ಕೊರೊನಾ ಕಾರಣಕ್ಕೆ ಹೇರಿದ ಲಾಕ್‌ಡೌನ್‌ಗೆ 50 ದಿನಗಳಾಗುತ್ತಾ ಬಂದಿದೆ. ಕೆಲಸವಿಲ್ಲದೇ ಸಂಕಷ್ಟದಲ್ಲಿ ಸಿಕ್ಕಿಕೊಂಡ ಬಡವರ, ಕೂಲಿಜನರ ಗೋಳು ಹೇಳತೀರದು. ಇಂತಹ ಸಂಕಷ್ಟದ ಸಮಯದಲ್ಲಿ ಬಡನೇಕಾರ ಕಾರ್ಮಿಕರ ಮೇಲೆ ಬೆಳಗಾವಿಯ ಪೊಲೀಸರು ದರ್ಪ ಮೆರೆದಿರುವ ಅಮಾನವೀಯ ಘಟನೆ ವರದಿಯಾಗಿದೆ.
ನಡೆದುದಿಷ್ಟು..
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್‌ರವರ ಪರವಾಗಿ ಅದೇ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಗೀತಾ ಸುತಾರರವರು ಕರಪತ್ರ ಮತ್ತು ಅರ್ಜಿಯೊಂದನ್ನು ಮುದ್ರಿಸಿ ಖಾಸಬಾಗದ ಬಸವೇಶ್ವರ ಸರ್ಕಲ್‌ನಲ್ಲಿ ಹಂಚಲಾಗುವುದು ಎಂದು ಘೋಷಿಸಿದ್ದರು. ಲಾಕ್‌ಡೌನ್ ಕಾರಣಕ್ಕೆ ತೊಂದರೆಯಲ್ಲಿರುವ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಲು ಅರ್ಜಿಗಳನ್ನು ನೀಡುತ್ತಿದ್ದು, ಅದನ್ನು ತುಂಬಿದವರಲ್ಲಿ ಅರ್ಹರಿಗೆ ಮಾತ್ರ ಕಿಟ್ ವಿತರಿಸಲಾಗುವುದು ಎಂದು ಅದರಲ್ಲಿ ಬರೆದಿದ್ದು ಮೇ 03ರಂದು ಅರ್ಜಿ ತುಂಬ ಬೇಕು ಎಂದು ಪ್ರಕಟಣೆ ಹೊರಡಿಸಿದ್ದರು.
ಇದನ್ನು ಕಂಡ ಕೆಲ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದರು. ವಡಂಗಾವ್‌ನ ಖಾಸಬಾಗದಲ್ಲಿ ಬಹುತೇಕ ನೇಕಾರ ಸಮುದಾಯ ಬಡ ಕಾರ್ಮಿಕರೆ ವಾಸಿಸುತ್ತಿದ್ದು, ಅವರೆಲ್ಲರೂ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಅವರ ಪ್ರತಿ ಮನೆಗೂ ರೇಷನ್ ಕಿಟ್ ವಿತರಿಸುವುದನ್ನು ಬಿಟ್ಟು ಅರ್ಜಿ ಸಲ್ಲಿಸಿ. ಸಾಲಾಗಿ ನಿಲ್ಲಿ ಎಂದು ಆದೇಶ ಹೊರಡಿಸಿರುವುದು ಎಷ್ಟು ಸರಿ? ನಿಮಗೆ ಮತ ಹಾಕಿದ ಪ್ರಜೆಗಳನ್ನು ಇಷ್ಟು ಕೀಳಾಗಿ ಕಾಣುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಎಂಥ ಚೀಪ್ ಗಿಮಿಕ್ ಗಳಪ್ಪ ನಮ್ಮ ಜನ ನಾಯಕರದ್ದು.. ???ಇಲ್ಲಿ ನೋಡಿ.. ಇವರು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ್….
Posted by Sarala Satpute on Saturday, May 2, 2020
ಅಲ್ಲದೇ ಅಲ್ಲಿನ ಜನರು ಈ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ನಂತರ ಶಾಸಕರು ಹಂಚಿದ್ದ ರೇಷನ್ ಕಿಟ್‌ಗಳು ಎರಡು ದಿನಕ್ಕೂ ಸಾಲುವುದಿಲ್ಲ, ಇದು ಪ್ರಚಾರ ತಂತ್ರವೇ ಹೊರತು ಇದರಿಂದ ಬಡವರಿಗೆ ಏನೇನು ಪ್ರಯೋಜನವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರಿದ್ದರು.
