Homeಕರ್ನಾಟಕಬೆಂಗಳೂರು | ಮೂರು ದಿನಗಳ 'ಯುವಸಮುದಾಯಕ್ಕಾಗಿ ಗಾಂಧಿ ಕಾರ್ಯಗಾರ'ಕ್ಕೆ ಆಹ್ವಾನ

ಬೆಂಗಳೂರು | ಮೂರು ದಿನಗಳ ‘ಯುವಸಮುದಾಯಕ್ಕಾಗಿ ಗಾಂಧಿ ಕಾರ್ಯಗಾರ’ಕ್ಕೆ ಆಹ್ವಾನ

- Advertisement -
- Advertisement -

‘ಕರ್ನಾಟಕ ಗಾಂಧಿ ಸ್ಮಾರಕ ನಿಧಿ – ಬೆಂಗಳೂರು’ ಮೂರು ದಿನಗಳ ‘ಯುವಸಮುದಾಯಕ್ಕಾಗಿ ಗಾಂಧಿ ಕಾರ್ಯಗಾರವನ್ನು ಮೇ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಿದೆ. ಕಾರ್ಯಾಗಾರದಲ್ಲಿ ಕೇವಲ 40 ಜನಕ್ಕೆ ಮಾತ್ರ ಅವಕಾಶವಿದ್ದು 18 ರಿಂದ 35 ವರ್ಷದ ಎಲ್ಲರೂ ಭಾಗವಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಆಧುನಿಕ ಮಾಧ್ಯಮಗಳ ಸಾಧ್ಯತೆ, ಆಯ್ಕೆಗಳು ಮತ್ತು ಪ್ರಸಾರಗಳ ಪ್ರಯೋಗಗಳನ್ನು ಈ ಶಿಬಿರದಲ್ಲಿ ಹಿರಿಯ ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ತರಬೇತಿ, ಸಲಹೆ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಕಾರ್ಯಗಾರದಲ್ಲಿ ಪೋಸ್ಟರ್ ಮಾಡುವುದು, ಗಾಂಧಿ ಸಾಹಿತ್ಯ, ದೃಶ್ಯ ಮಾಧ್ಯಮದಲ್ಲಿ ಗಾಂಧಿ ಅರಿವು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ ತತ್ವಗಳ ಪ್ರಸಾರ, ಸಾಮಾಜಿಕ ಜಾಲತಾಣಗಳ ಮೂಲಕ ಗಾಂಧಿ ತತ್ವಗಳನ್ನು ಪ್ರಸಾರ ಮಾಡುವ ಬಗ್ಗೆ ತರಬೇತಿ, ಆಡಿಯೋ, ವಿಡಿಯೋ ಎಡಿಟಿಂಗ್, ಕ್ಯಾಮೆರಾ ಬಳಕೆ ಮತ್ತು ಯೂಟ್ಯೂಬ್ ಚಾನಲ್ ನಿರ್ವಹಣೆ ಬಗೆಗೆ ಮಾರ್ಗದರ್ಶನ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಕಾರ್ಯಗಾರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ ಎಂದು ಆಯೋಜಕರು ತಿಳಿಸಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು 9008149149 (ವಿಜಯ್ ಹನಕೆರೆ, ನಿರ್ದೇಶಕರು ) ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕೆಂದು ಗಾಂಧಿ ಸ್ಮಾರಕ ನಿಧಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಆಪರೇಷನ್ ಸಿಂಧೂರ್ | ಪಾಕಿಸ್ತಾನದ 9 ಸ್ಥಳಗಳ ಮೇಲೆ ದಾಳಿ: ಭಾರತ ಪ್ರತಿಪಾದನೆ

ಆಪರೇಷನ್ ಸಿಂಧೂರ್ | ಪಾಕಿಸ್ತಾನದ 9 ಸ್ಥಳಗಳ ಮೇಲೆ ದಾಳಿ: ಭಾರತ ಪ್ರತಿಪಾದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -