜಕುಮಾರ್ ಕನ್ನಡ ಸಿನಿ ಪ್ರೇಮಿಗಳಲ್ಲಿ ಡ್ಯಾನ್ಸ್ ಕ್ರೇಜ್ ಹುಟ್ಟಿಸಿದ ನಾಯಕ ನಟ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಕನ್ನಡದ ಮೈಕಲ್ ಜಾಕ್ಸನ್ ಎಂದು ಕೂಡ ಕರೆಸಿಕೊಳ್ಳುವ ಅಪ್ಪು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಡ್ಯಾನ್ಸ್ ಹುಚ್ಚು ಹಿಡಿಸಿದವರು.

ಚಲಿಸುವ ಮೋಡಗಳು ಚಿತ್ರದ ’ಕಾಣದಂತೆ ಮಾಯವಾದನೋ’ ಹಾಡು, ಪರಶುರಾಮ ಚಿತ್ರದಲ್ಲಿನ ’ನಗುತಾ ನಗುತಾ ಬಾಳು ನೀನು ನೂರು ವರುಷ’ ಗೀತೆಯಲ್ಲಿ ಬರುವ ಕೆಲವೇ ಸ್ಟೆಪ್‌ಗಳಲ್ಲಿ ಬಾಲನಟ ಪುನೀತ್ ತಮ್ಮ ನೃತ್ಯ ಕಲೆಯ ಛಾಪನ್ನು ಪರಿಚಯಿಸಿದ್ದರು. ಇನ್ನು ನಾಯಕನಟನಾಗಿ ಅವರ ಮೊದಲ ಚಿತ್ರ ’ಅಪ್ಪುವಿನ ’ತಾಲಿಬಾನ್ ಅಲ್ಲ ಅಲ್ಲಾ ಹಾಡು ಕಾಲೇಜು ಯುವಕರಲ್ಲಿ ಹೊಸ ಉತ್ಸಾಹ ತುಂಬಿತ್ತು. ರಾಮ್ ಚಿತ್ರದ ’ಹೊಸ ಗಾನ ಬಜಾನ’, ಜಾಕಿ ಚಿತ್ರದ ’ಜಾಕಿ.. ಜಾಕಿ, ಶಿವ ಅಂತ ಹೋಗುತ್ತಿದ್ದೆ’ ಹಾಡುಗಳು, ಅಣ್ಣಾ ಬಾಂಡ್ ಚಿತ್ರದ ಟೈಟಲ್ ಟ್ರಾಕ್, ಪರಮಾತ್ಮ ಚಿತ್ರದ ’ಕತ್ಲಲ್ಲಿ ಕರಡಿಗೆ’ ಹಾಡುಗಳ ಡ್ಯಾನ್ಸ್ ಸ್ಟೆಪ್ಸ್ ಮಕ್ಕಳಲ್ಲಿ, ಟೀನೇಜ್ ಮತ್ತು ಯುವಕ ಯುವತಿಯರಲ್ಲಿ ಅಪ್ಪು ಬಗ್ಗೆ ವಿಪರೀತ ಪ್ರೀತಿ ಹುಟ್ಟಿಸಿದ್ದವು. ಇವುಗಳ ಕಾರಣಕ್ಕೆ ಹೆಚ್ಚು ಮಕ್ಕಳನ್ನು ಬಳಸಿಕೊಂಡು ರಾಜಕುಮಾರ ಚಿತ್ರದ ’ಡ್ಯಾನ್ಸ್, ಡ್ಯಾನ್ಸ್, ಡ್ಯಾನ್ಸ್ ಅಪ್ಪು ಡ್ಯಾನ್ಸ್’ ಹಾಡು ಚಿತ್ರೀಕರಿಸಲಾಗಿತ್ತು.

