Homeಮುಖಪುಟಶಹನಾಯಿಯ ಗಾರುಡಿಗ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಭಾರತೀಯ ಸಂಗೀತ

ಶಹನಾಯಿಯ ಗಾರುಡಿಗ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಭಾರತೀಯ ಸಂಗೀತ

- Advertisement -
- Advertisement -

ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಜನಮನ್ನಣೆ ಗಳಿಸಿದ ಕೆಲವೇ ಜನ ಮುಸ್ಲಿಮ್ ಸಂಗೀತಗಾರರಲ್ಲಿ ಬಿಸ್ಮಿಲ್ಲಾಖಾನ್ ಒಬ್ಬರು. ಉಸ್ತಾದ್ ಅಲಿ ಅಕ್ಬರ್ ಖಾನ್, ಉಸ್ತಾದ್ ವಿಲಾಯತ್ ಖಾನ್, ಉಸ್ತಾದ್ ಅಲ್ಲಾರಖಾ, ಉಸ್ತಾದ್ ಬಡೇ ಗುಲಾಮ್ ಆಲಿಖಾನ್, ಉಸ್ತಾದ್ ಅಮೀರ್ ಖಾನ್ ಇತ್ಯಾದಿ ಮುಸ್ಲಿಮ್ ಸಂಗೀತಗಾರರಿದ್ದರೂ, ಇವರ ಸಂಖ್ಯೆ ಸ್ವಾತಂತ್ರ್ಯಪೂರ್ವದ ಅಥವಾ ಹತ್ತೊಂಬತ್ತನೇ ಶತಮಾನದ ಮುಸ್ಲಿಮ್ ಸಂಗೀತಗಾರರ ಸಂಖ್ಯೆಗೆ ಹೋಲಿಸಿದರೆ ಬಹಳ ಅಲ್ಪ.

ಉಸ್ತಾದ್ ಬಿಸ್ಮಿಲ್ಲಾ ಖಾನರು (21 ಮಾರ್ಚ್ 1916 – 21 ಆಗಸ್ಟ್ 2006) ಇನ್ನಿಲ್ಲವಾಗಿ ಹದಿಮೂರು ವರ್ಷಗಳಾಗುತ್ತಿವೆ. ಶಹನಾಯಿಯ ಗಾರುಡಿಗನೆಂದೇ ಪ್ರಸಿದ್ಧರಾಗಿದ್ದ ಬಿಸ್ಮಿಲ್ಲಾಖಾನರು ತೊಂಭತ್ತು ವರ್ಷದ ತುಂಬು ಜೀವನವನ್ನು ಬದುಕಿದವರು. ಶಹನಾಯಿಗೆ ಭಾರತದ ಸಂಗೀತ-ಸಾಂಸ್ಕೃತಿಕ ಚರಿತ್ರೆಯಲ್ಲಿ ಅದರದ್ದೇ ಆದ ಒಂದು ಸ್ಥಾನಮಾನವನ್ನು ತಂದುಕೊಟ್ಟವರು ಬಿಸ್ಮಿಲ್ಲಾಖಾನ್. ಶಹನಾಯಿ ಮತ್ತು ಬಿಸ್ಮಿಲ್ಲಾಖಾನ್ ಸಮಾನಾರ್ಥಕ ಪದಗಳೋ ಅನ್ನುವಷ್ಟು ಆ ಎರಡು ಪದಗಳು ಅನ್ಯೋನ್ಯ.

