Homeಮುಖಪುಟಮುಸ್ಲಿಂ ವೃದ್ದನ ಮೇಲಿನ ದಾಳಿ ಪ್ರಕರಣ: ಪತ್ರಕರ್ತರ ಮೇಲಿನ FIR ಖಂಡಿಸಿದ ಎಡಿಟರ್ಸ್ ಗಿಲ್ಡ್

ಮುಸ್ಲಿಂ ವೃದ್ದನ ಮೇಲಿನ ದಾಳಿ ಪ್ರಕರಣ: ಪತ್ರಕರ್ತರ ಮೇಲಿನ FIR ಖಂಡಿಸಿದ ಎಡಿಟರ್ಸ್ ಗಿಲ್ಡ್

- Advertisement -
- Advertisement -

ಉತ್ತರ ಪ್ರದೇಶದ ಗಾಜಿಯಾಬಾದ್‌‌ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದ ಮುಸ್ಲಿಂ ವೃದ್ಧನ ಮೇಲೆ ಜೂನ್ 05 ರಂದು ಚಿತ್ರಹಿಂಸೆ ನೀಡಿರುವ ಘಟನೆಯ ಕುರಿತು ವರದಿ, ಟ್ವೀಟ್ ಮಾಡಿದ್ದಕ್ಕೆ ದಿ ವೈರ್ ಸೇರಿ ಹಲವು ಪತ್ರಕರ್ತರ ಮೇಲೆ ಉತ್ತರ ಪ್ರದೇಶದ ಪೊಲೀಸರು FIR ದಾಖಲಿಸಿರುವುದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.

ಸಂತ್ರಸ್ತ ವೃದ್ಧ ಅಬ್ದುಲ್ ಸಮದ್ ಎಂಬುವರು “ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆಟೋದಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಕಾಡಿನೊಳಗೆ ಎಳೆದೊಯ್ದು ಚಿತ್ರ ಹಿಂಸೆ ನೀಡಿದ್ದರು. ಜೈಶ್ರೀರಾಮ್, ವಂದೆ ಮಾತರಂ ಕೂಗುವಂತೆ ಒತ್ತಾಯಿಸಿ ಚಾಕುವಿನಲ್ಲಿ ಗಡ್ಡ ಕತ್ತರಿಸಿ, ಕೋಲಿನಿಂದ ಹಲ್ಲೆ ಮಾಡಿದ್ದಾರೆ” ಎಂದು ಆರೋಪಿಸಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.

ಇದನ್ನು ದಿ ವೈರ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆ ವಿಡಿಯೋವನ್ನು ಹಲವಾರು ಜನ ಟ್ವೀಟ್ ಮಾಡಿ ಖಂಡಿಸಿದ್ದರು. ಆದರೆ ಯುಪಿಯ ಗಾಜಿಯಾಬಾದ್‌ ಪೊಲೀಸರು “ಘಟನೆಯಲ್ಲಿ ಯಾವುದೇ “ಕೋಮು ಆಯಾಮ” ಇಲ್ಲ. ಈ ಘಟನೆಯ ಬಗೆಗಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಕೋಮು ಬಣ್ಣ ಹಚ್ಚಿ ಟ್ವೀಟ್‌ ಮಾಡಿ ಸಮಾಜದ ಶಾಂತಿ ಕದಡಿದ್ದಾರೆ” ಎಂದು ಮೊಹಮ್ಮದ್‌ ಜುಬೈರ್‌, ರಾಣಾ ಆಯೂಬ್‌, ಸಬಾ ನಖ್ವಿ, ಡಿಜಿಟಲ್ ಮಾಧ್ಯಮ ಸಂಸ್ಥೆಯಾದ ದಿ ವೈರ್‌, ಕಾಂಗ್ರೆಸ್‌ ನಾಯಕರಾದ ಸಲ್ಮಾನ್‌ ನಿಜಾಮಿ, ಮಸ್ಕೂರ್‌ ಉಸ್ಮಾನಿ, ಶಮಾ ಮೊಹಮ್ಮದ್‌ ಮತ್ತು ಟ್ವಿಟರ್‌ ಇಂಕ್‌ ಮತ್ತು ಟ್ವಿಟರ್‌ ಇಂಡಿಯಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಈ ಹಿಂದೆಯೂ ಉತ್ತರ ಪ್ರದೇಶ ಪೊಲೀಸರು ಹಲವಾರು ಪತ್ರಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದ ಟ್ರಾಕ್‌ ರೆಕಾರ್ಡ್ ಇದೆ. ಇದು ಸಮಾಜದ ಗಂಭೀರ ವಿಷಯಗಳ ಕುರಿತು ಯಾವುದೇ ಪ್ರತೀಕಾರದ ಭಯವಿಲ್ಲದೆ ಸ್ವಂತಂತ್ರವಾಗಿ ವರದಿ ಮಾಡದಂತೆ ಪತ್ರಕರ್ತರ ಮೇಲೆ ಒತ್ತಡ ತರುವಂತಿದೆ. ಮೂಲಗಳ ಆಧಾರದ ಮೇಲೆ ವರದಿ ಮಾಡುವುದು ಪತ್ರಕರ್ತರ ಕರ್ತವ್ಯ ಮತ್ತು ನಂತರ ಇತರ ಸಂಗತಿಗಳು, ಬೇರೆ ಆಯಾಮ ಕಂಡುಬಂದಲ್ಲಿ ಆ ಆವೃತ್ತಿಯನ್ನು ಸಹ ವರದಿ ಮಾಡುತ್ತಾರೆ. ಪತ್ರಕರ್ತರ ಇಂತಹ ವೃತ್ತಿಪರ ಕೆಲಸಗಳಿಗೆ ಅಡ್ಡಿಪಡಿಸಿ, ಅವರ ಮೇಲೆ ಅಪರಾಧವನ್ನು ಆರೋಪಿಸುವುದು ಸಾಂವಿಧಾನಿಕವಾಗಿ ಸಂರಕ್ಷಿಸಲ್ಪಟ್ಟ ಅವರ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಗಿಲ್ಡ್ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಆ ವಿಡಿಯೋವನ್ನು ಸಾವಿರಾರು ಮಾಧ್ಯಮಗಳು ಟ್ವೀಟ್ ಮಾಡಿದ್ದರೂ ಸಹ ಸರ್ಕಾರ ಮತ್ತು ಅದರ ನೀತಿಗಳ ವಿರುದ್ಧ ವಿಮರ್ಶಾತ್ಮಕ ಮನೋಭಾವ ಹೊಂದಿದ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಮಾತ್ರ ಗುರಿಯಾಗಿಸಿ ಪೊಲೀಸರು ಪ್ರಕರಣ ದಾಖಲಿಸುವ ಮೂಕ ತಾರತಮ್ಯವೆಸಗಿದ್ದಾರೆ ಎಂದು ಗಿಲ್ಡ್ ಆರೋಪಿಸಿದೆ. ಸ್ವತಂತ್ರ ಮಾಧ್ಯಮಗಳಿಗೆ ಕಿರುಕುಳ ನೀಡಲು ವರದಿ ಮಾಡುವಿಕೆ ಮತ್ತು ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸುವ ಕಾನೂನುಗಳ ದುರುಪಯೋಗವನ್ನು ಗಿಲ್ಡ್ ಖಂಡಿಸುತ್ತದೆ ಮತ್ತು ಎಫ್‌ಐಆರ್‌ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: ಯುಪಿ ಮುಸ್ಲಿಂ ವೃದ್ದನ ಮೇಲಿನ ದಾಳಿ ಪ್ರಕರಣ: ಟ್ವಿಟರ್‌‌, ಪತ್ರಕರ್ತರು, ರಾಜಕೀಯ ನಾಯಕರ ವಿರುದ್ದ FIR!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...