ಪುನೀತ್ ರಾಜಕುಮಾರ್ ಅವರ ಡ್ಯಾನ್ಸ್ ಬಗ್ಗೆ, ಡ್ಯಾನ್ಸ್ ಮಾಸ್ಟರ್ ಆಗಿ ಸಿನಿರಂಗಕ್ಕೆ ಬಂದು ನಿರ್ದೇಶಕರಾಗಿರುವ ಹರ್ಷ ಮಾಸ್ಟರ್ ನ್ಯಾಯಪಥ ಪತ್ರಿಕೆಯೊಂದಿಗೆ ನೆನಪಿಸಿಕೊಂಡಿದ್ದು ಹೀಗೆ, “ಅಪ್ಪು ಸಿನಿಮಾಗೂ ಮುಂಚೆಯೇ ನನಗೆ ಪುನೀತ್ ರಾಜಕುಮಾರ್ ಪರಿಚಯ. ಆ ಸಿನಿಮಾಗೂ ಮುಂಚೆಯೇ, ಅಣ್ಣಾವ್ರು ಮತ್ತು ಪಾರ್ವತಮ್ಮ ರಾಜಕುಮಾರ್ ಅವರು ಒಂದೆರಡು ತಿಂಗಳು ಪುನೀತ್ ಅವರಿಗೆ ಡ್ಯಾನ್ಸ್ ಟ್ರೇನಿಂಗ್ ಕೊಡಲು ಕರೆಸಿದ್ದರು. ಅವರ ಅಪ್ಪು ಚಿತ್ರದಿಂದ ಈಗ ಶೂಟಿಂಗ್ ನಡೆಯುತ್ತಿದ್ದ ಜೇಮ್ಸ್‌ವರೆಗೂ ಅವರ ಜೊತೆಗೆ ಇದ್ದೀನಿ. ಜೇಮ್ಸ್ ಸಿನಿಮಾದ ಒಂದು ಹಾಡಿಗೆ ಕಾಶ್ಮೀರಕ್ಕೆ ತೆರಳಿ ಕೊರಿಯೋಗ್ರಾಫ್ ಮಾಡಿ ಬಂದಿದ್ದಿನಿ. ಡ್ಯಾನ್ಸರ್ ಅಂತ ಬಂದಾಗ ಅವರು ಯಾವತ್ತೂ ಕೂಡ ಇದು ಕಷ್ಟ ಅಂತ ಹೇಳಲೇ ಇಲ್ಲ. ಕಷ್ಟ ಅನ್ನೋ ಪದವನ್ನು ನಾನು ಅವರಿಂದ ಕೇಳಲೇ ಇಲ್ಲ. ಬೆಸ್ಟ್ ಡ್ಯಾನ್ಸರ್ ಅವರು. ಡ್ಯಾನ್ಸ್ ಅಂದ್ರೆ ಅವರಿಗೆ ತುಂಬಾ ಇಷ್ಟ” ಎನ್ನುತ್ತಾರೆ.

“ಪುನೀತ್ ಅವರ ಜೊತೆಗೆ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದಿನಿ, ಅಭಿ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದೀನಿ. ಜೊತೆಗೆ ಅವರ ’ಅಂಜನಿ ಪುತ್ರಕ್ಕೆ ನಿರ್ದೇಶಕನಾಗಿದ್ದಿನಿ. ಎಲ್ಲಾ ವಿಧವಾಗಿ ಅವರ ಜೊತೆಗೆ ನಾನು ಇದ್ದೆ” ಎಂದು ಭಾವುಕರಾಗಿ ನುಟಿಯುತ್ತಾರೆ ನಿರ್ದೇಶಕ ಹರ್ಷ.

ಚಿತ್ರರಂಗದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯನಿರ್ದೇಶನ ಮಾಡಿರುವ ಮದನ್ ಹರಿಣಿ ಜೋಡಿ, ಅಪ್ಪು ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. “ಅವರು ತುಂಬಾ ಪ್ರತಿಭಾನ್ವಿತ ನಟ ಅವರು. ಸರಳತೆಯ ಪ್ರತಿರೂಪ. ಅವರ ಜೊತೆಗೆ ಕೆಲಸ ಮಾಡಿಲ್ಲ. ಅದರೆ ಅವರ ಬ್ಯಾನರ್ ಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರೊಬ್ಬ ಯುತ್ ಐಕಾನ್. ಅವರು ಒಬ್ಬ ನಟ, ಗಾಯಕ, ಡ್ಯಾನ್ಸರ್ ಎಲ್ಲವೂ ಆಗಿದ್ದ ಪರಿಪೂರ್ಣ ನಟ ಅವರು” ಎಂದಿದ್ದಾರೆ ಹರಿಣಿ.

“ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಒಂದು ಹಾಡಿಗೆ ಅವರಿಗೆ ಕೊರಿಯೋಗ್ರಾಫ್ ಮಾಡುವ ಅವಕಾಶ ಸಿಕ್ಕಿತ್ತು. ದರ್ಶನ್ ಮತ್ತು ಪುನೀತ್ ಇಬ್ಬರು ಬಬ್ರುವಾಹನ ಚಿತ್ರದ ಹಾಡಿಗೆ ನಟಿಸುತ್ತಿದ್ದರು. ಅದು ಒಂದು ಒಳ್ಳೆಯ ಅನುಭವ. ಅವರೊಬ್ಬ ಪರಿಪೂರ್ಣ ನಟ. ಈ ಆಘಾತದಿಂದ ನನಗೆ ಇನ್ನು ಚೇತರಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಹರಿಣಿ.

ಅಪ್ಪು ಅಭಿಮಾನಿಯಾಗಿರುವ ಮತ್ತು ತಮ್ಮ ನೃತ್ಯ ತರಬೇತಿಗೆ ಅಪ್ಪುನೇ ಯುನಿವರ್ಸಿಟಿ ಎನ್ನುವ ಡ್ಯಾನ್ಸ್ ಮಾಸ್ಟರ್ ಚೇತನ್ ಮಂಜುನಾಥ್, ಪುನೀತ್ ರಾಜಕುಮಾರ್ ಅವರನ್ನು ನೃತ್ಯರತ್ನ ಎನ್ನುತ್ತಾರೆ.
“ಅಪ್ಪು ಅಂದ್ರೆ ಎನರ್ಜಿ, ಸ್ಪೆಷಲೀ ಡ್ಯಾನ್ಸರ್ಸ್‌ಗೆ. ಅವರಿಂದ ತುಂಬಾ ಕಲ್ತಿದೀವಿ, ಕಲಿತಿರ್ತೀವಿ ಕೊನೆಯವರೆಗೂ.. ನನ್ನಂತ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಕ್ಕಳಿಗಂತೂ ಅಪ್ಪು ಡ್ಯಾನ್ಸ್ ಯುನಿವರ್ಸಿಟಿ ಇದ್ದಂಗೆ.. ಯಾಕಂದ್ರೆ ನಮಗೆ ನೃತ್ಯದಲ್ಲಿ ಹೊಸದಾಗಿ ಕಲಿಯೋದಕ್ಕೆ ಅನುಕೂಲಗಳಿರಲಿಲ್ಲ.. ಇವರ ಪ್ರತಿ ಸಿನಿಮಾಗಳಿಗೂ ಹುಚ್ಚರಂತೆ ಕಾಯ್ತಿದ್ವಿ. ಸಾಂಗ್ಸ್ ಹೇಗಿರ್ತವೆ.. ಡ್ಯಾನ್ಸ್ ಹೇಗಿರುತ್ತೆ, ಯಾವ ರೀತಿ ಹೊಸ ಸ್ಟೆಪ್ ಹಾಕ್ತಾರೆ ಅಂತ.. ಸಿನಿಮಾ ಹಾಡು ರಿಲೀಸ್ ಆದ ತಕ್ಷಣ ಅವರು ಹಾಕಿರೊ ಸ್ಟೆಪ್‌ಗಳನ್ನ ಕಲ್ತು ಸ್ಟೇಜ್ ಪ್ರೋಗ್ರಾಮ್ ಕೊಡ್ತಿದ್ವಿ.. ನಮ್ ಜೊತೆ ಕಲಿತಿದ್ದ ಮಕ್ಕಳಿಗೂ ಹೇಳಿ ಕೊಡ್ತಿದ್ವಿ. ಅಪ್ಪು ನಮ್ಮ ಕನ್ನಡ ಚಿತ್ರರಂಗದ ನೃತ್ಯರತ್ನ.. ಬೇರೆ

