Homeಮುಖಪುಟಅರ್ನಬ್‌ ಗೋಸ್ವಾಮಿ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ ಆರೋಪ, ಇಬ್ಬರ ಬಂಧನ

ಅರ್ನಬ್‌ ಗೋಸ್ವಾಮಿ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ ಆರೋಪ, ಇಬ್ಬರ ಬಂಧನ

- Advertisement -
- Advertisement -

ರಿಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಅರ್ನಬ್‌ ಗೋಸ್ವಾಮಿ ಮೇಲೆ ಇಂದು ಬೆಳಗಿನ ಜಾವ ಮುಂಬೈನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಗೋಸ್ವಾಮಿ ಆರೋಪಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಇಂದು ಬೆಳಿಗ್ಗೆ ಗೋಸ್ವಾಮಿ ಮತ್ತು ಅವರ ಪತ್ನಿ ಸಮಿಯ ಗೋಸ್ವಾಮಿ ಇಬ್ಬರು ತಮ್ಮ ಸ್ಟುಡಿಯೋದಿಂದ ಕೆಲಸ ಮುಗಿಸಿ ಮನಗೆ ತೆರಳುತ್ತಿರುವಾಗ ಅವರ ಮೇಲೆ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡಿಸಿದ್ದಾರೆ ಎಂದು ಪೊಲೀಸ್‌ ದೂರು ದಾಖಲಾಗಿದೆ. ಹಲ್ಲೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಈ ಕುರಿತು ಇಬ್ಬರು ಶಂಕಿತ ಆರೋಪಿಗಳನ್ನು ಮುಂಬೈನ ಎನ್‌ಎಂ ಜೋಶಿ ಮಾರ್ಗ್‌ ಪೋಲೀಸರು ಬಂಧಿಸಿದ್ದು, ಅವರ ಮೇಲೆ ಐಪಿಸಿ ಸೆಕ್ಷನ್‌ 341 ಮತ್ತು 504 ರೀತ್ಯಾ ಎಫ್‌ಐಆರ್‌ ಹಾಕಲಾಗಿದೆ.

ನಿನ್ನೆ ಇಡೀ ದಿನ ಟ್ವಿಟ್ಟರ್‌ನಲ್ಲಿ #ArrestAntiIndiaArnab (ಭಾರತ ವಿರೋಧಿ ಅರ್ನಬ್‌ ಗೋಸ್ವಾಮಿ ಬಂಧಿಸಿ) ಹ್ಯಾಷ್‌ಟ್ಯಾಗ್‌ ಇಂದು ಟ್ವಿಟ್ಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಆಗಿತ್ತು. ಅಲ್ಲದೇ ಚತ್ತೀಸ್‌ಘಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೇಳಿಕೆಗಳನ್ನು ತಿರುಚಿದ ಮತ್ತು ಅವಮಾನ ಮಾಡಿದ ಆರೋಪದ ಮೇಲೆ ಅರ್ನಬ್‌ ವಿರುದ್ಧ ದೂರುಗಳನ್ನು ದಾಖಲಿಸಿದ್ದು, ಕೆಲವೆಡೆ ಪ್ರತಿಭಟನೆಗಳು ಸಹ ನಡೆದಿದ್ದವು.

ಇತ್ತೀಚೆಗೆ ರಾಹುಲ್‌ ಗಾಂಧಿಯವರು ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ. ಹೆಚ್ಚು ಪರೀಕ್ಷೆಗಳು ಮತ್ತು ಮುಂಜಾಗ್ರತೆ ಅಗತ್ಯ. ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕಿದೆ. ಈ ಸಮಯದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಿಲ್ಲಬೇಕೆಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ತಿರುಚಿದ ಅರ್ನಬ್‌ “ಭಾರತದಲ್ಲಿ ರಾಹುಲ್‌ ಗಾಂಧಿಯವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಅವರು ತಮ್ಮ ದೇಶಕ್ಕೆ ಬೇಕಾದರೆ ಹೋಗಲಿ” ಎಂದು ಹೇಳಿದ್ದರು. ಆ ಪ್ರೈಮ್‌ ಟೈಮ್‌ ಶೋನಲ್ಲಿ ಪದೇ ಪದೇ ಸೋನಿಯಾ ಗಾಂಧಿಯವರ ಹೆಸರನ್ನು ಉಲ್ಲೇಖೀಸಿದೆ ಅವರ ದೇಶ ಇಟಲಿಗೆ ಹೋಗಲಿ ಎಂದು ಅರ್ನಬ್‌ ಮಾತನಾಡಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ದೂರಿದ್ದಾರೆ.