ಬಿಸ್ಮಿಲ್ಲಾಖಾನರ ಪೂರ್ವಜರು ಬಿಹಾರದ ದುಮ್ರಾವ್ ಎಂಬ ಪುಟ್ಟ ರಾಜಸಂಸ್ಥಾನದಲ್ಲಿ ಸಂಗೀತಗಾರರಾಗಿದ್ದರು. ಈ ಕುಟುಂಬದ ಅಲಿ ಬಕ್ಷ್ ವಿಲಾಯತು ಎಂಬವರು ವಾರಣಾಸಿಯ ವಿಶ್ವನಾಥ ಮಂದಿರದಲ್ಲಿ ಶಹನಾಯಿ ನುಡಿಸುತ್ತಿದ್ದರು. ಅವರಲ್ಲೇ ಬಿಸ್ಮಿಲ್ಲಾಖಾನ್ ಮಾರ್ಗದರ್ಶನ ಪಡೆದರು. ಧಾರ್ಮಿಕ ಪ್ರವೃತ್ತಿಯ ಶಿಯಾ ಮುಸ್ಲಿಮನಾಗಿಯೂ ಉಸ್ತಾದರು ವಿಶ್ವನಾಥನ ದೇವಾಲಯಕ್ಕಾಗಿ ಶಹನಾಯಿ ನುಡಿಸುವಂಥ ಮತ್ತು ಸರಸ್ವತಿಯನ್ನು ನಂಬುವಂಥವರಾಗಿದ್ದು, ಸಾಮರಸ್ಯದ (syncretic) ಸಂಕೀರ್ಣ ಪರಂಪರೆಯೊಂದನ್ನು ಪ್ರತಿಬಿಂಬಿಸುವಂತಿದ್ದರು.

ಬಿಸ್ಮಿಲ್ಲಾಖಾನರು ಪ್ರಥಮ ಬಾರಿಗೆ ಶಹನಾಯಿ ನುಡಿಸಿ ಶಹಬ್ಬಾಸ್‍ಗಿರಿ ಪಡೆದದ್ದು 1937ರಲ್ಲಿ, ಕಲಕತ್ತೆಯ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ. 1947ರ ಸ್ವಾತಂತ್ರ್ಯದಿನದ ಮುನ್ನಾದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ಶಹನಾಯಿ ನುಡಿಸುವ ಅವಕಾಶ ಅವರಿಗೆ ಲಭಿಸಿತ್ತು. ಹಾಗೆಯೇ ಭಾರತವು ಗಣರಾಜ್ಯವಾಗುವ ಮುನ್ನಾದಿನದಂದೂ ಕೂಡಾ ಕೆಂಪು ಕೋಟೆಯಲ್ಲಿ ಅವರ ಶಹನಾಯಿ ಸಂಭ್ರಮಿಸಿತ್ತು. ಪ್ರತೀವರ್ಷದ ಸ್ವಾತಂತ್ರ್ಯದಿನದಂದು ಪ್ರಧಾನಮಂತ್ರಿಯ ಭಾಷಣದ ನಂತರ ಬಿಸ್ಮಿಲ್ಲಾಖಾನರ ಶಹನಾಯಿಯ ನೇರ ಕಾರ್ಯಕ್ರಮವನ್ನು ದೂರದರ್ಶನ ಪ್ರಸಾರ ಮಾಡುತ್ತಿತ್ತು. ಮುಂದಿನ ಸ್ವಾತಂತ್ರ್ಯದಿನಗಳ ಸಂಭ್ರಮ ಉಸ್ತಾದರ ಶಹನಾಯಿಯಿಲ್ಲದೇ ಬಡವಾದವು!