ಇಂಡಸ್ಟ್ರಿಯಲ್ಲಿದ್ದ ಈ ಜನರೇಷನ್‌ನ ಗ್ರೇಟ್ ಡ್ಯಾನ್ಸರ್ಸ್ ಮತ್ತು ಹೀರೋಗಳಿಗೆಲ್ಲಾ ನಮ್ಮ ಕನ್ನಡದಿಂದ ಕಾಂಪಿಟಿಶನ್ ಕೊಡ್ತಿದ್ದಿದುಷ್ಟೇ ಅಲ್ಲ ನಮ್ಮ ಅಪ್ಪು, ನಾವೆಲ್ಲಾ ಎದೆ ತಟ್ಟಿಕೊಂಡು ಹೇಳ್ತಿದ್ವಿ ಅಪ್ಪು ಈಸ್ ನಂಬರ್ ಒನ್ ಡ್ಯಾನ್ಸರ್ ಇನ್ ಇಂಡಿಯಾ ಅಂತ.. ಈಗ ಫಿಸಿಕಲಿ ಅವರಿಲ್ಲಾ ಅಷ್ಟೇ.. ಬಟ್ ನನ್ನಂತ ಲಕ್ಷಾಂತರ ಕಲಾವಿದರ ಕಲೆಯೊಳಗೆ ಬೆರೆತುಹೋಗಿದ್ದಾರೆ ಅವರು. ಕಲೆ ಮತ್ತು ಕನ್ನಡದ ಜೊತೆ ಯಾವತ್ತೂ ಜೀವಂತವಾಗಿರ್ತಾರೆ. ನಮ್ಮಂತ ಯುವ ಕಲಾವಿದರಿಗಂತೂ ಅವರೇ ಭರವಸೆ ಮತ್ತು ಭವಿಷ್ಯ ಆಗಿದ್ದರು.. ಯಾಕಂದ್ರೆ ಅವರು ಪಿ.ಆರ್.ಕೆ ಪ್ರೊಡಕ್ಷನ್ ಸ್ಟಾರ್ಟ್ ಮಾಡಿ ಹೊಸಹೊಸ ತಂತ್ರಜ್ಞರಿಗೆ ಸಪೋರ್ಟ್ ಮಾಡ್ತಾ ಬೆಳೆಸ್ತಿದ್ದಿದ್ದು ನಮ್ಮ ಕಣ್ಣ ಮುಂದೇನೆ ಇದೆ.. ನಮ್ಮೆಲ್ಲರ ಕನಸುಗಳಿಗೆ.. ಹೊಸ ಹೊಸ ಸ್ಕ್ರಿಪ್ಟ್‌ಗಳಿಗೆ ಇನ್ನು ಅನಾಥಭಾವ ಕಾಡಲಿದೆ” ಎಂದು ಕಣ್ಣೀರು ಇಡುತ್ತಾರೆ ಬೆಂಗಳೂರಿನಲ್ಲಿ ’ನಕ್ಷತ್ರ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಡ್ರಾಮಾ’ ಸಂಸ್ಥೆ ನಡೆಸುತ್ತಿರುವ ಚೇತನ್ ಮಂಜುನಾಥ್.