ಪಾಲ್ಘರ್‌ ಲಿಂಚಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅದನ್ನು ಕೋಮುವಾದೀಕರಣಗೊಳಿಸಲು ಅರ್ನಬ್‌ ಗೋಸ್ವಾಮಿ ಯತ್ನಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಹಿಂದೂಗಳ ಮೇಲೆ ಹಲ್ಲೆ, ಸಾಧುಗಳ ಮೇಲೆ ಹಲ್ಲೆ ಎಂದು ಅರ್ನಬ್‌ ಗೋಸ್ವಾಮಿ ಸುದ್ದಿ ನಿರೂಪಿಸಿದ್ದಾರೆ. ಆದರೆ ಪಾಲ್ಘರ್‌ನಲ್ಲಿ ಹಲ್ಲೆ ನಡೆಸಿದ ಆರೋಪಿಗಳು ಮತ್ತು ಹಲ್ಲೊಗೊಳಗಾದ ಸಂತ್ರಸ್ತರು ಇಬ್ಬರೂ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಇಂದು ಟ್ವಿಟ್ಟರ್‌ನಲ್ಲಿ ಬಹಳಷ್ಟು ಜನರು ಅರ್ನಬ್‌ ರವರನ್ನು ದ್ವೇಷ ಉತ್ಪಾದಕ, ಕೋಮುವಾದಿ, ಬಿಜೆಪಿ ಏಜೆಂಟ್‌ ಎಂದು ಕರೆದು ಉಗ್ರ ಟೀಕೆ ಮಾಡಿದ್ದಾರೆ. ಅರ್ನಬ್‌ ಗೋಸ್ವಾಮಿ ಪತ್ರಕರ್ತನಾಗಲಿಕ್ಕೆ ಸೂಕ್ತನಲ್ಲ, ಆತನ ಸ್ಥಾನ ಜೈಲು ಎಂದು ಟ್ವೀಟ್‌ ಮಾಡಿದ್ದರು.

ಇಂದು ಟ್ವಿಟ್ಟರ್‌ನಲ್ಲಿ #SoniaGoonsAttackArnab #IsupportArnabGoswami ಹ್ಯಾಸ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ. ಐ ಸಪೋರ್ಟ್‌ ಅರ್ನಬ್‌ ಹ್ಯಾಸ್‌ಟ್ಯಾಗ್‌ ಹತ್ತು ಲಕ್ಷಕ್ಕೂ ಅಧಿಕ ಟ್ವೀಟ್‌ಗಳನ್ನು ಕಂಡಿದೆ.

ಅರ್ನಬ್ ಅಪರಾಧಿ. ಪ್ರತೀಕಾರದ ಪ್ರಚಾರಕ್ಕಾಗಿ ಪತ್ರಿಕೋದ್ಯಮವನ್ನು ಬಳಸಿಕೊಂಡಿದ್ದಕ್ಕೆ ಅವರಿಗೆ ನಾಚಿಕೆಯಾಗಬೇಕು. ಆತನ ಮೇಲೆ ಹಿಂಸೆ ನಡೆಸುವುದಕ್ಕೂ ಅವನು ಲಾಯಕ್ಕಿಲ್ಲ. ಅವನ ಮೇಲೆ ಹಲ್ಲೆ, ಅದು ನಕಲಿಯಾಗಿದ್ದರೂ, ತನಿಖೆ ನಡೆಸಬೇಕು ಮತ್ತು ಅರ್ನಾಬ್‌ನನ್ನು ಅವನ ಹೊಲಸು ಕೆಲಸಗಳಿಗಾಗಿ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿಖಿಲ್‌ ವಾಗ್ಲೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವು ಸಾಮಾಜಿಕ ಕಾರ್ಯಕರ್ತರು ಅರ್ನಬ್‌ ಮೇಲಿನ ದಾಳಿ ಅನುಮಾನಸ್ಪದವಾಗಿದೆ. 2002ರಲ್ಲಿಯೇ ಇದೇ ರೀತಿಯಾಗಿ ಅವರು ಆಧಾರರಹಿತವಾಗಿ ಆರೋಪ ಮಾಡಿ ನಂತರ ಸಿಕ್ಕಿಬಿದ್ದಿದ್ದರು. ಈಗಲೂ ಅವರು ತಮ್ಮ ಮೇಲೆ ದಾಳಿಯಾಗಿದ್ದರ ಬಗ್ಗೆ ಮಾಡಿರುವ ವಿಡಿಯೋ ನಿನ್ನೆ ರಾತ್ರಿ 8 ಗಂಟೆಯ ವೇಳೆಯಲ್ಲಿ. ಇನ್ನು ದಾಳಿಯಾಗಿರುವುದು 12 ಗಂಟೆಯ ನಂತರ ಎಂದು ಹೇಳಿದ್ದಾರೆ. ಈ ಬಗ್ಗೆ ವೈಜ್ಞಾನಿಕ ತನಿಖೆ ನಡೆದರೆ ಅವರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಪತ್ರಕರ್ತರಾದ ದಿನೇಶ್ ಕುಮಾರ್‌ ದಿನೂರವರು ಆರೋಪಿಸಿದ್ದಾರೆ.

ಅರ್ನಾಬ್ ಗೋಸ್ವಾಮಿಯ ಮೇಲೆ ದಾಳಿ ನಡೆದಿರೋದು ಅವನೇ ಹೇಳುವ ಪ್ರಕಾರ ಮಧ್ಯರಾತ್ರಿ 12.15ರ ಸುಮಾರಿಗೆ. ಆದರೆ ಅರ್ನಾಬ್ ದಾಳಿ ಕುರಿತು ವರ್ಣಿಸುವ…

Posted by Dinesh Kumar Dinoo on Wednesday, April 22, 2020


ಇದನ್ನೂ ಓದಿ: ಭಾರತ ವಿರೋಧಿ ಅರ್ನಬ್‌ ಗೋಸ್ವಾಮಿ ಬಂಧಿಸಿ: ಟ್ವಿಟ್ಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...