Homeಮುಖಪುಟಕಾಲದೇಶಕ್ಕೆ ತಕ್ಕಂತೆ ಬಣ್ಣ ಬದಲಿಸಿಕೊಳ್ಳುತ್ತಿದೆ ರಾಷ್ಟ್ರವಾದ

ಕಾಲದೇಶಕ್ಕೆ ತಕ್ಕಂತೆ ಬಣ್ಣ ಬದಲಿಸಿಕೊಳ್ಳುತ್ತಿದೆ ರಾಷ್ಟ್ರವಾದ

- Advertisement -
- Advertisement -

ಪ್ರಕೃತಿಯಲ್ಲಿ ಸರಿಸೃಪಗಳ ಗುಂಪೊಂದು ಇದೆ. ಆ ಗುಂಪಿನಲ್ಲಿ ಹಲ್ಲಿ, ಹಾವು, ಓತಿ, ಉಡ ಊಸರವಳ್ಳಿಯಂಥ  ಪ್ರಾಣಿಗಳು ಬರುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳು ಪರಿಸರ, ಪ್ರದೇಶಕ್ಕೆ ತಕ್ಕ ಹಾಗೆ ಬಣ್ಣ ಬದಲಿಸುವ ಗುಣ ಹೊಂದಿವೆ. ಅದರಲ್ಲಿ ಪ್ರಮುಖವಾದುದು ಊಸರವಳ್ಳಿ. ಅದು ಕ್ಷಣಕ್ಷಣಕ್ಕೂ ಬಣ್ಣ ಬದಲಿಸುತ್ತಲೇ ಇರತ್ತದೆ. ಅದು ತನ್ನ ‘ತಾವನ್ನು’ ಬದಲಿಸದಂತೆಲ್ಲಾ ಬಣ್ಣವೂ ಬದಲಾಗುತ್ತಾ ಹೋಗುತ್ತದೆ. ಅದು ಪ್ರಕೃತಿಯಲ್ಲಿ ನಡೆಯುವ ವಿಸ್ಮಯ. ಆದರೆ ಪ್ರಕತಿಯ ಭಾಗವೇ ಆಗಿರುವ ಮನುಷ್ಯ ಪ್ರಾಣಿಗಳ ಗುಂಪೊಂದು ಇದೆ. ಅದೂ ಕೂಡ ಸನ್ನಿವೇಶ ಕಾಲಮಾನ ಬದಲಾದಂತೆ ತನ್ನ ಸಿದ್ದಾಂತವನ್ನು ಹೊಸ ಆಕಾರ ಮತ್ತು ರೂಪಕ್ಕೆ ಬದಲಿಸಿಕೊಳ್ಳುತ್ತದೆ. ಆಧುನಿಕ ಸಂದರ್ಭದಲ್ಲಿ ಸಾಫ್ಟವೇರ್ ನಲ್ಲಿ ಬದಲಾಗಬಹುದು. ಆದರೆ ಅದರ ಮೂಲರೂಪ ಬದಲಾಗುವುದಿಲ್ಲ. ಇದು ಬೈನರಿ ಮ್ಯಾಥಮೆಟಿಕ್ಸ್ ಇದ್ದಂತೆ.

ಊಸರವಳ್ಳಿಯ ಗುಣ ಬಣ್ಣ ಬದಲಿಸಿಕೊಳ್ಳುವುದು. ಅದರ ನಿಜವಾದ ಬಣ್ಣ ಯಾವುದು ಎಂದು ಕೇಳಿದರೆ ಹೇಳಲು ಸಾಧ್ಯವಿಲ್ಲ. ನಾನು ನೋಡಿದ ಊಸರವಳ್ಳಿಯ ಬಣ್ಣ ಬೇರೊಬ್ಬನಿಗೆ ಅದೇ ರೀತಿ ಕಾಣಬಹುದು ಅಥವಾ ಕಾಣದೇ ಇರಬಹುದು. ಇನ್ನೊಬ್ಬ ನೋಡುವ ಹೊತ್ತಿಗೆ ಊಸರವಳ್ಳಿ ಬಣ್ಣವನ್ನು ಬದಲಿಸಿಕೊಂಡು ಮೊದಲಿನವನಿಗೆ ದಿಕ್ಕು ತಪ್ಪುವಂತೆ ಮಾಡಬಹುದು. ಆ ಇಬ್ಬರೂ ಕೂಡ ಚರ್ಚೆಗೆ ಇಳಿದರೆ ‘ನಾನು’ ಬಣ್ಣವೇ ಸರಿ ಎಂದು ವಾದಿಸಬಹುದು ಇಬ್ಬರೂ ಮಂಡಿಸುವ ವಾದವೂ ಸರಿಯಾಗಿಯೇ ಇರುತ್ತದೆ. ಇಬ್ಬರ ಅನುಭವವೂ ಸಮರ್ಥನೆಗೆ ಕಾರಣಗಳನ್ನು ಒದಿಗಿಸುತ್ತದೆ. ಊಸರವಳ್ಳಿ ಮೊದಲ ಬಣ್ಣದಲ್ಲೇ ಇತ್ತು ಎನ್ನುವುದು, ನಂತರ ಬಣ್ಣ ಬದಲಿಸಿತು ಎನ್ನುವುದು ಎರಡೂ ಸತ್ಯದ ಸಂಗತಿಗಳೇ!! ಊಸರವಳ್ಳಿ ಇಬ್ಬರು ವ್ಯಕ್ತಿಗಳನ್ನು ಗೊಂದಲದಲ್ಲಿ ಮುಳುಗಿಸುತ್ತದೆ. ಗೊಂದಲ ಮೂಡಿಸದಿದ್ದರೆ ಅದು ಊಸರವಳ್ಳಿ ಆಗಲಾರದು.

