Homeಮುಖಪುಟ'ನೀವು ಬಿಜೆಪಿ ಏಜೆಂಟಾ?'- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

‘ನೀವು ಬಿಜೆಪಿ ಏಜೆಂಟಾ?’- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

- Advertisement -
- Advertisement -

ಕಾಂಗ್ರೆಸ್ ನಾಯಕ ಕನ್ಹಯ್ಯಕುಮಾರ್‌ ಅವರಿಗೆ ಅಪ್ರಬುದ್ಧ ಪ್ರಶ್ನೆಗಳನ್ನು ಕೇಳಿ ಪತ್ರಕರ್ತರೊಬ್ಬರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಕನ್ಹಯ್ಯಕುಮಾರ್‌‌ ಕೇಳಿದ ಮರುಪ್ರಶ್ನೆಗಳಿಗೆ ಉತ್ತರಿಸಲಾಗದೆ ಪತ್ರಕರ್ತ ಕ್ಷಮೆಯಾಚಿಸಿರುವ ಕುರಿತು ‘Brut India’ ಮಾಧ್ಯಮ ವರದಿ ಮಾಡಿದೆ.

ಡಿಸೆಂಬರ್‌ 20ರಂದು ರಾಹುಲ್‌ ಗಾಂಧಿಯವರು ಪತ್ರಕರ್ತನಿಗೆ ಚಾಟಿ ಬೀಸಿದ್ದರು. “ಸದನಕ್ಕೆ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಚರ್ಚೆಗಳು ನಡೆಯುತ್ತಿಲ್ಲ” ಎಂದು ಪತ್ರಕರ್ತ ಆರೋಪಿಸಿದಾಗ, “ನೀವು ಸರ್ಕಾರದ ಪರವಾಗಿ ಕೆಲಸ ಮಾಡುತ್ತೀರಾ” ಎಂದು ಕೇಳಿದ್ದರು. ಮಾರನೇ ದಿನವೂ ಇದೇ ಉತ್ತರವನ್ನು ಪತ್ರಕರ್ತರಿಗೆ ಹೇಳಿದ್ದರು. ಇದರ ಜೊತೆಗೆ ಕನ್ಹಯ್ಯಕುಮಾರ್‌ ಅವರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಮಾಧ್ಯಮಗಳು ಪೂರ್ವಗ್ರಹ ಪೀಡಿತವಾಗಿದ್ದು, ಸರ್ಕಾರದ ಪರ ಕೆಲಸ ಮಾಡುತ್ತಿವೆ ಎಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ.

ಕನ್ಹಯ್ಯ ಕುಮಾರ್‌ ಹಾಗೂ ಪತ್ರಕರ್ತನ ನಡುವೆ ನಡೆದ ಮಾತುಕತೆ

ಪತ್ರಕರ್ತ: ನೀವು ಕಾಂಗ್ರೆಸ್ ಸೇರಿರುವುದರಿಂದ ಎಡದಿಂದ ಬಲಪಂಥಕ್ಕೆ ಬಂದಂತಾಗಿದೆ. ಜನರು ಏನೆಂದು ತಿಳಿಯಬೇಕಾಗಿದೆ?

ಕನ್ಹಯ್ಯ: ಕಾಂಗ್ರೆಸ್‌ ಬಲಪಂಥವೇ? ಹೇಗೆ ಕಾಂಗ್ರೆಸ್‌ ಬಲಪಂಥ ಎಂಬುದನ್ನು ನನಗೆ ಹೇಳಿ.

ಪತ್ರಕರ್ತ: ಈ ರೀತಿಯ ಮನಸ್ಥಿತಿ ಹೀಗಾಗಲೇ ಸೃಷ್ಟಿಯಾಗಿದೆ.

ಕನ್ಹಯ್ಯ: ಹೇಗೆ

ಪತ್ರಕರ್ತ: ಕಾಂಗ್ರೆಸ್‌, ಬಿಜೆಪಿ ಒಳಗೊಂಡಂತೆ ಮೂರು ರೀತಿಯ ರಾಜಕೀಯ ಪಕ್ಷಗಳು ದೇಶದಲ್ಲಿವೆ. ಎಡಪಂಥೀಯ ವಿಚಾರಧಾರೆಗಳಿವೆ….

ಕನ್ಹಯ್ಯ: ಯಾರೂ ಕೂಡ ಕಾಂಗ್ರೆಸ್ ಬಲಪಂಥೀಯ ಎಂದು ಹೇಳಿಲ್ಲ.

ಪತ್ರಕರ್ತ: ಹಾಗಾದರೆ ಏನೆಂದು ಕರೆಯುತ್ತಾರೆ?

ಕನ್ಹಯ್ಯ: ಯಾರೂ ಕೂಡ ಕಾಂಗ್ರೆಸ್ ಬಲಪಂಥೀಯ ಎಂದು ಹೇಳಲಾರರು. ನೀವು ಏನೆಂದು ಕರೆಯುತ್ತೀರಿ? ನೀವು ಪತ್ರಕರ್ತರಲ್ಲವೇ? ನೀವು ನಾಲ್ಕನೇ ಅಂಗ. ಸಮಾಜದಲ್ಲಿ ನಿಮ್ಮ ಜವಾಬ್ದಾರಿ ದೊಡ್ಡದಿದೆ. ನೀವು ಏನು ಬರೆಯುತ್ತೀರೋ, ಏನು ತೋರಿಸುತ್ತೀರೋ, ಅದು ಜನರ ಅಭಿಪ್ರಾಯವನ್ನು ರೂಪಿಸುತ್ತದೆ. ನಿಮ್ಮ ಯೋಚನೆ ಏನು? ಹೇಗೆ ನೀವು ಕಾಂಗ್ರೆಸ್ ಪಕ್ಷ ಬಲಪಂಥೀಯ ಎಂದು ಹೇಳುತ್ತೀರಿ?

ಪತ್ರಕರ್ತ: ಇದು ಎಡಪಂಥ ಮತ್ತು ಬಲ ಪಂಥದ ಕುರಿತಾಗಿದೆ. ಇದು ವಿಚಾರಧಾರೆಯ ಕುರಿತಾಗಿದೆ.

ಕನ್ಹಯ್ಯ: ಎಡ ಮತ್ತು ಬಲವಷ್ಟೇ ಸಿದ್ಧಾಂತವಲ್ಲ. ನೀವು ಅತ್ಯಂತ ಗಂಭೀರ ಉದ್ಯೋಗಕ್ಕೆ ಸಂಬಂಧಿಸಿದ್ದೀರಿ. ನೀವು ಹಾರ್ಡ್‌‌ವರ್ಕ್‌ ಕೂಡ ಮಾಡುತ್ತೀರಿ. ಯಾಕೆಂದರೆ ಗ್ರೌಂಡ್ ರಿಪೋರ್ಟಿಂಗ್‌ ನಿಂತು ಹೋಗಿದೆ. ಒಂದಿಷ್ಟು ಗಂಭೀರವಾದ, ಜನರ ಹಿತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನೀವು ಕೇಳಬೇಕೆಂದು ನಿಮ್ಮ ವೀಕ್ಷಕರು ಬಯಸುತ್ತಾರೆ. ನಾನು ಕೂಡ ಬಯಸುತ್ತೇನೆ. ನಾನು ಕಾಂಗ್ರೆಸ್ ಸೇರಿದೆ. ನಾನೇಕೆ ಕಾಂಗ್ರೆಸ್ ಸೇರಿದೆ? ಇದರ ಕುರಿತು ನೂರು ಸಲ ಹೇಳಿದ್ದೇನೆ. ಸರಿಯೇ? ಇದು ಮುಖ್ಯವಲ್ಲ. ‘ಇದು ಬಲಪಂಥ’ ಎಂದು ಇವರು ಹೇಳಿರುವುದು ಮುಖ್ಯವಿಷಯವಾಗುತ್ತದೆ. ಇದು ಹೇಗೆ ಬಲಪಂಥವಾಗುತ್ತದೆ? ಅದನ್ನು ವಿವರಿಸಿ ಹೇಳಿ. ಹೇಗೆ ಕಾಂಗ್ರೆಸ್ ಪಕ್ಷ ಬಲಪಂಥೀಯ ಎಂದು ಹೇಳುತ್ತೀರಿ?