ಹಾಗೆ ನೋಡಿದರೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಜನಮನ್ನಣೆ ಗಳಿಸಿದ ಕೆಲವೇ ಜನ ಮುಸ್ಲಿಮ್ ಸಂಗೀತಗಾರರಲ್ಲಿ ಬಿಸ್ಮಿಲ್ಲಾಖಾನ್ ಒಬ್ಬರು. ಉಸ್ತಾದ್ ಅಲಿ ಅಕ್ಬರ್ ಖಾನ್, ಉಸ್ತಾದ್ ವಿಲಾಯತ್ ಖಾನ್, ಉಸ್ತಾದ್ ಅಲ್ಲಾರಖಾ, ಉಸ್ತಾದ್ ಬಡೇ ಗುಲಾಮ್ ಆಲಿಖಾನ್, ಉಸ್ತಾದ್ ಅಮೀರ್ ಖಾನ್ ಇತ್ಯಾದಿ ಮುಸ್ಲಿಮ್ ಸಂಗೀತಗಾರರಿದ್ದರೂ, ಇವರ ಸಂಖ್ಯೆ ಸ್ವಾತಂತ್ರ್ಯಪೂರ್ವದ ಅಥವಾ ಹತ್ತೊಂಬತ್ತನೇ ಶತಮಾನದ ಮುಸ್ಲಿಮ್ ಸಂಗೀತಗಾರರ ಸಂಖ್ಯೆಗೆ ಹೋಲಿಸಿದರೆ ಬಹಳ ಅಲ್ಪ. ಸ್ವಾತಂತ್ರ್ಯಪೂರ್ವದಲ್ಲಿ ಕೆಲವು ದೊಡ್ಡ ಹಾಗೂ ಹಲವು ಚಿಕ್ಕ ರಾಜಸಂಸ್ಥಾನಗಳು ಬಹಳಷ್ಟು ಜನ ಮುಸ್ಲಿಂ ಸಂಗೀತಗಾರರನ್ನು ಪೋಷಿಸಿದ್ದವು. ಗ್ವಾಲಿಯರ್, ರಾಮ್‍ಪುರ್, ಇಂದೋರ್, ಬರೋಡಾ, ಹೈದರಾಬಾದ್, ಇಚಲಕರಂಜಿ, ಕೊಲ್ಹಾಪುರ್ ಇತ್ಯಾದಿ ಸಂಸ್ಥಾನಗಳು ಇದರಲ್ಲಿ ಮುಖ್ಯವಾದವು. ಇಷ್ಟೇ ಅಲ್ಲದೇ ಅಬ್ದುಲ್ ಕರೀಂಖಾನರಂತಹ ಸಂಗೀತಗಾರರು ಆಗಾಗ್ಗೆ ಮೈಸೂರಿನ ಆಸ್ಥಾನದಲ್ಲೂ ಕಛೇರಿ ಕೊಡುತ್ತಿದ್ದರು. ಈ ಸಂಖ್ಯೆ ಕಡಿಮೆಯಾಗಲು ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ ಹತ್ತೊಂಬತ್ತನೇ ಶತಮಾನದ ಕೊನೆ ಹಾಗೂ ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯಲು ಬಹಳಷ್ಟು ಜನ ಉಚ್ಚ ಜಾತಿಯ ಹಿಂದೂಗಳು ಮುಂದೆ ಬಂದರು. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಉತ್ತರ ಭಾರತದ ಮೊಘಲರ ಮತ್ತು ನವಾಬರ ಆಡಳಿತ ಹೆಚ್ಚು-ಕಡಿಮೆ ಕೊನೆಗೊಂಡು ದಕ್ಷಿಣದ ಅಳಿದುಳಿದ ಮುಸ್ಲಿಂ ಸಂಗೀತಗಾರರು ಮಹಾರಾಷ್ಟ್ರದ ಸಣ್ಣಪುಟ್ಟ ಸಂಸ್ಥಾನಗಳಿಗೆ ವಲಸೆ ಬಂದರು. ಮುಸ್ಲಿಮರಿಗೆ ಸೇರದಿದ್ದ ಈ ಸಂಸ್ಥಾನಗಳಲ್ಲಿ ನೆಲೆಸಿ ದೊಡ್ಡ ಸಂಖ್ಯೆಯಲ್ಲಿ ಹಿಂದೂ/ಬ್ರಾಹ್ಮಣ ಸಂಗೀತಗಾರರಿಗೆ ತರಬೇತಿ ನೀಡಿದರು ಹಾಗೂ ಇದರ ಪರಿಣಾಮವಾಗಿ ಹಲವಾರು ಹಿಂದುಸ್ತಾನೀ ಸಂಗೀತ ವಿದ್ವಾಂಸರು ಮಹಾರಾಷ್ಟ್ರದಿಂದ ಕಾಣತೊಡಗಿದರು.