ಊಸರವಳ್ಳಿ ಮತ್ತು ರಾಷ್ಟ್ರೀಯವಾದ ಒಂದೇ ಗುಣವುಳ್ಳವು. ‘ರಾಷ್ಟ್ರೀಯತೆ’ ಕಾಲಕಾಲಕ್ಕೆ ಬಣ್ಣ ಬದಲಿಸುತ್ತ ಬಂದಿರುವುದನ್ನು ಇತಿಹಾಸ ಪುಟಗಳು ದೃಢೀಕರಿಸುತ್ತವೆ. ಹಿಟ್ಲರ್ ಮತ್ತು ಮುಸಲೋನಿ ಪ್ರತಿಪಾದಿಸಿದ ರಾಷ್ಟ್ರೀಯತೆ ಪರಿಕಲ್ಪನೆ ಭಾರತದ ಸಂಪ್ರದಾಯವಾದಿ ಮನಸ್ಥಿತಿಯಲ್ಲೂ ಬೆಳೆದುಬಂತು ಅಥವಾ ಭಾರತದ ಸಂಪ್ರದಾಯವಾದಿ ಮನಸ್ಸು ಅದರಂತೆಯೇ ಇತ್ತು. ಅದೇ ಕಾರಣಕ್ಕೆ ಭಾರತದ ಸಂಪ್ರದಾಯವಾದಿ ಗುಂಪು ನಾಸಿಜಂ ಮತ್ತು ಫ್ಯಾಸಿಸಂ ಅನ್ನು ಅಪ್ಪಿಕೊಂಡಿತು. ಜರ್ಮನಿಯ ನಾಜಿಗಳ ‘ರಾಷ್ಟ್ರೀಯತೆ’ ಭಾರತದ ಸಂಪ್ರದಾಯವಾದಿ ಗುಂಪಿಗೆ ಮತ್ತಷ್ಟು ಬಲ ತಂದಿತು. ಹಾಗಾಗಿಯೇ ಇಲ್ಲಿನ ಹಿಂದೂ ಮಹಾಸಭಾ ಮತ್ತು ಆರ್.ಎಸ್.ಎಸ್. ಹಿಟ್ಲರ್ ಮತ್ತು ಮುಸಲೋನಿಯ ಚಿಹ್ನೆಗಳನ್ನು, ಸಿದ್ದಾಂತವನ್ನು ಅಪ್ಪಿಕೊಂಡು ಜನರ ಮೇಲೆ ಸವಾರಿ ಮಾಡುತ್ತಲೇ ಬಂತು.