ಪತ್ರಕರ್ತ: ವಿಚಾರಧಾರೆಗೆ ಸಂಬಂಧಿಸಿದ್ದು. ಎಡಪಂಥೀಯರು ವಿಭಿನ್ನ ವಿಚಾರಧಾರೆ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ.

ಕನ್ಹಯ್ಯ: ಏನು ಅವರ ವಿಚಾರಧಾರೆ?

ಪತ್ರಕರ್ತ: ಅವರು (ಎಡಪಂಥೀಯರು) ನಾಸ್ತಿಕರು, ದೇಶದ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎನ್ನುತ್ತಾರೆ.

ಕನ್ಹಯ್ಯ: ಅವರಿಗೆ ದೇಶದ ಬಗ್ಗ ಕಾಳಜಿ ಇಲ್ಲವೇ?

ಪತ್ರಕರ್ತ: ನಿಮ್ಮ ಮೇಲೆ ಆರೋಪಗಳಿವೆ….

ಕನ್ಹಯ್ಯ: ಆರೋಪಗಳು ಹೀಗಿವೆ… ನಾನು ನಿಮ್ಮನ್ನು ಮೂರ್ಖ ಎನ್ನುತ್ತೇನೆ. ನೀವು ಮೂರ್ಖರಾಗುತ್ತೀರಾ? ಎಲ್ಲರೂ ಈತ ಮೂರ್ಖ ಎಂದರೆ, ನೀವು ಮೂರ್ಖರಾಗುತ್ತೀರಾ? ಇಲ್ಲ ತಾನೇ? ಹಾಗಾದರೆ ನೀವು ಇದನ್ನು ಹೇಗೆ ಹೇಳುತ್ತೀರಿ? ಮೊದಲು, ನಾನು ಅವನನ್ನು ಕೇಳುತ್ತೇನೆ, ಇದನ್ನು ಹೇಗೆ ಹೇಳಿದಿರೆಂದು? ಎಡಪಂಥ ದೇಶಕ್ಕೆ ಸಂಬಂಧಿಸಿದ್ದಲ್ಲ ಎಂದು ನೀವು ಹೇಗೆ ಹೇಳಿದಿರಿ?

ಪತ್ರಕರ್ತ: ನಾನು ದೇಶದ ಬಗ್ಗೆ ಮಾತನಾಡುತ್ತಿಲ್ಲ.

ಕನ್ಹಯ್ಯ: ಓಕೆ, ಭಗತ್‌ಸಿಂಗ್‌ ಮೇಲೆ ಆರೋಪ ಮಾಡುತ್ತೀರಾ?

ಪತ್ರಕರ್ತ: ನಾನು ಭಗತ್‌ಸಿಂಗ್‌ ಬಗ್ಗೆ ಮಾತನಾಡುತ್ತಿಲ್ಲ.

ಕನ್ಹಯ್ಯ: ಯಾವ ಪುಸ್ತಕವನ್ನು ಭಗತ್ ಸಿಂಗ್‌ ಬರೆದಿದ್ದಾರೆ? ಭಗತ್‌ಸಿಂಗ್‌ ಬರೆದ ಪುಸ್ತಕದ ಹೆಸರೇನು?

ಪತ್ರಕರ್ತ: ಸರ್‌, ನಾನು ಭಗತ್‌ಸಿಂಗ್‌ ಅವರ ಕುರಿತು ಪ್ರಶ್ನೆ ಕೇಳಿಲ್ಲ. ನಾನು ನಿಮ್ಮ ಬಗ್ಗೆ ಕೇಳುತ್ತಿದ್ದೇನೆ.

ಕನ್ಹಯ್ಯ: ಯಾಕಿಲ್ಲ?

ಪತ್ರಕರ್ತ: ನಾನು ಜೆಎನ್‌ಯೂ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ಇನ್ನೂ ಜೆಎನ್‌ಯೂನಲ್ಲೇ ಇದ್ದೀರಿ.