ಆದರೆ ಭಾರತದ ಸಾಂಸ್ಕೃತಿಕ ರಾಷ್ಟ್ರೀಯತೆ (cultural nationalism) ಬಹುಸಂಖ್ಯಾತರ ಸಂಸ್ಕೃತಿಯ ಕಲ್ಪನೆಯ ಮೇಲೆ ಕ್ರೋಢೀಕೃತಗೊಂಡಿದ್ದು ಅದು ಸಂಗೀತದಲ್ಲಿ ಇಸ್ಲಾಮಿನ ಪ್ರಭಾವವನ್ನು ತೀವ್ರ ಋಣಾತ್ಮಕವಾಗಿ ಕಂಡಿತು. ಇದರ ಪರಿಣಾಮವಾಗಿ ಹಿಂದುಸ್ತಾನೀ ಶೈಲಿಯ ಉತ್ತರ ಭಾರತದ ಸಂಗೀತ ಇಸ್ಲಾಮಿನ (ಮತ್ತು ಬ್ರಿಟಿಷರ) ಕೈಯಲ್ಲಿ ಬಿದ್ದು ನರಳಿದ ಒಂದು ಭಾರತೀಯ ಕಲಾಪ್ರಕಾರವೆಂಬ ಮನೋಭಾವ ಬೆಳೆದುಬಂತು. ಇಡೀ ಭಾರತದಲ್ಲಿ ಮುಂಚೆ ಒಂದೇ ರೀತಿಯ ಸಂಗೀತವಿತ್ತೆಂದೂ, ಇಸ್ಲಾಮಿನ ದಾಳಿಯಿಂದಾಗಿ ಅದು ಉತ್ತರಾದಿ/ಹಿಂದುಸ್ತಾನೀ ಎಂಬ ಮಿಶ್ರಶೈಲಿಯ ಸಂಗೀತವಾಯಿತೆಂದೂ ಹಾಗೂ ದಕ್ಷಿಣದ ಕರ್ನಾಟಕ ಸಂಗೀತವೆಂಬುದು ಪರಿಶುದ್ಧವಾದ ಭಾರತೀಯ ಸಂಗೀತವಾಗಿಯೇ ಉಳಿದಿದೆಯೆಂದೂ ಪ್ರಚಲಿತಕ್ಕೆ ಬಂತು (ಈಗಲೂ ಸಂಗೀತ ಪರೀಕ್ಷೆಗಳಲ್ಲಿ ಪರೀಕ್ಷಾರ್ಥಿಗಳು ಹೀಗೇ ಕಲಿತು ಉತ್ತರಿಸುತ್ತಾರೆ).

ಹೀಗೆ ಭಾರತೀಯ ಸಂಗೀತದಲ್ಲಿ ಭೇದ ಬಂತೆಂಬುದಕ್ಕೆ ಮುಸಲ್ಮಾನ ರಾಜರುಗಳನ್ನು ಹಾಗೂ ಸಂಗೀತಗಾರರನ್ನು ಕಾರಣೀಭೂತರನ್ನಾಗಿ ಮಾಡಲಾಗುತ್ತದೆ. ಹಿಂದುಸ್ತಾನೀ ಸಂಗೀತವೆಂಬುದು ಬರೇ ದಾಳಿಗೊಳಗಾದದ್ದು ಮಾತ್ರವಲ್ಲದೇ ಅದನ್ನು ಮುಸ್ಲಿಂ ಸಂಗೀತಗಾರರು ಹಿಂದೂ ಧಾರ್ಮಿಕತೆಯಿಂದ ವಿಮುಖಗೊಳಿಸಿ ಐಹಿಕ ಸಂಗೀತವಾಗಿ ಮಾರ್ಪಡಿಸಿದರೆನ್ನುವ ಭಾವನೆ ಮುನ್ನೆಲೆಗೆ ಬಂತು. ಇಂಥ ಸಾಂಸ್ಕೃತಿಕ ರಾಷ್ಟ್ರೀಯತೆಯ ಮುಂಚೂಣಿಯಲ್ಲಿ 1950ರಿಂದ 1962ರವರೆಗೆ ನೆಹರೂ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಮಂತ್ರಿಯಾಗಿದ್ದ ಡಾ. ಬಿ.ವಿ. ಕೇಸ್ಕರ್ ಅವರೇ ಸ್ವತಃ ಇದ್ದರು. ಅವರ ಬರಹ ಅಂದಿನ ಕೇಂದ್ರ ಸರ್ಕಾರದ ಪ್ರಸಾರ ನೀತಿಯ ಪೂರ್ವಾಗ್ರಹಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಕೇಸ್ಕರರ ಪ್ರಕಾರ ಮುಸ್ಲಿಂ ಸಂಗೀತಗಾರರು ಸಂಗೀತಕಲೆಯನ್ನು ತಮ್ಮತಮ್ಮಲ್ಲೇ ಉಳಿಸಿಕೊಳ್ಳುವ ಸಲುವಾಗಿ ಘರಾನಾಗಳನ್ನು ಸ್ಥಾಪಿಸಿ ಅದರ ಮೂಲಕ ಸಂಗೀತದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಿದರು (ಇದನ್ನು ಅವರ ಪುಸ್ತಕ ಇಂಡಿಯನ್ ಮ್ಯೂಸಿಕ್: ಪ್ರಾಬ್ಲೆಮ್ಸ್ ಆಂಡ್ ಪ್ರಾಸ್ಪೆಕ್ಟ್ಸ್‍ನಲ್ಲಿ ನೋಡಬಹುದು).

