ಭಾರತ ವ್ಯಕ್ತಪಡಿಸಿದ ಆಕ್ಷೇಪಗಳ ಹೊರತಾಗಿಯೂ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಪಾಕಿಸ್ತಾನಕ್ಕೆ 800 ಮಿಲಿಯನ್ ಡಾಲರ್ ಹಣಕಾಸು ಪ್ಯಾಕೇಜ್ ಅನ್ನು ಅನುಮೋದಿಸಿದೆ ಎಂದು ವರದಿಗಳು ತಿಳಿಸಿವೆ. ಬ್ಯಾಂಕ್ ನೀಡಿರುವ ಒಟ್ಟು ಸಾಲದಲ್ಲಿ 300 ಮಿಲಿಯನ್ ಡಾಲರ್ ಅನ್ನು ನೀತಿ ಆಧಾರಿತ ಸಾಲ (PBL) ಮತ್ತು 500 ಮಿಲಿಯನ್ ಡಾಲರ್ ಅನ್ನು ಕಾರ್ಯಕ್ರಮ ಆಧಾರಿತ ಗ್ಯಾರಂಟಿ(PBG)ಗಳಿಗೆ ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಭಾರತದ ಆಕ್ಷೇಪಗಳ ಹೊರತಾಗಿಯೂ
ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 1 ಬಿಲಿಯನ್ ಡಾಲರ್ (ಸುಮಾರು ರೂ. 8,500 ಕೋಟಿ) ಪ್ಯಾಕೇಜ್ ಅನ್ನು ಇತ್ತಿಚೆಗೆ ಪಡೆದಿತ್ತು. ಅದಾಗಿ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಪಾಕಿಸ್ತಾನ ಹಣಕಾಸು ಸಚಿವರ ಸಲಹೆಗಾರ ಖುರ್ರಾಮ್ ಶೆಹ್ಜಾದ್ ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ಬ್ಯಾಂಕ್‌ನ ಪ್ಯಾಕೇಜ್‌ಗೆ ಸಂಬಂಧಿಸಿದ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. 300 ಮಿಲಿಯನ್ ಡಾಲರ್ ನೀತಿ ಆಧಾರಿತ ಸಾಲ (PBL) ಮತ್ತು 500 ಮಿಲಿಯನ್ ಡಾಲರ್ ಕಾರ್ಯಕ್ರಮ ಆಧಾರಿತ ಗ್ಯಾರಂಟಿ (PBG) ಅನ್ನು ಪ್ಯಾಕೇಜ್ ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಬ್ಯಾಂಕಿನ ಪ್ಯಾಕೇಜ್ ಪಾಕಿಸ್ತಾನದ ಹಣಕಾಸಿನ ಸುಸ್ಥಿರತೆಯನ್ನು ಬಲಪಡಿಸುವ ಮತ್ತು ಸಮಗ್ರ ಸುಧಾರಣೆಗಳ ಮೂಲಕ ಸಾರ್ವಜನಿಕ ಹಣಕಾಸು ನಿರ್ವಹಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಪಾಕಿಸ್ತಾನದ ADB ನಿರ್ದೇಶಕಿ ಎಮ್ಮಾ ಫ್ಯಾನ್ ಅವರ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ.
ಸಾರ್ವಜನಿಕ ಖರ್ಚು ಮತ್ತು ನಗದು ನಿರ್ವಹಣೆಯನ್ನು ಹೆಚ್ಚಿಸುವಾಗ ತೆರಿಗೆ ನೀತಿ, ಆಡಳಿತ ಮತ್ತು ಅನುಸರಣೆಯನ್ನು ಸುಧಾರಿಸಲು ದೂರಗಾಮಿ ಸುಧಾರಣೆಗಳನ್ನು ಕಾರ್ಯಕ್ರಮದ ಅಡಿಯಲ್ಲಿ ನಡೆಸಲಾಗುತ್ತದೆ. ಇದು ಡಿಜಿಟಲೀಕರಣ, ಹೂಡಿಕೆ ಸೌಲಭ್ಯ ಮತ್ತು ಖಾಸಗಿ ವಲಯದ ಅಭಿವೃದ್ಧಿಯನ್ನು ಸಹ ಉತ್ತೇಜಿಸುತ್ತದೆ ಎಂದು ವರದಿ ಹೇಳಿದೆ.
ಅಲ್ಲದೆ, ಇದು ಪಾಕಿಸ್ತಾನದ ಹಣಕಾಸಿನ ಕೊರತೆ ಮತ್ತು ಸಾರ್ವಜನಿಕ ಸಾಲವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಸಾಮಾಜಿಕ ಮತ್ತು ಅಭಿವೃದ್ಧಿ ವೆಚ್ಚಗಳಿಗೆ ಸ್ಥಳಾವಕಾಶವನ್ನು ಸೃಷ್ಟಿಸುತ್ತವೆ ಎಂದು ವರದಿ ಹೇಳಿದೆ. ದೇಶೀಯ ಸಂಪನ್ಮೂಲ ಕ್ರೋಢೀಕರಣವನ್ನು ಹೆಚ್ಚಿಸುವುದು ಮತ್ತು ಹಣಕಾಸು ಸುಧಾರಣೆಗಳ ಮೂಲಕ ಆರ್ಥಿಕತೆಯನ್ನು ಸ್ಥಿರಗೊಳಿಸುವ ಗುರಿಯನ್ನು ಇದು ಹೊಂದಿದೆ ಎಂದು ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ತೆರಿಗೆ ವ್ಯವಸ್ಥೆಯನ್ನು ಸುಧಾರಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ಹಣಕಾಸಿನ ಶಿಸ್ತನ್ನು ಉತ್ತೇಜಿಸಲು ಬ್ಯಾಂಕ್‌ನ ಈ ಬೆಂಬಲವು ಸಹಾಯ ಮಾಡುತ್ತದೆ. ಅಲ್ಲದೆ, ಇದು ದೇಶದ ಆದಾಯದ ಮೂಲವನ್ನು ವಿಸ್ತರಿಸುವ ನಿರೀಕ್ಷೆಯಿದ್ದು, ಆರ್ಥಿಕ ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆಯಿಡುವಂತೆ ಮಾಡುತ್ತದೆ ಎಂದು ಹೇಳಿದೆ. ಭಾರತದ ಆಕ್ಷೇಪಗಳ ಹೊರತಾಗಿಯೂ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭೋಪಾಲ್ ಅನಿಲ ದುರಂತ: ತ್ಯಾಜ್ಯ ವಿಲೇವಾರಿ ವಿರುದ್ಧದ ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ
ಭೋಪಾಲ್ ಅನಿಲ ದುರಂತ: ತ್ಯಾಜ್ಯ ವಿಲೇವಾರಿ ವಿರುದ್ಧದ ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

