ಸೇನಾ ಆಕಾಂಕ್ಷಿಗಳು ಸತತ ಎರಡನೇ ದಿನವೂ ಬಿಹಾರದ ಹಲವು ಭಾಗಗಳಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಸಶಸ್ತ್ರ ಪಡೆಗಳ ಅಲ್ಪಾವದಿ ನೇಮಕಾತಿ ಯೋಜನೆಯಾದ ಅಗ್ನಿಪಥ್ ವಿರುದ್ಧದ ಪ್ರತಿಭಟನೆಗಳು ಗುರುವಾರ ಹಿಂಸಾಚಾರಕ್ಕೆ ತಿರುಗಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಲಾಠಿ ಹಿಡಿದ ಪ್ರತಿಭಟನಾಕಾರರು ಭಭುವಾ ರೋಡ್ ರೈಲು ನಿಲ್ದಾಣದಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಗಾಜುಗಳನ್ನು ಒಡೆದು ಒಂದು ಕೋಚ್‌ಗೆ ಬೆಂಕಿ ಹಚ್ಚಿದ್ದಾರೆ. ಭಾರತೀಯ ಸೇನಾ ಪ್ರೇಮಿಗಳು ಎಂಬ ಬ್ಯಾನರ್ ಹಿಡಿದುಕೊಂಡು ಒಕ್ಕೂಟ ಸರ್ಕಾರದ ಹೊಸ ನೇಮಕಾತಿ ಯೋಜನೆಯನ್ನು ತಿರಸ್ಕರಿಸಿ ಘೋಷಣೆಗಳನ್ನು ಕೂಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅರ್‍ರಾದಲ್ಲಿನ ರೈಲು ನಿಲ್ದಾಣದಲ್ಲಿ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಬೃಹತ್ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಅನ್ನು ಸಿಡಿಸಿದ್ದಾರೆ. ಪ್ರತಿಭಟನಾಕಾರರು ರೈಲ್ವೇ ಹಳಿಗಳ ಮೇಲೆ ಪೀಠೋಪಕರಣಗಳನ್ನು ಎಸೆದು ಬೆಂಕಿ ಹಚ್ಚಿದ್ದರಿಂದ, ಅದನ್ನು ನಂದಿಸಲು ರೈಲ್ವೆ ಸಿಬ್ಬಂದಿಗಳು ಹರಸಾಹಸಪಡುತ್ತಿರುವ ವಿಡಿಯೊಗಳು ಹರಿದಾಡುತ್ತಿವೆ.
ಇದನ್ನೂ ಓದಿ: ‘ಜಾತಿ ಸಮಾನತೆ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯ’ ಎಂದ ಉದ್ಯೋಗಿಗಳು: ದಲಿತ ಹೋರಾಟಗಾರ್ತಿಯ ಭಾಷಣ ರದ್ದು ಮಾಡಿದ ಗೂಗಲ್!
ಜೆಹಾನಾಬಾದ್‌ನಲ್ಲಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದು ಪೊಲೀಸರು ಸೇರಿದಂತೆ ಹಲವು ಜನರು ಗಾಯಗೊಂಡಿದ್ದಾರೆ. ರೈಲು ಸಂಚಾರಕ್ಕೆ ಅಡ್ಡಿಪಡಿಸಲು ರೈಲು ಹಳಿಗಳ ಮೇಲೆ ನಿಂತು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಓಡಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪರಸ್ಪರ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೊ ಹರಿದಾಡುತ್ತಿವೆ. ಪ್ರತಿಭಟನಾಕಾರರನ್ನು ಹೆದರಿಸಲು ಪೊಲೀಸರು ತಮ್ಮ ಬಂದೂಕುಗಳನ್ನು ಸಹ ತೋರಿಸಿದ್ದಾರೆ.
#WATCH | Youth hold protest in Jehanabad over the recently announced #AgnipathRecruitmentScheme for Armed forces. Rail and road traffic disrupted by the protesting students. pic.twitter.com/iZFGUFkoOU
— ANI (@ANI) June 16, 2022
ನಾವಡಾದಲ್ಲಿ, ಯುವಕರ ಗುಂಪುಗಳು ಸಾರ್ವಜನಿಕ ಕ್ರಾಸಿಂಗ್‌ನಲ್ಲಿ ಟೈರ್‌ಗಳನ್ನು ಸುಟ್ಟು ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ. ನಾವಡ ನಿಲ್ದಾಣದಲ್ಲಿ ರೈಲು ಹಳಿಗಳಲ್ಲಿ ನಿಂತು ರೈಲು ತಡೆದು ಹಳಿ ಮೇಲೆ ಟೈರ್‌ಗಳನ್ನು ಸುಟ್ಟಿದ್ದಾರೆ. ಅಲ್ಲಿ ಸೇರಿದ್ದ ಭಾರೀ ಜನಸಮೂಹವು ರೈಲ್ವೇ ಆಸ್ತಿಗೆ ಹಾನಿಗೊಳಿಸಿದ್ದು, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಪೊಲೀಸರು ಶಾಂತಿ ಕಾಪಾಡುವಂತೆ ಜನರಿಗೆ ಕೇಳಿಕೊಂಡಿದ್ದಾರೆ.