ಮುಸ್ಲಿಮ್ ನಾಟ್ಯಗಾತಿಯರು ಹಾಗೂ ವೇಶ್ಯೆಯರೂ (courtesans) ಕೂಡಾ ಇದೇ ಬಳುವಳಿಯ ಒಂದು ಅಶ್ಲೀಲ ಭಾಗವೆಂದು ಭಾವಿಸಲಾಯಿತು. ಕೇಸ್ಕರರಿಗೆ ಇದೊಂದು ದೊಡ್ಡ ‘ಸಂಗೀತ ಸಂತೆ’ (ಅವರದೇ ಶಬ್ದಗಳಲ್ಲಿ ‘‘the music mob’) ಯಂತೆ ಕಂಡಿತು. ಆದರೆ ಸಂಗೀತವನ್ನು ಈ ಸಂತೆಯೊಳಗೆ ಹಾಗೇ ಬಿಡುವಂತಿಲ್ಲ ಏಕೆಂದರೆ ಅವರ ಪ್ರಕಾರ ‘ಸಂಗೀತವು ಮನುಷ್ಯನ ಸುಪ್ತಪ್ರಜ್ಞೆಯ ಮೂಲಕ ಆತನ ಆದಿಮ ಭಾವನಾ ಶಕ್ತಿಗಳಿಗೆ ಒಂದು ಕ್ರಮಬದ್ಧ ಅಭಿವ್ಯಕ್ತಿಯನ್ನು ಕೊಡುವಂಥ ಬಹುಮುಖ್ಯ ಕೆಲಸ’ ಮಾಡುತ್ತಿತ್ತು. ಮೇಲೆ ತಿಳಿಸಿದಂಥವರು ಇಂಥ ಒಂದು ಮಹತ್ವದ ಕೆಲಸದಲ್ಲಿ ಸಾರಥ್ಯದ ಸಾಮಥ್ರ್ಯವಿಲ್ಲದವರು. ಇಂಥ ಪರಿಸ್ಥಿತಿಯಲ್ಲಿ ಸಂತೆಯಲ್ಲಿ ಕಳೆದುಹೋದ ಸಂಗೀತವನ್ನು ಮತ್ತೆ ಹಿಂದೆ ತರುವ ಪ್ರಯತ್ನದ ಫಲವಾಗಿ ಪ್ರಾಚೀನ ಸಂಸ್ಕೃತ ಶಾಸ್ತ್ರಗ್ರಂಥಗಳಿಗೂ ಉತ್ತರ ಭಾರತದ ಸಂಗೀತಕ್ಕೂ ಸಂಬಂಧ ಸ್ಥಾಪಿಸುವ ಪ್ರಯತ್ನ ‘ಬಹುಶ್ರುತ’ರಿಂದ ನಡೆಯಿತು. ಹೀಗೆ ವಿ.ಎನ್. ಭಟ್ಕಂಡೆ, ವಿಷ್ಣು ದಿಗಂಬರ ಪಲುಸ್ಕರ್, ಎಸ್.ಎನ್. ರತಂಜನ್‍ಕರ್ ಅವರಂಥ ಮರಾಠೀ ಬ್ರಾಹ್ಮಣರು ಸಂಗೀತ ಕ್ಷೇತ್ರವನ್ನು ಹಿಂದೂ/ಬ್ರಾಹ್ಮಣೀಕರಣಗೊಳಿಸುವ ಕೆಲಸವನ್ನು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಮಾಡಿದರು. ತಮಗಿಂತ ಒಂದು ತಲೆಮಾರು ಹಿಂದಿನ ಈ ಪಂಡಿತರ ಕೆಲಸಗಳಿಗೆ ತಾತ್ವಿಕ ಸಮರ್ಥನೆಯನ್ನು ತಮ್ಮ ಪುಸ್ತಕದ ಮೂಲಕ ಕೇಸ್ಕರ್ ನೀಡುತ್ತಾರೆ.

