ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ತನ್ನ ಪತ್ನಿಗೆ ಮುತ್ತು ಕೊಟ್ಟಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ನಿಂದಿಸಿ, ಗುಂಪು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂತ್ರಸ್ತ ವ್ಯಕ್ತಿಯನ್ನು ಅವರ ಹೆಂಡತಿಯಿಂದ ಬಿಡಿಸಿ ಎಳೆದೊಯ್ದು ಸುತ್ತಮುತ್ತಲಿನ ಹಲವಾರು ದುಷ್ಕರ್ಮಿಗಳು ಥಳಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಅಯೋಧ್ಯೆಯಲ್ಲಿ ಇಂತಹ ‘ಅಸಭ್ಯ’ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ವೇಳೆ ಪತ್ನಿಯು ತನ್ನ ಗಂಡನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆಯಾದರೂ, ಅವರು ಅದರಿಂದ ವಿಫಲರಾಗುತ್ತಾರೆ. ಕೊನೆಗೆ ದಂಪತಿಗಳನ್ನು ಜನರ ಗುಂಪು ನೀರಿನಿಂದ ಹೊರಗೆ ಎಳೆದು ತಂದಿದೆ.
ಇದನ್ನೂ ಓದಿ: ಉತ್ತರಪ್ರದೇಶ: ಝೊಮಾಟೊ ಫುಡ್ ಡೆಲಿವರಿ ಯುವಕನಿಗೆ ಜಾತಿ ನಿಂದನೆ, ಹಲ್ಲೆ; FIR ದಾಖಲು
ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ.
प्रभारी निरीक्षक थाना कोतवाली अयोध्या को जांच व आवश्यक विधिक कार्यवाही हेतु निर्देशित किया गया है।
— AYODHYA POLICE (@ayodhya_police) June 22, 2022
“ಪ್ರಭಾರಿ ಇನ್ಸ್‌ಪೆಕ್ಟರ್ ಕೊತ್ವಾಲಿ ಅಯೋಧ್ಯಾ ಅವರಿಗೆ ತನಿಖೆ ಮತ್ತು ಅಗತ್ಯ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ” ಎಂದು ಅಯೋಧ್ಯೆ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, “ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬಹುದು, ಆದರೆ ಮುತ್ತು ಮಾತ್ರ ಕೊಡಬಾರದೆ” ಎಂದು ಪ್ರಶ್ನಿಸಿದ್ದಾರೆ.
You can Piss in public but not kiss. https://t.co/TbMb7uMzuq
— maverick (@DMcgregorX) June 22, 2022


