ಪಾಕಿಸ್ತಾನದ ಏಜೆಂಟರಿಗೆ ಬೇಹುಗಾರಿಕೆ ಮತ್ತು ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ರಾಜಸ್ಥಾನ್ ಪೊಲೀಸರ ಗುಪ್ತಚರ ವಿಭಾಗವು 22 ವರ್ಷದ ಸೇನಾ ಸಿಬ್ಬಂದಿಯನ್ನು ಬಂಧಿಸಿದೆ. ಆರೋಪಿಯನ್ನು ಸಿಕಾರ್ ಜಿಲ್ಲೆಯ ಆಕಾಶ್ ಮೆಹ್ರಿಯಾ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ಮಹಿಳಾ ಏಜೆಂಟರಿಗೆ ಮಾಹಿತಿ ನೀಡುತ್ತಿದ್ದರು ಎಂದು ವರದಿಯಾಗಿದೆ.
ರಾಜಸ್ಥಾನದ ಪೊಲೀಸರ ಪ್ರಕಾರ, ಪಾಕಿಸ್ತಾನದ ಏಜೆಂಟರು ಫೇಸ್‌ಬುಕ್ ಮೂಲಕ ಆಕಾಶ್ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ಸಿಕ್ಕಿಂನಲ್ಲಿ ಸೇವೆಯಲ್ಲಿದ್ದ ಆಕಾಶ್ ರಜಾ ದಿನಗಳನ್ನು ಕಳೆಯಲು ತನ್ನ ಊರಿಗೆ ತೆರಲಿದ್ದಾಗ ಜೈಪುರದಲ್ಲಿ ಬಂಧಿಸಿದ ಗುಪ್ತಚರ ವಿಭಾಗಗಳು ವಿಚಾರಣೆ ನಡೆಸಿವೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೇಜ್ರಿವಾಲ್ ಕೃಷಿ ಕಾಯ್ದೆ ಪರ ಮಾತನಾಡಿದರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿಗರು
ರಾಜಸ್ಥಾನದ ಸಿಕಾರ್ ಜಿಲ್ಲೆಯ ಲಕ್ಷ್ಮನ್‌ಗರ್ ತಹಸಿಲ್ ಮೂಲದ ಸೇನಾ ಸಿಬ್ಬಂದಿಯಾದ ಆಕಾಶ್ ಅವರನ್ನು ರಾಜಸ್ಥಾನ ಸಿಐಡಿಯ ರಾಜ್ಯ ಘಟಕದ ವಿಶೇಷ ಶಾಖೆ ಬಂಧಿಸಿದೆ.
ಇಂಟರ್‌ರ್ನೆಟ್‌ನಲ್ಲಿ ನಕಲಿ ಗುರುತುಗಳ ಮೂಲಕ ಮೆಹ್ರಿಯಾರೊಂದಿಗೆ ಸಂಪರ್ಕ ಸಾಧಿಸಿದ್ದ ಪಾಕಿಸ್ತಾನಿ ಏಜೆಂಟರಿಗೆ, ಸೇನಾ ಕಾರ್ಯತಂತ್ರದ ಮಾಹಿತಿಯನ್ನು ಆಕಾಶ್ ಪೂರೈಸುತ್ತಿದ್ದರು ಎಂದು ಪೊಲೀಸರ ಗುಪ್ತಚರ ವಿಭಾಗ ಹೇಳಿದೆ.
ಫೇಸ್‌ಬುಕ್‌ನಲ್ಲಿ ಬಂದಿದ್ದ ಸೇಹಿತರ ಕೋರಿಕೆಯನ್ನು ಸ್ವೀಕರಿಸಿದ್ದ ಆಕಾಶ್, ತಮ್ಮ ಫೋನ್ ಮೂಲಕ ಸೈನ್ಯದ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಪೂರೈಸುತ್ತಿದ್ದರು. ಈ ಮೂಲಕ ಪಾಕಿಸ್ತಾನದ ಮಹಿಳಾ ಏಜೆಂಟರೊಂದಿಗೆ ಚಾಟ್‌ಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಕಾಶ್ ಸೆಪ್ಟೆಂಬರ್ 2018 ರಲ್ಲಿ ಭಾರತೀಯ ಸೇನೆಯಲ್ಲಿ ಸೇರಿದ್ದು, 2019 ರಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದರು. ಅವರನ್ನು ಸಿಕ್ಕಿಂನಲ್ಲಿ ನೇಮಿಸಲಾಗಿತ್ತು.
ಇದನ್ನೂ ಓದಿ: ಟಿಕೆಟ್ ನಿರಾಕರಣೆ: ತಲೆ ಬೋಳಿಸಿಕೊಂಡ ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ!