ಪುಸ್ತಕಕ್ಕೂ ಮೊದಲೇ ಕೇಸ್ಕರರು ಮಂತ್ರಿಗಳಾಗಿದ್ದವರು ಮತ್ತು ಆಗ ತಮ್ಮ ಅಭಿಪ್ರಾಯಗಳಿಗೆ ಪ್ರಾಯೋಗಿಕ ರೂಪವನ್ನೂ ಕೊಟ್ಟರು. ಸ್ವಾತಂತ್ರ್ಯಾನಂತರ ಭಾರತದ ಸಂಗೀತ ಕ್ಷೇತ್ರದಲ್ಲಿ ಆಕಾಶವಾಣಿ ವಹಿಸಿದ ಪಾತ್ರ ಬಹಳ ಮುಖ್ಯ. ಜನಸಾಮಾನ್ಯರಿಗೆ ‘ಉತ್ತಮ’ ಶಾಸ್ತ್ರೀಯ ಸಂಗೀತದ ಪರಿಚಯ ಮತ್ತು ಕೇಳುವಿಕೆಯನ್ನು ದೊಡ್ಡಮಟ್ಟದಲ್ಲಿ ಒದಗಿಸಲು ಅಂದು ಇದ್ದ ಪ್ರಮುಖ ಮತ್ತು ಪ್ರಬಲ ಮಾಧ್ಯಮ ಆಕಾಶವಾಣಿ. 1950ರ ದಶಕದಲ್ಲಿ ಆಕಾಶವಾಣಿಯ ಡೈರೆಕ್ಟರ್ ಜನರಲ್ ಆಗಿದ್ದ ಜೆ.ಸಿ. ಮಾಥುರ್ ಎನ್ನುವವರ ಪ್ರಕಾರ ಆ ಸಮಯದಲ್ಲಿ ಸುಮಾರು ಹತ್ತು ಸಾವಿರ ಜನ ಸಂಗೀತಗಾರರು ಆಕಾಶವಾಣಿಯಿಂದ ಪೂರ್ಣಕಾಲಿಕ ಅಥವಾ ಅರೆಕಾಲಿಕ ನೌಕರಿಯನ್ನು ಪಡೆದಿದ್ದರು. ಡೇವಿಡ್ ಲೆಲಿವೆಲ್ಡ್ ಎನ್ನುವವನೊಬ್ಬ ತನ್ನ ಸಂಶೋಧನೆಯಲ್ಲಿ ಮಾಥುರ್ ಅವರ ಮಾತುಗಳನ್ನು ಉಲ್ಲೇಖಿಸಿ ಹೇಳುವಪ್ರಕಾರ ಆ ಸಂಗೀತಗಾರರಲ್ಲಿ ಹೆಚ್ಚಿನವರು ‘ಶಿಕ್ಷಣ ಹೊಂದಿದ ಮತ್ತು ಗೌರವಾನ್ವಿತ ಮನೆತನದ’ ಸಂಗೀತಗಾರರಾಗಿದ್ದರು.

