ಅಸ್ಸಾಂ | ಸಂಸದನಿಗೆ ಬ್ಯಾಟ್‌ನಿಂದ ಹಲ್ಲೆ : ಸರ್ಕಾರಿ ಯೋಜಿತ ಕೃತ್ಯ ಎಂದ ಕಾಂಗ್ರೆಸ್ ; ವಿಧಾನಸಭೆಯಲ್ಲಿ ಕೋಲಾಹಲ

ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಗುರುವಾರ (ಫೆ.20) ಕಾಂಗ್ರೆಸ್ ಸಂಸದ ರಕೀಬುಲ್ ಹುಸೈನ್ ಮೇಲೆ ಅಪರಿಚಿತ ಜನರ ಗುಂಪೊಂದು ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಧುಬ್ರಿ ಲೋಕಸಭಾ ಕ್ಷೇತ್ರದ ಸಂಸದರಾದ ಹುಸೈನ್ ಅವರು ದಾಳಿ ವೇಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್‌ಒಗಳು) ಅವರನ್ನು ರಕ್ಷಿಸಿದ್ದಾರೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಸಂಸದ ಹುಸೈನ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ  ನಾಗಾಂವ್ ಜಿಲ್ಲೆಯ ರೂಪಾಹಿಹತ್‌ನ ನಟುನ್ ಬಝಾರ್‌ನಲ್ಲಿ ದಾಳಿ ನಡೆದಿದೆ. … Continue reading ಅಸ್ಸಾಂ | ಸಂಸದನಿಗೆ ಬ್ಯಾಟ್‌ನಿಂದ ಹಲ್ಲೆ : ಸರ್ಕಾರಿ ಯೋಜಿತ ಕೃತ್ಯ ಎಂದ ಕಾಂಗ್ರೆಸ್ ; ವಿಧಾನಸಭೆಯಲ್ಲಿ ಕೋಲಾಹಲ