ಕನ್ಹಯ್ಯ: ಜೆಎನ್‌ಯುವನ್ನು ನಾನು 2018ರಲ್ಲೇ ಬಿಟ್ಟಿದ್ದೇನೆ. ನೀವು ಮೊದಲು ಹೇಳಿ. ಎಡಪಂಥೀಯರು ನಾಸ್ತಿಕರು ಎಂದು ಹೇಳಿದಿರಿ. ಭಗತ್‌ಸಿಂಗ್‌ ಅವರ ಪುಸ್ತಕದ ಹೆಸರೇನು?

ಪತ್ರಕರ್ತ: ಇಲ್ಲ, ನಾನು ನಾಸ್ತಿಕತೆಯ ಬಗ್ಗೆ ಕೇಳಲಿಲ್ಲ ಸರ್‌. ಜನರ ಆಲೋಚನೆ ಮತ್ತು ಹೇಳಿಕೆಗಳನ್ನು…

ಕನ್ಹಯ್ಯ: ಯಾರು ಈ ಜನ ಹೇಳಿ ನನಗೆ? ಯಾರು ಈ ಜನ?

ಪತ್ರಕರ್ತ: ಸರ್‌, ಇದು ಜನರು ಹೇಳುತ್ತಿರುವುದು.

ಕನ್ಹಯ್ಯ: ನೀವು ಬಿಜೆಪಿಯಿಂದ ಹಣ ಪಡೆದಿದ್ದೀರಾ? ನೀವು ಬಿಜೆಪಿ ಏಜೆಂಟಾ? ಹಾಗಾದರೆ ನೀವು ಜನರು ಎಂದು ಏಕೆ ಹೇಳುತ್ತೀರಿ? ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ. ನಾನು ಕುರ್ತಾ ಪೈಜಾಮಾ ಧರಿಸಿ ನಾಯಕನಾಗಲಿಲ್ಲ. ನಾನು ಸಮಾಜದಲ್ಲಿನ ಸಾಧಾರಣಾ ಕುಟುಂಬದ ಸಾಮಾನ್ಯ ವ್ಯಕ್ತಿ. ನಿಮ್ಮ ಜೀವನ ಏನು ಎಂದು ನನಗೆ ತಿಳಿದಿದೆ. ಆದುದರಿಂದ ಸುಮ್ಮನೆ ವಿಚಾರಹೀನ ಪ್ರಶ್ನೆಗಳನ್ನು ಕೇಳಬೇಡಿ. ಒಳ್ಳೆಯ ಪ್ರಶ್ನೆಗಳನ್ನು ಕೇಳಿ. ಇದನ್ನು ಯಾರು ಹೇಳುತ್ತಾರೆ?

ಮತ್ತೊಬ್ಬ ಪತ್ರಕರ್ತ: ಕನ್ಹಯ್ಯಾ ಜೀ…

ಕನ್ಹಯ್ಯ: ಒಂದು ನಿಮಿಷ, ನಾನು ಇವರಿಗೆ ಉತ್ತರಿಸುತ್ತೇನೆ.

ಪತ್ರಕರ್ತ: ಜನ ಹೇಳ್ತಾರೆ…

ಕನ್ಹಯ್ಯ: ಈ ಜನರು ಯಾರು?

ಪತ್ರಕರ್ತ: ಅವರು ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ …

ಕನ್ಹಯ್ಯ: ಈ ಜನರು ಯಾರು?

ಪತ್ರಕರ್ತ: ನಾನು ನನ್ನ ಪ್ರಶ್ನೆಯನ್ನು ಹಿಂತೆಗೆದುಕೊಳ್ಳುತ್ತೇನೆ.

ಕನ್ಹಯ್ಯ: ಇಲ್ಲ ಇಲ್ಲ ಹೀಗೆ ಮಾಡಬೇಡಿ. ನಾನು ನಿಮ್ಮೊಂದಿಗೆ ಮಾತನಾಡಲು ಇಲ್ಲಿ ಕುಳಿತಿದ್ದೇನೆ. ನೀವು ಕ್ಷಮೆ ಕೇಳಬೇಕು.