ಆಕಾಶವಾಣಿಯ ಉದ್ಯೋಗಕ್ಕೆ ಅರ್ಹರಾಗಲು ಅಭ್ಯರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು. ಇದು ಸಾಂಪ್ರದಾಯಿಕ ಸಂಗೀತಗಾರರಿಗೆ ಸ್ವತಂತ್ರ ಭಾರತ ಕೊಟ್ಟ ದೊಡ್ಡ ಕೊಡಲಿಯೇಟಾಯಿತು. ಘರಾನಾಗಳ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಕಲಿತು ಉಚ್ಛ್ರಾಯಕ್ಕೆ ಬಂದ ಸಂಗೀತಗಾರರೆಲ್ಲ ಈ ನಿರ್ಬಂಧದ ದೆಸೆಯಿಂದ ಅಭ್ಯರ್ಥಿತನ ಕಳಕೊಂಡರು. ಉತ್ತಮ ಸಂಗೀತಗಾತಿಯರಾಗಿದ್ದ ನಾಟ್ಯಗಾತಿಯರು ಹಾಗೂ ವೇಶ್ಯೆಯರು ಕೂಡಾ ತಮ್ಮ ಕಸುಬಿನ ‘ಅಶ್ಲೀಲತೆ’ಯಿಂದಾಗಿ ನವಭಾರತದಲ್ಲಿ ಸರ್ಕಾರೀ ಕೆಲಸ ಪಡೆಯುವ ಅರ್ಹತೆ ಕಳಕೊಂಡರು. ಹೀಗೆ ಅರ್ಹತೆ ಕಳಕೊಂಡವರಲ್ಲಿ ಕೆಲವರು ತಮ್ಮನ್ನು ಪರಿಗಣಿಸಬೇಕೆಂದು ಪ್ರತಿಭಟನೆ ಮಾಡಿದ ಮೇಲೆ ಬೆರಳೆಣಿಕೆಯಷ್ಟು ಜನರನ್ನು ತೆಗೆದುಕೊಳ್ಳಲಾಯಿತು; ಅದು ಹೆಚ್ಚುಕಡಿಮೆ ನಗಣ್ಯ. ಇವರೆಲ್ಲರ ಬದಲಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದ ಹೊಸ ಮ್ಯೂಸಿಕ್ ಕಾಲೇಜುಗಳಲ್ಲಿ ಕಲಿತು ಆಗಷ್ಟೇ ಹೊರಬಂದ ಮತ್ತು ಬರುತ್ತಿದ್ದ ನವಮಧ್ಯಮವರ್ಗದ ಮತ್ತು ಹೆಚ್ಚಾಗಿ ಬ್ರಾಹ್ಮಣ ಹಿನ್ನೆಲೆಯಿರುವ ಯುವಜನರು ಆ ಹುದ್ದೆಗಳಲ್ಲಿ ತುಂಬಿಕೊಂಡರು ಮಾತ್ರವಲ್ಲದೇ ಕೇಸ್ಕರರ ಐಡಿಯಾಲಜಿಗೆ ಇನ್ನೂ ಹೆಚ್ಚಿನ ಚಲಾವಣೆ ಕೊಟ್ಟರು. ಹೀಗೆ ನೆಹರೂ ಕ್ಯಾಬಿನೆಟ್‍ನಲ್ಲಿ ಮಂತ್ರಿಯಾಗಿದ್ದಾಗ್ಯೂ ತುಂಬಾ ಸ್ಪಷ್ಟವಾಗಿ ಮುಸ್ಲಿಮ್ ಸಂಗೀತಗಾರರನ್ನು ಆಧುನಿಕ ಸಂಸ್ಥೆಗಳಿಂದ ಹೊರಗಿಟ್ಟ ಪ್ರಯತ್ನವನ್ನು ನಾವು ಕೇಸ್ಕರರಲ್ಲಿ ಕಾಣಬಹುದು.

