ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಇಂದು ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು 85 ರನ್ನುಗಳ ಅಂತರದಲ್ಲಿ ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರುಗಳಲ್ಲಿ 184/4 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ 185 ರನ್‌ಗಳ ಸವಾಲು ಬೆನ್ನಟ್ಟಿದ ಭಾರತ 19.1 ಓವರಿನಲ್ಲಿ ಕೇವಲ 99 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಗ್ಗರಿಸಿತು.
ಟಾಸ್ ಗೆದ್ದ ಆಸ್ಟ್ರೇಲಿಯ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಲಿಸಾ ಹೀಲಿ ಮತ್ತು ಬೆಥ್ ಮೂನಿ ಕ್ರಮವಾಗಿ 75, 78 ರನ್ ಗಳಿಸಿದರಿಂದ ಆಸ್ಟ್ರೇಲಿಯಾ ತಂಡವು 20 ಓವರಿಗೆ 184 ರನ್ನುಗಳನ್ನು ಪೇರಿಸಿಲು ಸಾಧ್ಯವಾಯಿತು.
ಉತ್ತಮ ಆಟವಾಡುತ್ತಿದ್ದ ಅಲಿಸಾ ಭಾರತದ ರಾಧಾ ಯಾದವ್ ಅವರ ಎಸೆತಕ್ಕೆ ವೇದ ಕೃಷ್ಣಮೂರ್ತಿ ಅವರಿಗೆ ಕ್ಯಾಚ್ ಕೊಟ್ಟು ಔಟಾದರು. ಬೆಥ್ ಮೂನಿ ಕೊನೆವರೆಗೂ ಔಟಾಗದೆ 78 ರನ್ನುಗಳನ್ನು ತಂಡಕ್ಕೆ ನೀಡಿದರು.
185 ರನ್‌ಗಳ ಗುರಿ ಬೆನ್ನ ಭಾರತ, ಶಫಾಲಿ ವರ್ಮ ಮತ್ತು ಸ್ಮೃತಿ ಮಂದನ ಮೊದಲಿಗರಾಗಿ ಬ್ಯಾಟ್ ಬೀಸಿ ಬಹುಬೇಗನೇ ಔಟಾದರು. ನಂತರ ದೀಪ್ತಿ ಶರ್ಮ, ವೇದ ಕೃಷ್ಣಮೂರ್ತಿ, ರೀಚಾ ಘೋಷ್ ಕ್ರಮವಾಗಿ 33, 19, 18 ರನ್ನುಗಳನ್ನು ನೀಡಿದರೂ ಭಾರತ ತಂಡವೂ 19.1 ಓವರಿನಲ್ಲಿ 99 ರನ್ನುಗಳನ್ನಷ್ಟೇ ಪೇರಿಸಲು ಸಾಧ್ಯವಾಗಿ ಸೋಲೊಪ್ಪಿಕೊಂಡಿತು.
ಸಂಕ್ಷಿಪ್ತ ಪಟ್ಟಿ:
ಆಸ್ಟ್ರೇಲಿಯಾ 184/4 (20.0 / 20)
ಅಲಿಸಾ ಹೀಲಿ 75 ರನ್ (39 ಬಾಲ್ ಗಳಲ್ಲಿ)
ಬೆತ್ ಮೂನಿ ಅಜೇಯ 78 ರನ್ (54 ಬಾಲ್ ಗಳಲ್ಲಿ)
ಮೆಗ್ ಲ್ಯಾನಿಂಗ್ 16 ರನ್ (15 ಬಾಲ್ ಗಳಲ್ಲಿ)
ಆಶ್ಲೀ ಗಾರ್ಡ್ನರ್ 2 ರನ್ (3 ಬಾಲ್ ಗಳಲ್ಲಿ)
ರಾಚೆಲ್ ಹೇನ್ಸ್ 4 ರನ್ (5 ಬಾಲ್ ಗಳಲ್ಲಿ)
ನಿಕೋಲಾ ಕ್ಯಾರಿ ಅಜೇಯ 5 ರನ್ (5 ಬಾಲ್ ಗಳಲ್ಲಿ)
ಹೆಚ್ಚುವರಿ 4 ರನ್ಗಳು
ಒಟ್ಟು 184/4 20.0
ಭಾರತ 99 (19.1 / 20)
ಶಫಾಲಿ ವರ್ಮಾ 2 ರನ್ (3 ಬಾಲ್ ಗಳಲ್ಲಿ)
ಸ್ಮೃತಿ ಮಂದಾನ 11 ರನ್ (8 ಬಾಲ್ ಗಳಲ್ಲಿ)
ತಾನಿಯಾ ಭಾಟಿಯಾ 2 ರನ್ (4 ಬಾಲ್ ಗಳಲ್ಲಿ)
ಜೆಮಿಮಾ ರೊಡ್ರಿಗಸ್ 2 ರನ್
ಹರ್ಮನ್‌ಪ್ರೀತ್ ಕೌರ್ 4 ರನ್ (7 ಬಾಲ್ ಗಳಲ್ಲಿ)
ದೀಪ್ತಿ ಶರ್ಮಾ 33 ರನ್ (35 ಬಾಲ್ ಗಳಲ್ಲಿ)
ವೇದ ಕೃಷ್ಣಮೂರ್ತಿ 19 ರನ್ (24 ಬಾಲ್ ಗಳಲ್ಲಿ)
ರಿಚಾ ಘೋಷ್ 18 ರನ್ (18 ಬಾಲ್ ಗಳಲ್ಲಿ)
ಶಿಖಾ ಪಾಂಡೆ 2 ರನ್ (4 ಬಾಲ್ ಗಳಲ್ಲಿ)
ರಾಧಾ ಯಾದವ್ 1ರನ್ (2 ಬಾಲ್ ಗಳಲ್ಲಿ)
ಪೂನಂ ಯಾದವ್ 1 ರನ್ (5 ಬಾಲ್ ಗಳಲ್ಲಿ)
ರಾಜೇಶ್ವರಿ ಗಾಯಕ್ವಾಡ್ ಅಜೇಯ 1 ರನ್ (3 ಬಾಲ್ ಗಳಲ್ಲಿ)
ಹೆಚ್ಚುವರಿ 5 ರನ್ಗಳು
ಒಟ್ಟು 99/10 (19.1 / 20)
ಫಲಿತಾಂಶ ಆಸ್ಟ್ರೇಲಿಯಾಕ್ಕೆ 85ರನ್‌ಗಳ ಗೆಲುವು.