ರಾಷ್ಟ್ರೀಯತೆ ಪರಿಕಲ್ಪನೆಗೆ ಬಹುತ್ವದಿಂದ ವ್ಯಾಪಕ ವಿರೋಧ ವ್ಯಕ್ತವಾದಂತೆ, ಅದು ನಾಸಿಸಂ ಮತ್ತು ಫ್ಯಾಸಿಸಂ ಪ್ರತಿರೂಪದಲ್ಲಿ ಬರುತ್ತಿದೆ. ಇದನ್ನೇ ಆರ್.ಎಸ್.ಎಸ್. ಮತ್ತು ಹಿಂದೂ ಮಹಾಸಭಾ ತನ್ನ ಬೈನರಿ ಮ್ಯಾಥ ಮೆಟಿಕ್ಸ್ ಮಾಡಿಕೊಂಡಿದೆ ಎಂಬುದನ್ನು ಜನರಿಗೆ ಸಾರಿಸಾರಿ ಹೇಳಿದಾಗಲೇ ಕ್ರಮೇಣ ಸಂಘದಲ್ಲಿ ಕೆಲ ದೈಹಿಕ ಬದಲಾವಣೆಗಳು ಕಳೆದ 94 ವರ್ಷಗಳಲ್ಲಿ ಕಂಡುಬಂದಿವೆ. ಜನರಲ್ಲಿ ಒಂದು ವಿಷಯದ ಬಗ್ಗೆ ಗೊಂದಲ ಮೂಡಿಸುವುದು ತನ್ನ ಹಿಡೆನ್ ಅಜೆಂಡಾವನ್ನು ತುರುಕುವುದು ನಡೆಯುತ್ತಲೇ ಇದೆ. ಗೊಂದಲದ ಪರಿಸ್ಥಿತಿ ಸೃಷ್ಟಿಸುವ ಕಾರ್ಯ ಮುಂದುವರಿಯುತ್ತಲೇ ಇದೆ. ಅಂದರೆ ಊಸರವಳ್ಳಿ ಬಣ್ಣದ ಕುರಿತು ಇಬ್ಬರು ವ್ಯಕ್ತಿಗಳು ವಾದಿಸುವ ರೀತಿಯಂತೆಯೆ ಇದು. ಅದು ಹಾಗಿತ್ತು ಎಂದು ಮೊದಲು ಹೇಳಿ ನಂತರ ಅದು ಹಾಗಿರಲಿಲ್ಲ ಎನ್ನುವುದು. ಇದು ಜನರಿಗೂ ಕೂಡ ಹೌದಲ್ಲವೇ? ಎನ್ನುವಂತೆ ನಂಬಿಸುವುದು ಕೂಡ ಇದರ ಹಿಂದಿನ ತಂತ್ರ

ಈಗ ‘ರಾಷ್ಟ್ರೀಯತೆ’ ಬಗ್ಗೆ ಆರ್.ಎಸ್.ಎಸ್ ಮತ್ತು ಹಿಂದೂ ಮಹಾಸಭಾದೊಳಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ ಅಥವಾ ನಡೆದಂತೆ ಬಿಂಬಿಸಲಾಗುತ್ತಿದೆ. ಆರ್.ಎಸ್.ಎಸ್. ಪ್ರತಿಪಾದಿಸುವ ರಾಷ್ಟ್ರೀಯತೆ’ ಮತ್ತು ಫ್ಯಾಸಿಸಂ ಮತ್ತು ನಾಸಿಸಂಗೂ ಸಂಬಂಧವಿದೆ ಎಂಬ ಸತ್ಯ ಜನರಿಗೆ ಅರಿವಾಗುತ್ತಿರುವಾಗಲೇ ನಮ್ಮದು ರಾಷ್ಟ್ರೀಯತೆ ಅಲ್ಲ. ನಮ್ಮದು ನ್ಯಾಷನಾಲಿಟಿ ಅರ್ತಾತ್ ರಾಷ್ಟ್ರೀಯತಾವಾದ ಎನ್ನುತ್ತ ತನ್ನ ಸಾಫ್ಟ್‌ವೇರ್ ಬದಲಿಸಿಕೊಳ್ಳುತ್ತಿದೆ. ಹೊಸ ಸನ್ನಿವೇಶ ಹೊಸ ಪೀಳಿಗೆಗೆ ರಾಷ್ಟ್ರೀಯತಾವಾದ ಹೊಸದಾಗಿ ಕಾಣುತ್ತಿದೆ ಅಥವಾ ಹಾಗೆ ಕಾಣುವಂತೆ ನೋಡಿಕೊಳ್ಳುವ ಪ್ರಯತ್ನಗಳು ಇಂದು ನಡೆಯುತ್ತಿವೆ. ಆದರೆ ಅದು ತನ್ನ ಮೂಲರೂಪವನ್ನು ಬಿಟ್ಟುಕೊಡುವುದಿಲ್ಲ. ಮೂಲರೂಪ ಯಾವುದೆಂದರೆ ಅದು ಮಾನಸಿಕ ಕ್ರೌರ್ಯದ ದುರ್ಗುಣ. ಆಧುನಿಕತೆ ಸಂದರ್ಭದಲ್ಲಿ ಕಂಪ್ಯೂಟರ್ ಗಳಲ್ಲಿನ ಸಾಫ್ಟ್ ವೇರ್ ಬದಲಾದಂತೆ ಆರ್.ಎಸ್.ಎಸ್ ತನ್ನ ಸಾಫ್ಟವೇರ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳತೊಡಗಿದೆ.

ಗೋಪಾಲಕೃಷ್ಣ ಅಡಿಗರಂಥ ಕವಿ ‘ನೆಹರು ನಿವೃತ್ತರಾಗುವುದಿಲ್ಲ” ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು’ ಎಂದು ಕವನ ಬರೆದರು. ಇದು ಈಗ ‘ನವಭಾರತ’ ಪರಿಕಲ್ಪನೆಯ ಹುಟ್ಟಿಗೆ ಕಾರಣ ವಾಗಿದೆ. ‘ಆಖಂಡ ಭಾರತ’ ಪರಿಕಲ್ಪನೆ ಮೂಲರೂಪದಲ್ಲೇ ಇದ್ದು ಅದನ್ನು ರಹಸ್ಯವಾಗಿಯೇ ಇಡಲಾಗಿದೆ. ಕತ್ತಲೆಯ ಮನೆಯೊಳಗೆ ಭೂಪಟವನ್ನು ಹರಡಿ ಪಾಕಿಸ್ತಾನ, ಆಫ್ಥಾನಿಸ್ತಾನ, ಬಾಂಗ್ಲಾ ಎಲ್ಲವೂ ಅಖಂಡ ಭಾರತದಡಿ ಬರಬೇಕು ಎನ್ನುವ ಸಾಂಸ್ಕೃತಿಕ ರಾಜಕಾರಣ ಮತ್ತು ಅದರ ಬಗೆಗಿನ ಪ್ರೀತಿ ಆರ್.ಎಸ್.ಎಸ್ ಸಂಘಟನೆಗೆ ಮತ್ತಷ್ಟು ಹೆಚ್ಚಾಗತೊಡಗಿದೆ. ಇಲ್ಲಿನ ಜನರನ್ನು ಅಲೆಯುವಂತೆ ಮಾಡಿದರೆ, ನಾವು ಹೇಳಿದಂತೆ ಕೇಳುತ್ತಾರೆ ಎಂಬ ಪ್ರಭುತ್ವದ ಹುನ್ನಾರವೂ ಇದರ ಹಿಂದೆ ಕೆಲಸ ಮಾಡುತ್ತಿದೆ.

ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗ ಮತ್ತು ಇಪ್ಪತ್ತೇ ಶತಮಾನದ ಆರಂಭದಲ್ಲಿದ್ದ ರಾಷ್ಟ್ರೀಯತೆ ಪರಿಕಲ್ಪನೆಯು ಈಗ ಸ್ಥಿತ್ಯಂತರಗೊಳ್ಳತೊಡಗಿದೆ. ‘ನ್ಯಾಷನಲಿಸಂ’ ತನ್ನನ್ನು ದುರ್ಬಲಗೊಳಿಸುತ್ತಿದೆ ಎಂಬುದು ಗೊತ್ತಾದ ಕೂಡಲೇ ಆರ್.ಎಸ್.ಎಸ್. ತನ್ನದು ರಾಷ್ಟ್ರೀಯತೆ ಅಲ್ಲ, ‘ರಾಷ್ಟ್ರೀಯತಾವಾದ’ ಎಂಬ ಹೊಸ ನುಡಿಗಟ್ಟನ್ನು ಹುಟ್ಟುಹಾಕಿದೆ. ಕಾಲ ಬದಲಾಗಿದೆ. ತಾವಿರುವ ಪರಿಸರ, ಜನರು ಬದಲಾಗಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ಬದಲಾವಣೆಯಾಗಿದೆ. ಹಾಗಾಗಿ ‘ನವಭಾರತ’ದ ಸನ್ನಿವೇಶದಲ್ಲಿ ತಾನೂ ಬದಲುಗೊಳ್ಳುತ್ತಿದೆ. ಜನರನ್ನು ಗೊಂದಲದಲ್ಲಿ ತಳ್ಳುತ್ತಲೇ ಇದೆ. ಹೊಸ ಚಳವಳಿಗಳು ಹುಟ್ಟಿದಾಗಲೆಲ್ಲಾ ಅದರಲ್ಲಿ ತಾನೂ ಸೇರಿಕೊಳ್ಳುತ್ತದೆ. ಇಡೀ ಚಳವಳಿಯ ಆಶಯವನ್ನೇ ನುಚ್ಚುನೂರು ಮಾಡುತ್ತದೆ. ಅದೇ ಭಾರತದ ಸಂಪ್ರದಾಯವಾದಿ ಗುಂಪಿನ ಸಿದ್ದಾಂತ.

(ಲೇಖಕರು ಪತ್ರಕರ್ತರು. ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...