Homeಮುಖಪುಟಅಸ್ಸಾಂ ಸಿಎಂ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ : ಗೌರವ್ ಗೊಗೊಯ್

ಅಸ್ಸಾಂ ಸಿಎಂ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ : ಗೌರವ್ ಗೊಗೊಯ್

- Advertisement -
- Advertisement -

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಮರ ವಿರುದ್ದ ದ್ವೇಷ ಹರಡುತ್ತಿದ್ದಾರೆ, ಅವರ ಜನಾಂಗೀಯ ಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.

ಅಸ್ಸಾಂ ಬಿಜೆಪಿಯ ರಾಜ್ಯ ಘಟಕ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ (ಫೆ.7) ಹಂಚಿಕೊಂಡ ‘ಸಿಎಂ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕುವಂತೆ ತೋರಿಸುವ’ ಎಐ ವಿಡಿಯೋಗೆ ಸಂಬಂಧಪಟ್ಟಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗುವಾಹಟಿಯ ಕಾಂಗ್ರೆಸ್ ಪ್ರಧಾನ ಕಚೇರಿ ರಾಜೀವ್ ಭವನದಲ್ಲಿ ಸೋಮವಾರ (ಫೆ.9) ಸುದ್ದಿಗೋಷ್ಠಿ ನಡೆಸಿದ ಗೊಗೊಯ್, “ಅಸ್ಸಾಂ ಬಿಜೆಪಿ ಘಟಕ ಹಂಚಿಕೊಂಡ ವಿಡಿಯೋ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿತ್ತು. ಸಿಎಂ ‘ಕೆಟ್ಟ ಮತ್ತು ಅಪಾಯಕಾರಿ’ ವಿಷಯವನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾನುವಾರ (ಫೆ.8) ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಶರ್ಮಾ, ಗೌರವ್ ಗೊಗೊಯ್ ಮತ್ತು ಅವರ ಕುಟುಂಬ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆಯೂ ಗೊಗೊಯ್ ವಿರುದ್ದ ಶರ್ಮಾ ಈ ಆರೋಪವನ್ನು ಮಾಡಿದ್ದರು. ಶರ್ಮಾ ಅವರ ಆರೋಪಕ್ಕೆ ಗೊಗೊಯ್ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.

ಶರ್ಮಾ ಅವರ ಆರೋಪಗಳನ್ನು ತಳ್ಳಿ ಹಾಕಿದ ಗೊಗೊಯ್, “ನನ್ನ ಪತ್ನಿ 2013ರಲ್ಲಿ ಕೆಲಸದ ನಿಮಿತ್ತ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. ಆ ವರ್ಷದ ಡಿಸೆಂಬರ್‌ನಲ್ಲಿ 10 ದಿನಗಳ ಭೇಟಿಯ ಸಮಯದಲ್ಲಿ ನಾನು ಅವರ ಜೊತೆಗಿದ್ದೆ. ಈ ವಿಷಯದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಭೇಟಿಯ ಬಗ್ಗೆ ತನ್ನನ್ನು ಎಂದಿಗೂ ಪ್ರಶ್ನಿಸಿಲ್ಲ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕಳೆದ ಆರು ತಿಂಗಳಿನಿಂದ ಉದ್ದೇಶಪೂರ್ವಕವಾಗಿ ಎಸ್‌ಐಟಿ ವರದಿಯನ್ನು ತಡೆಹಿಡಿದಿದ್ದಾರೆ. ಏಕೆಂದರೆ ಅವರು ಮಾಡಿರುವ ಆರೋಪಗಳಿಗೆ ಆ ವರದಿಯಲ್ಲಿ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ, ಹಾಗಾಗಿಯೇ ಅವರು ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಹಿಂಜರಿಯುತ್ತಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿ ತನ್ನ ಅಪ್ರಾಪ್ತ ಮಕ್ಕಳನ್ನು ವಿವಾದಕ್ಕೆ ಎಳೆದಿರುವ ಬಗ್ಗೆ ಕಾನೂನು ಆಯ್ಕೆಗಳನ್ನು ಅನ್ವೇಷಿಸುವುದಾಗಿ ಗೊಗೊಯ್ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲ್ ‘ಡಕಾಯಿತಿ’: 54,000 ಕೋಟಿಗೂ ಹೆಚ್ಚಿನ ಹಣ ವಂಚನೆ: ಎಸ್‌ಒಪಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ

ನವದೆಹಲಿ: ಡಿಜಿಟಲ್ ವಂಚನೆಯಿಂದ 54,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸುವುದು ಸಂಪೂರ್ಣ "ದರೋಡೆ ಅಥವಾ ಡಕಾಯಿತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಬಣ್ಣಿಸಿದೆ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸಲು ಆರ್‌ಬಿಐ, ಬ್ಯಾಂಕುಗಳು...

ಪಾಕಿಸ್ತಾನ ನಂಟು : ಸಿಎಂ ಶರ್ಮಾ ಆರೋಪ ನಿರಾಧಾರ, ಸಿ-ಗ್ರೇಡ್ ಸಿನಿಮಾ ಎಂದ ಗೌರವ್ ಗೊಗೊಯ್

ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ....