आरा स्टेशन पर उग्र छात्रों को हटाने के लिए आश्रु गैस के गोले देखिए अब दागे जा रहे हैं @ndtvindia @Anurag_Dwary pic.twitter.com/s0YP3bq1Tx
— manish (@manishndtv) June 16, 2022
ಸಹರ್ಸಾದಲ್ಲಿ, ರೈಲು ಸಂಚಾರ ಅಡ್ಡಿಪಡಿಸುತ್ತಿರುವುದನ್ನು ತಡೆಯಲು ಬಂದ ಪೊಲೀಸರಿಗೆ ವಿದ್ಯಾರ್ಥಿಗಳು ರೈಲು ನಿಲ್ದಾಣಕ್ಕೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ. ಚಪ್ರಾದಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದು, ಹೆದ್ದಾರಿಯಲ್ಲಿನ ಬಸ್ಸುಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಉತ್ತರ ಪ್ರದೇಶದ ಹಲವಾರು ಭಾಗಗಳಲ್ಲೂ ಪ್ರತಿಭಟನೆಗಳು ನಡೆದಿದ್ದು ವರದಿಯಾಗಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ನಿನ್ನೆ, ಬಿಹಾರದ ಮುಜಾಫರ್‌ಪುರ ಮತ್ತು ಬಕ್ಸಾರ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಉದ್ಯೋಗಾಂಕ್ಷಿಗಳ ಪ್ರತಿಭಟನೆ
ಅಗ್ನಿಪಥ್, ಟೂರ್ ಆಫ್ ಡ್ಯೂಟಿ ಸ್ಕೀಮ್, ನಾಲ್ಕು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸೈನಿಕರ ನೇಮಕಾತಿ ಮಾಡುತ್ತದೆ. ಇದು ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಲ್ಲದ ಹುದ್ದೆಯಾಗಿದ್ದು, ಹೆಚ್ಚಿನವರಿಗೆ ಕಡ್ಡಾಯ ನಿವೃತ್ತಿಯನ್ನು ನೀಡುತ್ತದೆ.
#WATCH | Bihar: A huge crowd gathers in protest in Nawada, against the recently announced #AgnipathRecruitmentScheme for armed forces. pic.twitter.com/Sjr40Hr0M5
— ANI (@ANI) June 16, 2022
ಸರ್ಕಾರದ ಹೊಸ ನೇಮಕಾತಿ ಯೋಜನೆಯು, ಸೈನ್ಯದ ಸಂಬಳ ಮತ್ತು ಪಿಂಚಣಿ ಮೊತ್ತಗಳನ್ನು ಕಡಿತಗೊಳಿಸುವುದು ಮತ್ತು ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಹಣವನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.
छपरा में अभ्यर्थियों विरोध मार्च. #Agniveer pic.twitter.com/Km7aRppUvO
— Utkarsh Singh (@UtkarshSingh_) June 16, 2022
ಅಗ್ನಿಪಥ್ ಯೋಜನೆಯಡಿ, 17.5 ವರ್ಷದಿಂದ 21 ವರ್ಷದೊಳಗಿನ ಸುಮಾರು 45 ಸಾವಿರ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೈನ್ಯ ಸೇವೆಗಳಿಗೆ ಸೇರಿಸಲಾಗುತ್ತದೆ. ಈ ಅವಧಿಯಲ್ಲಿ, ಅವರಿಗೆ ಮಾಸಿಕ ವೇತನವನ್ನು ರೂ 30,000-40,000 ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ. ಈ ವೇಳೆ ಅವರಿಗೆ ವೈದ್ಯಕೀಯ ಮತ್ತು ವಿಮೆ ಪ್ರಯೋಜನಗಳು ಸಿಗಲಿದೆ.
ಇದನ್ನೂ ಓದಿ: ‘ಉದ್ಯೋಗ ನೀಡಿ, ಇಲ್ಲದಿದ್ದರೆ ಕೊಂದುಬಿಡಿ’: ಅಗ್ನಿಪಥ್ ಯೋಜನೆ ವಿರೋಧಿಸಿ ಉದ್ಯೋಗಾಂಕ್ಷಿಗಳ ಪ್ರತಿಭಟನೆ
ನಾಲ್ಕು ವರ್ಷಗಳ ನಂತರ, ಈ ಸೈನಿಕರಲ್ಲಿ ಕೇವಲ 25% ಜನರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ನಂತರ ಅವರನ್ನು ಪೂರ್ಣ 15 ವರ್ಷಗಳ ಕಾಲ ಅಧಿಕಾರೇತರ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಉಳಿದವರನ್ನು ಕಡ್ಡಾಯ ನಿವೃತ್ತಿಗೆ ಮಾಡಿ 11-12 ಲಕ್ಷದ ಪ್ಯಾಕೇಜ್ ನೀಡಲಾಗುತ್ತದೆ. ಆದರೆ ಅವರಿಗೆ ಪಿಂಚಣಿಯನ್ನು ನೀಡಲಾಗುವುದಿಲ್ಲ. ಸರ್ಕಾರದ ಈ ಹೊಸ ನೀತಿಗೆ ಮಾಜಿ ಸೈನಾಧಿಕಾರಿಗಳು ಸೇರಿದಂತೆ ಹಲವಾರು ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದೆ.


