ಬಳ್ಳಾರಿ | ಬಾಣಂತಿಯರ ಸಾವು : 5 ಲಕ್ಷ ಪರಿಹಾರ, ತನಿಖೆಗೆ ತಂಡ ರಚನೆ

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಹಿನ್ನೆಲೆ, ಔಷಧ ಖರೀದಿ ಮತ್ತು ಪ್ರಯೋಗಾಲಯಗಳಲ್ಲಿ ಔಷಧಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಾಗ ಆಗಿರುವ ಲೋಪಗಳ ಕುರಿತು ತನಿಖೆಗೆ ತಂಡ ರಚಿಸಲಾಗಿದೆ. ಟೆಂಡರ್ ಮೂಲಕ ಔಷಧಗಳ ಖರೀದಿ ಮತ್ತು ಎಂಪ್ಯಾನಲ್ಡ್ ಪ್ರಯೋಗಾಲಯಗಳಲ್ಲಿ ಔಷಧಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಾಗ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್‌) ಆಗಿರುವ ಲೋಪಗಳ ಕುರಿತು ಪರಿಶೀಲಿಸಿ ವರದಿ ನೀಡಲು ಕರ್ನಾಟಕ ಕೌಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ನೇತೃತ್ವದ ಪರಿಶೀಲನಾ ತಂಡವನ್ನು ರಾಜ್ಯ ಸರ್ಕಾರ ರಚಿಸಿದೆ. … Continue reading ಬಳ್ಳಾರಿ | ಬಾಣಂತಿಯರ ಸಾವು : 5 ಲಕ್ಷ ಪರಿಹಾರ, ತನಿಖೆಗೆ ತಂಡ ರಚನೆ