ಇಂಥ ಸಂದರ್ಭದಲ್ಲಿ ಭಾರತದ ಮುಸ್ಲಿಂ ಸಂಗೀತಗಾರರ ಪರಿಸ್ಥಿತಿಯನ್ನು ಊಹಿಸುವುದು ಕಷ್ಟವೇನಲ್ಲ. ಅವರು ಎದುರಿಸಬೇಕಾಗಿದ್ದುದು ಬರೇ ಆರ್ಥಿಕ ಆದಾಯದ ಪ್ರಶ್ನೆ ಮಾತ್ರವಲ್ಲ; ಅದಕ್ಕಿಂತಲೂ ಹೆಚ್ಚಾಗಿ ಭಾರತೀಯ ಸಂಗೀತವನ್ನು ವಿಭಜಿಸಿದ, ಕಲುಷಿತಗೊಳಿಸಿದ, ಏಕಸ್ವಾಮ್ಯದ ಆಸ್ತಿಯಾಗಿ ಮಾಡಿದ ಗುರುತರ ಆರೋಪದಿಂದ ಮುಕ್ತಿ ಹೊಂದುವಂಥ ಪ್ರಶ್ನೆ. ಹೀಗಿರುವಾಗ ಹಲವು ಮುಸ್ಲಿಂ ಸಂಗೀತಗಾರರು ತಮ್ಮ ಮಕ್ಕಳಿಗೆ ಹಿಂದೂ ಹೆಸರನ್ನಿಡುವುದು ಅಥವಾ ಹಿಂದೂಗಳ ಜೊತೆ ಮದುವೆ ಮಾಡುವುದು; ಹಿಂದೂ ದೇವರುಗಳಲ್ಲಿ ಭಕ್ತಿ ತೋರುವುದು; ದೇವಸ್ಥಾನದಲ್ಲಿ ಸಂಗೀತ ಸೇವೆ ಮಾಡುವುದು, ಇವನ್ನೆಲ್ಲ ಮಾಡಿದರೆ ಅದು ಬರೇ ಸಾಮರಸ್ಯದ ಚಿಹ್ನೆ ಮಾತ್ರ ಅಲ್ಲ; ಅದು ಮೇಲಿನ ಪ್ರಶ್ನೆಗಳಿಗೆ ಸ್ವತಂತ್ರ ಭಾರತದಲ್ಲಿ ಉತ್ತರಕಂಡುಕೊಳ್ಳುವ ಉಪಾಯ (strategy) ಕೂಡಾ. ಆದರೂ ಕಾಲಕಳೆದಂತೆ ಅವರ ಸಂಖ್ಯೆ ಬಹಳ ಕಡಿಮೆಯಾಗುತ್ತ ನಗಣ್ಯವಾಗುತ್ತ ಬಂದಿದೆ. ಕಠಿಣತರ ರಿಯಾeóï ಮಾಡಿ ಮುಂದೆ ಬಂದವರಲ್ಲಿ ಕೆಲವರು ಉಳಿದುಕೊಂಡರು. ಹೀಗೆ ಕೋಮು ರಾಜಕೀಯವನ್ನು ಮೀರಿ ತಮ್ಮ ಕೌಶಲ್ಯ ಪ್ರಯತ್ನ ಹಾಗೂ ಶ್ರದ್ಧೆಯಿಂದ ಮೇಲೆ ಬಂದ ಕೆಲವೇ ಸಂಗೀತಗಾರರಲ್ಲಿ ಉಸ್ತಾದ್ ಬಿಸ್ಮಿಲ್ಲಾಖಾನ್ ಒಬ್ಬರು. ಉಸ್ತಾದರು (ಮತ್ತು ಅವರಂಥ ಸಂಗೀತಗಾರರು) ಸ್ವತಂತ್ರ ಭಾರತದಲ್ಲಿ ಪಟ್ಟಿರಬಹುದಾದ ಕಷ್ಟ, ಸಂದಿಗ್ಧಗಳು ಬಹಳ. ಅವರ ಸ್ವರ್ಗೀಯ ಸಂಗೀತ ನಮ್ಮಲ್ಲಿ ಚಿರಾಯುವಾಗಿ ಉಳಿದಿದೆ. ಅವರಿಗೆ ನಮ್ಮ ಈ ಒಂದು ನುಡಿನಮನ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...