ಬಾಗಲಕೋಟೆ ಜಿಲ್ಲೆ ಛಬ್ಬಿ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ರಾಜ್ಯ ಮಹಿಳಾ ಆಯೋಗ ಶನಿವಾರ (ನ.15) ಸೂಚಿಸಿದೆ.
ಛಬ್ಬಿ ಗ್ರಾಮದಲ್ಲಿ ದಲಿತ ಮಹಿಳೆಯ ಮೇಲೆ ಪುರುಷರು ಕ್ಷುಲ್ಲಕ ಕಾರಣಕ್ಕೆ ದೌರ್ಜನ್ಯವೆಸಗಿರುವ ಅಮಾನುಷ ಕೃತ್ಯವು ತಡವಾಗಿ ಬೆಳಕಿಗೆ ಬಂದಿರುವ ಬಗ್ಗೆ ವರದಿಯಾಗಿದೆ. ಮಹಿಳೆಯ ಮೇಲೆ ನಡೆದಿರುವ ಈ ಅಮಾನುಷ ಕೃತ್ಯವನ್ನು ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿ, ಗಂಭೀರವೆಂದು ಪರಿಗಣಿಸಿರುತ್ತದೆ” ಎಂದು ಮಹಿಳಾ ಆಯೋಗದ ಕಾರ್ಯದರ್ಶಿ ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು, ದೌರ್ಜನ್ಯವೆಸಗಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಆಯೋಗಕ್ಕೆ ತಕ್ಷಣ ವರದಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ಛಬ್ಬಿ ಗ್ರಾಮದಲ್ಲಿ ಯುವಕ ಮತ್ತು ಮಹಿಳೆಯೊಬ್ಬರಿಗೆ ಪುರುಷರು ಕಟ್ಟಿಗೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲ್ಲೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.
ಭೂಮಿ ಮಡಿಲು ಸೇರಿದ ವೃಕ್ಷಮಾತೆ: ಸಕಲ ಸರ್ಕಾರಿ ಗೌರವಗಳೊಂದಿಗೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ


