ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಪಾವತಿಸಿದ 70 ಮಿಲಿಯನ್ ಯೂರೋ ಲಂಚದ ನಿಜವಾದ ಫಲಾನುಭವಿಗಳನ್ನು ಹಿಡಿಯಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಪ್ರಯತ್ನಿಸುತ್ತಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ಧೇಶನಾಲಯದಿಂದ ರಿಯಾಲ್ಟಿ ಸಂಸ್ಥೆ ಎಂಜಿಎಫ್ ಎಂಡಿ ಶ್ರವಣ್ ಗುಪ್ತಾ ಅವರ ಮೇಲೆ ಆದ ದಾಳಿಗಳು ಹಣದ ವಿಷಯದಲ್ಲಿ ಕೇಂದ್ರೀಕೃತವಾಗಿದ್ದು, ಇದು ಹಲವಾರು ಕಂಪನಿಗಳ ಮೂಲಕ ಕಾಲಾಂತರದಲ್ಲಿ ಸಾಗಿದೆ ಎಂದು ಅವರು ಹೇಳಿದರು.
ಸಿಬಿಐ ಶೀಘ್ರದಲ್ಲೇ ಐದು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಬ್ರಿಟಿಷ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಈಗಾಗಲೇ ಸರ್ಕಾರದಿಂದ ಕಾನೂನು ಅನುಮತಿ ಕೋರಿದೆ. ಮುಂದಿನ ಎರಡು ತಿಂಗಳಲ್ಲಿ ಈ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಗಳು ಕಂಡುಬರುತ್ತವೆ ಎಂದು ಎರಡೂ ಏಜೆನ್ಸಿಗಳ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನ ಎಮಾರ್ ಎಂಜಿಎಫ್ ನಿರ್ದೇಶಕರಾಗಿದ್ದ ಗುಪ್ತಾ ಅವರು 2009 ರಲ್ಲಿ ಇನ್ನೊಬ್ಬ ಯುರೋಪಿಯನ್ ಮಧ್ಯವರ್ತಿ ಗೈಡೋ ಹ್ಯಾಶ್ಕೆ ಅವರನ್ನು ಕಂಪನಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಲು ಸ್ಕ್ಯಾನರ್ನಲ್ಲಿದ್ದಾರೆ ಎಂದು ಹೇಳಿದ್ದರು. ಹ್ಯಾಶ್ಕೆಗಾಗಿ ಏಜೆನ್ಸಿಗಳು ಹುಡುಕಾಡುತ್ತಿದ್ದು, ಅವರು ಇಟಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಗುಪ್ತಾ ಅವರನ್ನು ಈ ಹಿಂದೆ 2016 ರಲ್ಲಿ ಜಾರಿ ನಿರ್ಧೇಶನಾಲಯ ಪ್ರಶ್ನಿಸಿದ್ದವು.
ಈ ಪ್ರಕರಣದಲ್ಲಿ ಈಗಾಗಲೇ ಅರ್ಧ ಡಜನ್ ಚಾರ್ಜ್‌ಶೀಟ್‌ಗಳನ್ನು ಜಾರಿ ನಿರ್ದೇಶನಾಲಯ ಸಲ್ಲಿಸಿದೆ. ಅದರ ಪ್ರಕಾರ 3,727 ಕೋಟಿ ರೂ.ಗಳ 12 ಹೆಲಿಕಾಪ್ಟರ್ ವಿವಿಐಪಿ ಚಾಪರ್ ಒಪ್ಪಂದದ ಮೇಲೆ ಹೆಚ್ಚಿನ ಪಾವತಿಮಾಡುವಂತೆ ಪ್ರಭಾವ ಬೀರಲು ಆಂಗ್ಲೋ-ಇಟಾಲಿಯನ್ ಸಂಸ್ಥೆ ಅಗುಸ್ಟಾವೆಸ್ಟ್‌ಲ್ಯಾಂಡ್ ಇಬ್ಬರು ಮಧ್ಯವರ್ತಿಗಳಾದ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಮತ್ತು ಗೈಡೋ ರಾಲ್ಫ್ ಹ್ಯಾಶ್ಕೆ ಮೂಲಕ ಒಟ್ಟು 12 ಶೇಕಡಾ ಅಂದರೆ ಸುಮಾರು 70 ಮಿಲಿಯನ್ ಯುರೋಗಳಷ್ಟು ಕಿಕ್‌ಬ್ಯಾಕ್ ನೀಡಿದೆ. 2010 ರಲ್ಲಿ ಎಡಬ್ಲ್ಯೂ -101 ಹೆಲಿಕಾಪ್ಟರ್‌ಗಳ ಒಪ್ಪಂದಕ್ಕೆ ಕಂಪನಿಯು ಅರ್ಹತೆ ಪಡೆಯಲು ಈ ಹಣವನ್ನು ವಿನಿಮಯ ಮಾಡಿದೆ ಎಂದು ಹೇಳಲಾಗಿದೆ.
ಸಿಬಿಐ, ಸೆಪ್ಟೆಂಬರ್ 2017 ರಲ್ಲಿ ಸಲ್ಲಿಸಿದ ತನ್ನ ಚಾರ್ಜ್‌ಶೀಟ್‌ನಲ್ಲಿ, ಅಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗೆ ಮೈಕೆಲ್ ಎರಡು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ – ಒಂದು ಯುರೋ 42 ಮಿಲಿಯನ್ (ನಂತರ ಅದನ್ನು 30 ಮಿಲಿಯನ್‌ಗೆ ಇಳಿಲಾಯಿತು), ಮತ್ತು 28 ಮಿಲಿಯನ್ ಯುರೋಗೆ ಎರಡನೇ ಒಪ್ಪಂದವೂ, “ಗೌರವಾನ್ವಿತ ಕುಟುಂಬದೊಂದಿಗೆ” ನಡೆದಿದೆ ಎಂದು ಹೇಳಿದೆ.
ಒಪ್ಪಂದದ ಅಗಸ್ಟಾ ವೆಸ್ಟ್‌ಲ್ಯಾಂಡ್‌ನ ಪ್ರತಿಸ್ಪರ್ಧಿ ಸಿಕೋರ್‌ಸ್ಕಿ 12 ವಿವಿಐಪಿ ಹಾಗೂ ವಿವಿಐಪಿ ಅಲ್ಲದ ಹೆಲಿಕಾಪ್ಟರ್‌ಗಳಿಗೆ ಸುಮಾರು 2,228 ಕೋಟಿ ರೂ. ಬೆಲೆಯನ್ನು ಉಲ್ಲೇಖಿಸಿದ್ದರೆ, ಅಗುಸ್ಟಾವೆಸ್ಟ್‌ಲ್ಯಾಂಡ್ 3,966 ಕೋಟಿ ಹೇಳಿತ್ತು. ಇದು ಸಿಕೋರ್ಸ್ಕಿ ಉಲ್ಲೇಖಿಸಿದ ದರಕ್ಕಿಂತ ಸುಮಾರು 80 ಶೇಕಡಾ ಹೆಚ್ಚಾಗಿದೆ. ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿಯು ಇದನ್ನು 2010 ರಲ್ಲಿ ಅಂತಿಮ ವೆಚ್ಚವು 3,727 ಕೋಟಿಗೆ ಅಂಗೀಕರಿಸಿತು.
“ಈ ಪ್ರಕರಣದಲ್ಲಿ ನಾವು ಕೆಲವು ಹೊಸ ಪಾತ್ರಗಳನ್ನು ಕಂಡುಕೊಂಡಿದ್ದೇವೆ ಇದಕ್ಕಾಗೆ ಗುಪ್ತಾ ಮತ್ತು ಇತರ ಕೆಲವು ಜನರಿಗೆ ಸಂಬಂಧಿಸಿರುವ ಏಳು ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಲು ನಿರ್ಧರಿಸಲಾಯಿತು. ಕೆಲವು ಉದ್ಯಮಿಗಳು ಮತ್ತು ಖಾಸಗಿ ಕಂಪನಿಗಳ ಮೂಲಕ ಲಾಭ ಪಡೆದ ನಿಜವಾದ ಫಲಾನುಭವಿಗಳಾದ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ನಾವು ಮತ್ತಷ್ಟು ತನಿಖೆ ಮಾಡುತ್ತಿದ್ದೇವೆ ”ಎಂದು ಜಾರಿ ನಿರ್ಧೇಶನಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶೀಘ್ರದಲ್ಲೇ ಗುಪ್ತಾ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.