ಪತ್ರಕರ್ತ: ನಾನು ಕ್ಷಮೆ ಕೇಳುವುದಿಲ್ಲ.

ಕನ್ಹಯ್ಯ: ಇಲ್ಲ, ಇಲ್ಲ ನೀವು ಕ್ಷಮೆ ಕೇಳಲೇಬೇಕು. ನೀವು ಏನಾದರೂ ತಪ್ಪು ಹೇಳಿದರೆ, ನೀವು ಕ್ಷಮೆಯಾಚಿಸಬೇಕು. ನಾನು ಏನಾದರೂ ತಪ್ಪು ಹೇಳಿದಾಗ ನಾನು ಕ್ಷಮೆಯಾಚಿಸುತ್ತೇನೆ.

ಪತ್ರಕರ್ತ: ಸರಿ, ನಾನು ಕ್ಷಮೆಯಾಚಿಸುತ್ತೇನೆ.

ಕನ್ಹಯ್ಯ: ನೀವು ಕ್ಷಮೆ ಕೇಳುತ್ತಿದ್ದೀರಿ. ಎಲ್ಲರೂ ನೋಡಿ… ಈಗ ಇನ್ನೊಂದು ಪ್ರಶ್ನೆ ಕೇಳಿ…


ಇದನ್ನೂ ಓದಿರಿ: ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಆಚರಿಸದಂತೆ ಬೆದರಿಸಿದ ಬಲಪಂಥೀಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಪತ್ರಕರ್ತನನ್ನು ಕನ್ಹಯ್ಯ ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳಿಸಿದ್ದು ಸರಿಯಾಗಿದೆ. ಅಧಿಕಾರದಲ್ಲಿ ಇದ್ದವರನ್ನು ಈ ಪತ್ರಕರ್ತ ಇಂತಹ ಪ್ರಶ್ನೆ ಕೇಳಿ ಕೆಟ್ಟ ಪುಸ್ತಕಕ್ಕೆ ಹೋಗುವ ಧೈರ್ಯ ಮಾಡಲಾರ. ಬದಲಾಗಿ, ಸರ್ಕಾರದ ವಿರುದ್ಧ ವಿರುದ್ಧ ಮಾತಾಡುವುದನ್ನು ವಿರೋಧಿಸಿ, ಅಧಿಕಾರಸ್ಥರ ಕೃಪೆ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಸಮೃದ್ಧ ಓದಿನ ಮತ್ತು, ಗಹನವಾದ ತಿಳುವಳಿಯ ಅಭಾವ ಇಂತಹ ವಿತಂಡವಾದವನ್ನು ಸೃಷ್ಟಿಸುತ್ತದೆ. ಸಾಮಾಜದ ಬಗ್ಗೆ ಗೌರವ ಇಲ್ಲದೆ, ಸಾಮಾಜಿಕ ಜವಾಬ್ದಾರಿ ಇಲ್ಲದೆ, ಉರಿವ ಮನೆಯ ಗಳು (ಬಿದಿರು) ಎಳೆದು ಬೆಂಕಿ ಕಾಯಿಸಿಕೊಳ್ಳುವ ಮಂದಿ ಇವರು. ಸಾರ್ವಜನಿಕ ಹಿತ ಕಾಯುವ ಕೆಲಸ ಮಾಡಿದ ಅನುಭವ ಏನಾದರೂ ಇವಕ್ಕೆ ಇದೆಯೇ?

    ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಾರಿಯಾ ರೆಸ್ಸಾ ಬಗ್ಗೆ ಹೆಮ್ಮೆ ಬದಿಗಿರಲಿ, ಆಕೆ ಯಾರೆಂದು ಇವರಿಗೆ ತಿಳಿದಿದೆಯೇ?

    ಇಂತಹ ಪತ್ರಕರ್ತರಿರುವ ಸುದ್ದಿ ಸಂಸ್ಥೆಗಳನ್ನು ತಿರಸ್ಕರಿಸುವುದು ಮಾತ್ರ ನಮ್ಮ ಕರ್ತವ್ಯ.

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...