ಉತ್ತರ ಪ್ರದೇಶದ ಅಯೋಧ್ಯೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಹ್ನವಾ ಗ್ರಾಮದ ಹೊರಗೆ ಶನಿವಾರ 22 ವರ್ಷದ ದಲಿತ ಯುವತಿಯ ನಗ್ನ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದ್ದು, ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ ಎಂದು TNIE ಶನಿವಾರ ವರದಿ ಮಾಡಿದೆ. ಅಯೋಧ್ಯೆ
ಸಂತ್ರಸ್ತ ಯುವತಿಯು ಗುರುವಾರ ರಾತ್ರಿಯಿಂದ ನಿಗೂಢವಾಗಿ ಕಾಣೆಯಾಗಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ನಂತರ, ಕೈಕಾಲುಗಳನ್ನು ಮುರಿದು ಕಣ್ಣುಗಳು ಛಿದ್ರಗೊಂಡಿದ್ದ ಯುವತಿಯ ನಗ್ನ ಮೃತದೇಹವನ್ನು ಗ್ರಾಮದ ಹೊರಗಿನ ಒಣಗಿದ ಚರಂಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಯುವತಿಯ ಕುಟುಂಬ ಮತ್ತು ಗ್ರಾಮಸ್ಥರು ಕೂಡಾ ಇದನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ಶಂಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಾಪತ್ತೆಯಾದ ಯುವತಿಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ, ಅವರ ಕುಟುಂಬಿಕರು ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತ ಯುವತಿಯ ನಗ್ನ ಮೃತದೇಹವನ್ನು ಯುವತಿಯ ಅಕ್ಕನ ಪತಿ ಗ್ರಾಮದ ಹೊರಗಿನ ಒಣಗಿದ ಚರಂಡಿಯಲ್ಲಿ ಕಂಡುಕೊಂಡಿದ್ದಾರೆ. ಅಯೋಧ್ಯೆ
ಯುವತಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು, ಇಡೀ ದೇಹದ ಮೇಲೆ ಗಾಯದ ಗುರುತುಗಳಿದ್ದವು ಮತ್ತು ಆಕೆಯ ಬಟ್ಟೆಗಳು ರಕ್ತದಲ್ಲಿ ತೊಯ್ದಿದ್ದು ಮೃತದೇಹದಿಂದ ಸ್ವಲ್ಪ ದೂರದಲ್ಲಿ ಕಂಡುಬಂದಿತ್ತು. ಪ್ರಾಥಮಿಕವಾಗಿ ಇದು ಕೊಲೆ ಪ್ರಕರಣದಂತೆ ಕಂಡುಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಶರ್ಮಾ ತಿಳಿಸಿದ್ದಾರೆ.
ಮತ್ತೊಂದೆಡೆ, ಶವವನ್ನು ನೋಡಿದಾಗ ಕುಟುಂಬದ ಮಹಿಳೆಯರು ಪ್ರಜ್ಞಾತಪ್ಪಿ ಬಿದ್ದಿದ್ದಾರೆ. ಸಂತ್ರಸ್ತೆಯ ಅಕ್ಕ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಗ್ರಾಮದಲ್ಲಿ ನಡೆಯಲಿರುವ ಧಾರ್ಮಿಕ ‘ಕಥಾ ವಚನ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯಿಂದ ಹೊರಟಿದ್ದರು ಎಂದು ಹೇಳಿದ್ದಾರೆ.
ಘಟನೆಯ ತನಿಖೆ ಈಗಾಗಲೇ ಆರಂಭವಾಗಿದೆ ಮತ್ತು ಅತ್ಯಾಚಾರ ಆರೋಪದ ಸತ್ಯಾಸತ್ಯತೆ ಶವಪರೀಕ್ಷೆ ವರದಿಯ ನಂತರವೇ ತಿಳಿದುಬರುತ್ತದೆ. ನಾವು ಪ್ರಕರಣವನ್ನು ದಾಖಲಿಸಿದ್ದು, ಈ ಸಂಬಂಧ ಗ್ರಾಮಸ್ಥರನ್ನು ವಿಚಾರಣೆ ಮಾಡಲು ತಂಡಗಳನ್ನು ರಚಿಸಿದ್ದೇವೆ ಎಂದು ಎಂದು ವೃತ್ತ ಅಧಿಕಾರಿ ಅಶುತೋಷ್ ತಿವಾರಿ ಅವರು ಹೇಳಿದ್ದಾರೆ.
ಈ ಮಧ್ಯೆ, ಸಮಾಜವಾದಿ ಪಕ್ಷದ ಸ್ಥಳೀಯ ನಾಯಕ ತೇಜ್ ನಾರಾಯಣ್ ಪಾಂಡೆ ಕುಟುಂಬವನ್ನು ಭೇಟಿ ಮಾಡಿ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ. ಫೆಬ್ರವರಿ 5 ರಂದು ನಡೆಯಲಿರುವ ಹೈ-ಪಾಯಿಂಟ್ ಮಿಲ್ಕಿಪುರ ಉಪಚುನಾವಣೆಯ ಹಿನ್ನೆಲೆಯಲ್ಲಿ ಇದು ಸೂಕ್ಷ್ಮ ವಿಷಯವಾಗಿ ಪರಿಣಮಿಸಲಿದೆ ಎಂದು ನಂಬಲಾಗಿದೆ.
ಇದನ್ನೂಓದಿ: Union Budget 2025 | ಗುಂಡಿನ ಗಾಯಕ್ಕೆ ಬ್ಯಾಂಡ್ ಏಡ್ ಚಿಕಿತ್ಸೆ – ರಾಹುಲ್ ಗಾಂಧಿ
https://naanugauri.com/union-budget-2025-gunshot-wound-band-aid-rahul-gandhi/


