ಬೆಂಗಳೂರಿನ ನಡುರಸ್ತೆಯಲ್ಲಿ ರೌಡಿ ಶೀಟರ್ ಒಬ್ಬ ಯುವಕನನ್ನು ವಿವಸ್ತ್ರಗೊಳಿಸಿ ಓಡುವಂತೆ ಮಾಡಿರುವ ಅಘಾತಕಾರಿ ಘಟನೆ ನಡೆದಿದೆ. ಸುಮಾರು ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಸೋಮವಾರವಷ್ಟೇ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಬೆಂಗಳೂರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆರೋಪಿಯನ್ನು ರಾಜಗೋಲ್ಪನಗರ ಠಾಣೆಯ ರೌಡಿ ಶೀಟರ್ ಪವನ್ (28) ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಪವನ್ ಮತ್ತು ಅವರ ಸಹಚರರ ನಡುವಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ, ಅವರ ಸಹಾಯಕರೊಬ್ಬರು ಘಟನೆಯ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದು, ಹಾಗಾಗಿ ಇದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#BreakingNews | #Bengaluru shocker: A man made to strip and run naked on the street by a Rowdy sheeter. This incident has raised questions about Law & Order in the City@harishupadhya @SakshiLitoriya_ pic.twitter.com/FP5jD3lfjY
— News18 (@CNNnews18) September 16, 2024
ಒಂದೂವರೆ ತಿಂಗಳ ಹಳೆಯದು ಎಂದು ಶಂಕಿಸಲಾದ ವೀಡಿಯೊದಲ್ಲಿ ಪವನ್ ಯುವಕನನ್ನು ರಸ್ತೆಯ ಮಧ್ಯದಲ್ಲಿ ವಿವಸ್ತ್ರಗೊಳಿಸಿ, ಬೆತ್ತಲೆಯಾಗಿ ಓಡುವಂತೆ ಒತ್ತಾಯಿಸುವುದು ದಾಖಲಾಗಿದೆ ತೋರಿಸುತ್ತದೆ. ಅದಾಗ್ಯೂ, ಸಂತ್ರಸ್ತ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿಲ್ಲ ಎಂದು ವರದಿಯಾಗಿದೆ. ಆದರೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪವನ್ ಮತ್ತು ಸಂತ್ರಸ್ತ ಯುವಕನಿಗೆ ಹುಡುಕಾಟ ನಡೆಸುತ್ತಿದ್ದಾರೆ. ಬೆಂಗಳೂರು
ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ಒಳ ಮೀಸಲಾತಿ ಜಾರಿಗೆ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ’ ಆಗ್ರಹ
ಇದೇ ವೇಳೆ ಭಾನುವಾರ ರಾತ್ರಿ ಇದೇ ರೌಡಿ ಶೀಟರ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿವಾಸಪುರದಲ್ಲಿ ವಿಶ್ವಾಸ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಪಶ್ಚಿಮ) ಎಸ್ ಗಿರೀಶ್, ವಿಶ್ವಾಸ್ ಮತ್ತು ಅವನ ಸ್ನೇಹಿತ ತನ್ನ ಚಟುವಟಿಕೆಗಳ ಬಗ್ಗೆ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದ ಪವನ್ ವಿಶ್ವಾಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಪವನ್ ವಿಶ್ವಾಸ್ ಮೇಲೆ ಆಯುಧದಿಂದ ಹಲ್ಲೆ ನಡೆಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಸೋಮವಾರ ವಿಶ್ವಾಸ್ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಹಲ್ಲೆ ಕುರಿತು ದೂರು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ವಿಡಿಯೊನೋಡಿ: ರಾಜ್ಯಗಳ ಅಸ್ಮಿತೆ ಹಕ್ಕು ಮತ್ತು ಪಾಲಿನ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನ ಚಾಲನಾ ಸಭೆ