ಪಂಜಾಬ್: ತರಗತಿಯೊಳಗೆ ವಿದ್ಯಾರ್ಥಿನಿಯನ್ನು ಕೊಂದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ

ಚಂಡೀಗಢ: ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಶಾಲಾ ಕೋಣೆಯೊಳಗೆ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿ ಕೊಂದ ಘಟನೆ ಸೋಮವಾರ ನಡೆದಿದೆ. ಸಹಪಾಠಿಗಳು ಭಯಭೀತರಾಗಿ ನೋಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು...

‘ಎಂಡಿಎಂಎ ಡ್ರಗ್ಸ್ ಕೇಂದ್ರವಾಗಿ ಮಾರ್ಪಟ್ಟ ಮಧ್ಯಪ್ರದೇಶ-ರಾಜಸ್ಥಾನ ಗಡಿ’: 13ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು. 

ಭೋಪಾಲ್: ದೇಶದ ಅಫೀಮು ಕೃಷಿ ಮತ್ತು ಕಳ್ಳಸಾಗಣೆ ಮಾರ್ಗವಾಗಿ ದೀರ್ಘಕಾಲದಿಂದ ಕುಖ್ಯಾತಿ ಗಳಿಸಿರುವ ಪಶ್ಚಿಮ ಮಧ್ಯಪ್ರದೇಶ ಮತ್ತು ಪಕ್ಕದ ಆಗ್ನೇಯ ರಾಜಸ್ಥಾನದ ಜಿಲ್ಲೆಗಳು ಈಗ MDMA ಸಂಶ್ಲೇಷಿತ ಡ್ರಗ್ಸ್ ಅಕ್ರಮ ಉತ್ಪಾದನೆ ಮತ್ತು...

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿರೋಧ ಪಕ್ಷಗಳು: ವರದಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಪಕ್ಷ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ಅನಿರೀಕ್ಷಿತ ಕೃತ್ಯ' ಎಸಗಲು ಸಂಚು...

ಮೆಟಾ-ವಾಟ್ಸಾಪ್ ಗೌಪ್ಯತೆ ನೀತಿ ಪ್ರಕರಣ: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ 

ನವದೆಹಲಿ: ಗೌಪ್ಯತೆ ನೀತಿಯ ಮೇಲೆ 213.14 ಕೋಟಿ ರೂ. ದಂಡ ವಿಧಿಸಿದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶದ ವಿರುದ್ಧ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಮತ್ತು ವಾಟ್ಸಾಪ್ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್...

ಪ್ರಬಲಜಾತಿ ಯುವತಿಯೊಂದಿಗೆ ಗ್ರಾಮ ತೊರೆದ ದಲಿತ ಯುವಕ; ಕುಟುಂಬದ ಮೇಲೆ ದಾಳಿ ಮಾಡಿದ ಹದಿಮೂರು ಜನರ ಬಂಧನ

ಸೂರತ್ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮತ್ತು ಆಕೆಯ ಇಬ್ಬರು ವಯಸ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಶನಿವಾರ ಒಂದೇ ಕುಟುಂಬದ 13 ಸದಸ್ಯರನ್ನು ಬಂಧಿಸಿದ್ದಾರೆ. ಆಕೆಯ...

‘ದೆಹಲಿ ಖಾಲಿಸ್ತಾನವಾಗಲಿದೆ’: 10 ಶಾಲೆಗಳು, ಸಂಸತ್ತಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ವಿದ್ಯಾರ್ಥಿಗಳ ಸ್ಥಳಾಂತರ

ಸೋಮವಾರ ರಾಷ್ಟ್ರ ರಾಜಧಾನಿ ಮತ್ತು ಸಂಸತ್ತಿನ ಕನಿಷ್ಠ 10 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭಾರಿ ಭದ್ರತಾ ಪ್ರತಿಕ್ರಿಯೆ ನೀಡಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು (ಡಿಎಫ್‌ಎಸ್) ತಿಳಿಸಿವೆ. ಡಿಎಫ್‌ಎಸ್ ಪ್ರಕಾರ, ಬೆಳಿಗ್ಗೆ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ರೈತರ ಪಾಲಿಗೆ ಮರಣಶಾಸನ: ಸಿಎಂ ಸಿದ್ದರಾಮಯ್ಯ

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ...

ಉತ್ತರ ಪ್ರದೇಶ| ಜಾತಿ ನಿಂದನೆ-ಹಲ್ಲೆ; ದೃಷ್ಟಿ ಕಳೆದುಕೊಂಡ ದಲಿತ ಯುವಕ

ಕಾಲುವೆ ಬಳಿ ಮಲವಿಸರ್ಜನೆ ಮಾಡುತ್ತಿದ್ದ ದಲಿತ ಯುವಕನ ಜೊತೆಗೆ ನಡೆದ ಜಗಳ ತೀವ್ರಗೊಂಡು, ದಾಳಿಕೋರನೊಬ್ಬ ಮೋಟಾರ್ ಸೈಕಲ್ ಕೀಲಿಯಿಂದ ಚುಚ್ಚಿದ ಪರಿಣಾಮ ಆತ ಒಂದು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದಾರೆ. 20 ರ ಹರೆಯದ...