ಶಸ್ತ್ರ ಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಒಕ್ಕೂಟದ (IMA) ವತಿಯಿಂದ ಫೆಬ್ರವರಿ 15 ರಿಂದ ಮಾರ್ಚ್ 31ರವರೆಗೂ ಸಾಮೂಹಿಕ ಮನವಿ ಸಲ್ಲಿಕೆ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.
ಹಲ್ಲಿನ ಶಸ್ತ್ರ ಚಿಕಿತ್ಸೆ ಸೇರಿದಂತೆ ಮುಂತಾದ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರವು 2020ರಲ್ಲಿ ಅನುಮತಿ ನೀಡಿತ್ತು. ಈ ಕುರಿತು ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಸಂಸ್ಥೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ವಿರೋಧಿಸಿ ದೇಶವ್ಯಾಪಿ ಖಾಸಗೀ ಆಸ್ಪತ್ರೆಗಳು ಮುಷ್ಕರ ನಡೆಸಿದ್ದವು.
ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ
“ಉದ್ದೇಶಿತ ಅಧಿಸೂಚನೆಯು ಸಾಕಷ್ಟು ಗೊಂದಲ ಮೂಡಿಸಿದ್ದು, ಇದನ್ನು ತಕ್ಷಣವೇ ಹಿಂಪಡೆಯಬೇಕು. ಇದು, ಪ್ರಾಯೋಗಿಕವಲ್ಲದ, ಅವೈಜ್ಞಾನಿಕ ಮತ್ತು ಅನೈತಿಕವಾದ ಅಧಿಸೂಚನೆ. ಸಾಮೂಹಿಕ ಮನವಿ ಚಳವಳಿ ಜೊತೆಗೆ, ನಕಾರಾತ್ಮಕ ಪರಿಣಾಮ ಕುರಿತು ಜನಜಾಗೃತಿ ಮೂಡಿಸಲಾಗುವುದು. ಈ ಬಗ್ಗೆ ಗಮನಸೆಳೆಯಲು ಫೆಬ್ರವರಿ 1ರಿಂದ 14ರವರೆಗೂ ದೇಶದಾದ್ಯಂತ ಧರಣಿ-ಪ್ರತಿಭಟನೆಯನ್ನು ನಡೆಸಲಾಗಿದೆ” ಎಂದು IMA ಹೇಳಿಕೆಯಲ್ಲಿ ತಿಳಿಸಿದೆ.
IMA ಸದಸ್ಯರು, ಎಲ್ಲ ವೈದ್ಯರ ಸಂಘಟನೆಗಳು, ವೈದ್ಯಕೀಯ ವಿದ್ಯಾರ್ಥಿಗಳು, ಮಹಿಳಾ ವೈದ್ಯರು ಈ ಅಧಿಸೂಚನೆಯ ವಿರುದ್ಧ ಜನಜಾಗೃತಿ ಮೂಡಿಸುವರು. ಆಧುನಿಕ ವೈದ್ಯಪದ್ಧತಿಯ ಆಸ್ಪತ್ರೆಗಳು ವೈಜ್ಞಾನಿಕ ಮತ್ತು ನೈತಿಕ ಕ್ರಮದ ಶಸ್ತ್ರಚಿಕಿತ್ಸೆ ಪರಿಣತಿಯ ಮಹತ್ವ ಕುರಿತು ಅರಿವು ಮೂಡಿಸುವರು ಎಂದು ಹೇಳಿದೆ.
ಈ ಹಿಂದೆಯೂ ಸಹ ಇದಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು.
ಇದನ್ನೂ ಓದಿ: ನನ್ನನ್ನು ಹೆದರಿಸೋಕೆ ನೋಟಿಸ್ ನೀಡಿದ್ದಾರೆ, ಫೆ. 21ರೊಳಗೆ ಹಿಂಪಡೆಯುತ್ತಾರಂತೆ: ಯತ್ನಾಳ್