ಸಿನಿಮಾಗಳಲ್ಲಿ ಕಥೆ, ಫೈಟ್, ಕಾಮಿಡಿಗೆ ಪ್ರಾಮುಖ್ಯತೆ ಕೊಟ್ಟ ಹಾಗೆಯೇ ಪುನೀತ್ ರಾಜಕುಮಾರ್ ಅವರ ಚಿತ್ರಗಳಲ್ಲಿ ಡ್ಯಾನ್ಸ್‌ಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಡ್ಯಾನ್ಸ್‌ನಲ್ಲಿ ಹೊಸಹೊಸ ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದರು ಅಪ್ಪು. ಪ್ರತಿ ಸಿನಿಮಾದಲ್ಲಿಯೂ ಒಂದಲ್ಲ ಒಂದು ಹಾಡು ಕರ್ನಾಟಕದಾದ್ಯಂತ ಕ್ರೇಜ್ ಕ್ರಿಯೇಟ್ ಮಾಡುತ್ತಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಡ್ಯಾನ್ಸ್ ಎಂದು ಟೈಪ್ ಮಾಡಿದರೆ ಮೊದಲು ಬರುವುದು ಅಪ್ಪು ಮಕ್ಕಳ ಜೊತೆಗೆ ಡ್ಯಾನ್ಸ್ ಮಾಡುವ ವಿಡಿಯೋ, ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುವುದು, ಮಗುವಿಗಾಗಿ ಡ್ಯಾನ್ಸ್ ಮಾಡುವುದು ಇಂತಹವೆ. ಇದು ಮಕ್ಕಳಲ್ಲಿ ಅಪ್ಪು ಬಗೆಗಿನ ಅಭಿಮಾನಕ್ಕೆ ಸಾಕ್ಷ್ಯದಂತೆ ಬೆಳಗುತ್ತದೆ.
ಇತ್ತೀಚೆಗೆ ಭಜರಂಗಿ-೨ ಸಿನಿಮಾದ ಪ್ರಚಾರದ ವೇಳೆ ವೇದಿಕೆ ಮೇಲೆ ಶಿವರಾಜ್ ಕುಮಾರ್, ಯಶ್ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ. ಇದರ ಜೊತೆಜೊತೆಗೆ ಡ್ಯಾನ್ಸ್ ರಾಜ, ಭಾರತದ ಮೈಕಲ್ ಜಾಕ್ಸನ್ ಎಂದು ಕರೆಸಿಕೊಳ್ಳುವ ಪ್ರಭುದೇವ್ ಅವರ ಜೊತೆಗೆ ’ಲಕ್ಕಿಮ್ಯಾನ್ ಚಿತ್ರದ ಹಾಡೊಂದಕ್ಕೆ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ತಮ್ಮದೇ ಪಿಆರ್‌ಕೆ ಬ್ಯಾನರ್‌ನಲ್ಲಿ ಬಂದ ಮಾಯಾಬಜಾರ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು. ಕಿರುತೆರೆಯ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಡ್ಯಾನ್ಸರ್‌ಗಳಿಗೆ ಸ್ಫೂರ್ತಿ ತುಂಬಿದ್ದಾರೆ ಪುನೀತ್ ರಾಜಕುಮಾರ್. ಯಾವ ಡ್ಯಾನ್ಸರ್ ಆದರೂ ನಿಮ್ಮೊಂದಿಗೆ ಒಂದು ಸ್ಟೆಪ್ ಹಾಕಬೇಕು ಎಂದು ಕೇಳಿದ ತಕ್ಷಣ ವೇದಿಕೆ ಮೇಲೆ ಹತ್ತಿ ಡ್ಯಾನ್ಸ್ ಮಾಡಿರುವುದು ಅವರ ವಿನಯಕ್ಕೆ ಸಾಕ್ಷಿಯಾಗಿದೆ.

ಭೂತಾಯಿಯ ಗರ್ಭ ಸೇರಿದ್ದು ಕೇವಲ ಪುನೀತ್ ರಾಜಕುಮಾರ್ ಅವರ ದೇಹವಲ್ಲ. ಎಷ್ಟೋ ಯುವ ಪ್ರತಿಭೆಗಳ ಕನಸು ಕೂಡ. ಪಿಆರ್‌ಕೆ ಪ್ರೊಡಕ್ಷನ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿತ್ತು. ಹೊಸ ಡ್ಯಾನ್ಸರ್‌ಗಳ ಬಳಿ ಹೊಸ ಹೊಸ ಕನಸುಗಳಿದ್ದವು. ಇವುಗಳೆಲ್ಲಾ ಪುನೀತ್ ಅವರ ಪ್ರತಿಭೆಯ ನೆನಪಿನಲ್ಲಿ ಮತ್ತೆ ಚಿಗುರೊಡೆಯಬೇಕಿದೆ. ಕನ್ನಡ ನಾಡು ಕಂಡ ಮಾನವೀಯ ವ್ಯಕ್ತಿತ್ವದ ಒಬ್ಬ ಮಹಾನ್ ನಟ ಮತ್ತು ಅದ್ಭುತ ನೃತ್ಯಗಾರರನ್ನು ನಾಡು ಕಳೆದುಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...