ನಾವು ಇರಬೇಕೋ ಇಲ್ಲ ಸಾಯಬೇಕೋ? ನೇಕಾರರ ಆಕ್ರೋಶ
ನಾವು ಇರಬೇಕೋ ಇಲ್ಲ ಸಾಯಬೇಕೋ? ಬೆಳಗಾವಿಯಲ್ಲಿ ನೇಕಾರರ ಆಕ್ರೋಶ
Posted by Naanu Gauri on Wednesday, May 13, 2020
ಆದರೆ ಮೇ 11ರ ರಾತ್ರಿ ಕೆಲವು ಪೊಲೀಸ್ ಅಧಿಕಾರಿಗಳು ಬಂದು ಖಾಸಬಾಗದಲ್ಲಿ ವಾಸವಿದ್ದ ಸಾಮಾಜಿಕ ಕಾರ್ಯಕರ್ತ ಗಣಪತಿ ಸೊಂಟಕ್ಕಿಯವರನ್ನು ಪೊಲೀಸ್ ಠಾಣೆಗೆ ಬಾ ಎಂದು ಕರೆದಿದ್ದಾರೆ. ಅವರು ಕಾರಣ ಕೇಳಿದಾಗ ನಿಮ್ಮ ಮೇಲೆ ಕಂಪ್ಲೈಂಟ್ ಆಗಿದೆ ಎಂದು ಪೊಲೀಸರು ಉತ್ತರಿಸಿದ್ದಾರೆ. ಎಫ್‌ಆರ್‌ಐ ತೋರಿಸಿದರೆ ಮಾತ್ರ ನಾವು ಪೊಲೀಸ್ ಠಾಣೆಗೆ ಬರುತ್ತೇವೆ ಇಲ್ಲದಿದ್ದರೆ ಬರುವುದಿಲ್ಲ ಎಂದು ಗಣಪತಿಯವರು ಉತ್ತರಿಸಿದ್ದಾರೆ. ನಂತರ ಪೊಲೀಸರು ವಿಡಿಯೋ ಹೇಳಿಕೆ ನೀಡಿದ್ದ ಹಲವು ಕುಟುಂಬಗಳಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ, ಮೂರು ಜನ ಕಾರ್ಮಿಕರನ್ನು ಬೆಳಿಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಗೆ ಕರೆದೊಯ್ದು ಸಂಜೆವರೆಗೂ ಇರಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ ಎಂದು ಗಣಪತಿಯವರು ದೂರಿದ್ದಾರೆ.
ಜವಾಬ್ದಾರಿ ಹುದ್ದೆಯಲ್ಲಿರು ಪೊಲೀಸ್ ಅಧಿಕಾರಿಗಳೇ ಯಾವುದೇ ಘಟನೆ ನಡೆದ ಸಂಧರ್ಭದಲ್ಲಿ ಸ್ಥಳಕ್ಕೆ ಬೇಗನೆ ಬಾರದ ನೀವುಗಳು ಯಾವುದೇ ನೋಟೀಸು ಇಲ್ಲದೇ ವಿಚಾರಣೆಗೆ ಕರೆದೊಯ್ಯಲು ಪೊಲೀಸ್ ವಾಹನಸಹಿತ ಎಷ್ಟು ಬೇಗನೆ ಹಾಜರಾದ ನೀವುಗಳು ಯಾವ ಕಾರಣಕ್ಕೆ ಬಂದು ವಾಪಸು ಹೋಗಿದ್ದಿರಿ? ನಾನೇನು ಕೊಲೆ ಮಾಡಿದ್ದೇನಾ, ಇಲ್ಲಾ ಕಳ್ಳತನ ಮಾಡಿದ್ದೇನಾ, ಇಲ್ಲಾ "ಬಾಂಬ್ " ಇಡಲು ಹೊರಟಿದ್ದೇನಾ ಜನಗಳ ಪರವಾಗಿ ಶಾಸಕರನ್ನು ಪ್ರಶ್ನೆ ಮಾಡಿದ್ದಕ್ಕೆ ತಾನೇ ನೀವುಗಳು ಇಷ್ಟೇಲ್ಲಾ ಸಾಹಸ ಮಾಡಿದ್ದು, ಶಾಸಕತ್ವ ಅನ್ನೋದು ಶಾಸಕರ ವಯಕ್ತಿಕ ಆಸ್ತಿಯಲ್ಲ ತಪ್ಪು ಅನಿಸಿದ್ದನ್ನ ಪ್ರಶ್ನೆಮಾಡುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೆ ಇದೆ. ಇದರ ಬಗ್ಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಈ ಘಟನೆ ಬಗ್ಗೆ ನನಗೆ ಬಹಿರಂಗವಾಗಿ ಉತ್ತರ ನೀಡಿ. ( ಇನ್ನು ಇಂತಹ ಕೀಳು ಮಟ್ಟದ ಗಿಮಿಕ್, ಮಾಡಿಸುವ ಧುರುಳರೇ ಸರಿಯಾಗಿ ಕೇಳಿಸಿಕೊಳ್ಳಿ, ಇವತ್ತು ನನಗೆ ನಾಳೆ ಆ( ಸರಳಾ ಸಾತಪುತೆ ) ಹೆಣ್ಣುಮಗಳಿಗೆ ಈ ರೀತಿಯ ಹೆದರಿಸುವ ಎಲ್ಲಾತರದ ಪ್ರಯತ್ನದಲ್ಲಿ ಇರಬಹುದು ಆದರೆ ಇದಕ್ಕೆಲ್ಲ ಹೆದರುವದಿಲ್ಲ ಇಂತಹ ಪ್ರಯತ್ನಗಳು ನಡೆದರೆ, ಮುಂದೆ ರಾಜ್ಯ ಮಟ್ಟದಲ್ಲೂ ಚೆರ್ಚೆಯಾಗುವದರಲ್ಲಿ ಯಾವುದೇ ಸಂದೇಹವಿಲ್ಲಾ. ) ಇನ್ನು ಇಂತಹ ಸಣ್ಣತನವನ್ನು ಬಿಟ್ಟು ನಿಮ್ಮಲ್ಲಿ ಧೈರ್ಯ ವಿದ್ದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಧ್ಯಮ, ಹಾಗೂ ಬಹಿರಂಗವಾಗಿ ಚೆರ್ಚೆಗೆ ಬನ್ನಿ ಇದಕ್ಕೆ ನಮ್ಮ ಕೂಲಿ ನೇಕಾರರ ಬಳಗ ಸಿದ್ಧವಿದೆ. ( ಇದು ಬೆಳಗಾವಿ ದಕ್ಷಿಣ ಮತ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನ )
Posted by Ganapati Sontakki on Monday, May 11, 2020
ನಾನು ವಿಕಲಚೇತನವಾಗಿದ್ದೇನೆ. ಪೊಲೀಸರು ನನ್ನ ವಿಕಲಚೇತನತೆ ಕುರಿತು ನಮ್ಮ ಅಳಿಯನಿಗೆ ಫೋನ್ ಮಾಡಿ ವ್ಯಂಗ್ಯವಾಡಿದ್ದಾರೆ. ಇದರಿಂದ ನನಗೆ ತೀವ್ರ ನೋವಾಗಿದೆ. ಒಟ್ಟಾರೆ ಪೊಲೀಸರು ಶಾಸಕರ ಕುಮ್ಮಕ್ಕಿನಿಂದ ಈ ರೀತಿ ನಿಯಮಬಾಹಿರವಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಪೊಲೀಸ್ ಕಮಿಷನರ್‌ನವರು ಈ ಕುರಿತ ನನಗೆ ಹೆಚ್ಚಿನ ಮಾಹಿತಿಯಿಲ್ಲ. ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಮಾತ್ರ ಯಾವುದೇ ಕೇಸು ಇಲ್ಲದೇ ವಿಚಾರಣೆ ನೆಪದಲ್ಲಿ ಬಡಕಾರ್ಮಿಕರಿಗೆ ತೊಂದರೆ ನೀಡಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಹರಸಾಹಸಪಡುತ್ತಿರುವಾಗಲೇ, ಇಲ್ಲಿರುವ ನೇಕಾರ ಕಾರ್ಮಿಕರು ಸಹ ಸಂಕಷ್ಟ ಒಳಗಾಗಿದ್ದಾರೆ.



ಕರ್ನಾಟಕ ಪೊಲೀಸ್ ರಾಜ್ಯವಾಗುತ್ತಿದೆ.
ನೇಕರರ ಗೋಳು ಕೇಳುವವರಿಲ್ಲ. ಸೀರೆ ನೆಯ್ಯೆದು ಯಲ್ಲರ ಮಾನಾ ಮುಚ್ಹೋ ನೇಕರ್ ಜೀವನವೇ ಅರ್ತ ವಿಲ್ಲದಂತಾಗಿದೆ…?